ಪೊನ್ನಂಪೇಟೆ, ಜ. ೧೯: ವಿಧಾನ ಪರಿಷತ್ ಸದಸ್ಯರಾಗಿರುವ ವೀಣಾ ಅಚ್ಚಯ್ಯ ಅವರ ಅನುದಾನದಲ್ಲಿ ಮಾಯಮುಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿರುವ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.
ತಲಾ ರೂ. ೫ ಲಕ್ಷ ವೆಚ್ಚದ ೨ ರಸ್ತೆ ಕಾಮಗಾರಿಗಳಿಗೆ ಪ್ರತ್ಯೇಕವಾಗಿ ನಡೆದ ಕಾರ್ಯಕ್ರಮಗಳಲ್ಲಿ ಪೂಜೆ ಸಲ್ಲಿಸಿ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಮಂಜೂರಾಗಿರುವ ಅನುದಾನದಲ್ಲಿ ಧನುಗಾಲ ಗ್ರಾಮದ ಬಸಪ್ಪ ಕಾಲೋನಿಗೆ ತೆರಳುವ ಮತ್ತು ಮಾಯಮುಡಿ ಗ್ರಾಮದ ಕಲ್ತೋಡು ಪೈಸಾರಿಗೆ ತೆರಳುವ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಧನುಗಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ವೀಣಾ ಅಚ್ಚಯ್ಯ ಅವರು, ಜಿಲ್ಲೆಯಲ್ಲಿ ಇದುವರೆಗೂ ಅಭಿವೃದ್ಧಿ ಕಾಣದ ಬಹಳಷ್ಟು ಗ್ರಾಮೀಣ ರಸ್ತೆಗಳಿವೆ. ತೀರ ಈ ಪೈಕಿ ತೀರಾ ಶೋಚನಿಯ ವಾಗಿರುವ ರಸ್ತೆಗಳನ್ನು ಗುರುತಿಸಿ ಅವುಗಳನ್ನು ಹಂತಹAತವಾಗಿ ಅಭಿವೃದ್ಧಿಪಡಿಸಲು ನನ್ನ ಅವಧಿಯಲ್ಲಿ ಆದ್ಯತೆ ನೀಡಲಾಗಿದೆ. ಈ ಕಾರಣದಿಂದಲೇ ಸರಕಾರದಿಂದ ಬರುವ ಅನುದಾನಗಳ ಪೈಕಿ ಗರಿಷ್ಠ ಮೊತ್ತವನ್ನು ಗ್ರಾಮೀಣ ರಸ್ತೆ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಸುಮಾ ವಸಂತ್, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ, ಮಾಯಮುಡಿ ಗ್ರಾ.ಪಂ. ಅಧ್ಯಕ್ಷೆ ಎಂ.ಪಿ. ಮೀನಾ ಪೀಟರ್, ಉಪಾಧ್ಯಕ್ಷೆ ಸುಮಿತ್ರ ರವಿ, ಸದಸ್ಯರಾದ ಆಪಟ್ಟೀರ ಟಾಟು ಮೊಣ್ಣಪ್ಪ, ಟಿ.ಸಿ. ನಾರಾಯಣ, ಸಿದ್ದಪ್ಪ ಸುಮಿತ್ರಾ ಬಸವಣ್ಣ, ಶಾಂತ, ಹೆಚ್.ಆರ್. ಸುಶೀಲಾ, ಸರಸ್ವತಿ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಕಡೇಮಾಡ ಕುಸುಮ ಜೋಯಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಕೊಳೇರ ಭಾರತಿ, ಜಿ.ಪಂ. ಮಾಜಿ ಸದಸ್ಯೆ ಪಿ.ಬಿ. ಮಂಜುಳಾ, ಮಾಯಮುಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಸಿ.ಕೆ. ಚಿಣ್ಣಪ್ಪ, ಹಿರಿಯ ಕಾಂಗ್ರೆಸ್ ಮುಖಂಡ ಎನ್.ಸಿ. ಪುಟ್ಟರಾಜು, ಎಸ್.ಎಂ. ವಿಶ್ವನಾಥ್, ಪುಚ್ಚಿಮಾಡ ರಾಯ್ ಮಾದಪ್ಪ, ಎ.ಕೆ. ಅರುಣ, ಮಣಿಕುಂಜ್ಹ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.