*ಗೋಣಿಕೊಪ್ಪ, ಜ. ೧೭: ಚರಂಡಿ ಕಟ್ಟಲು ಬಳಸಿದ ಸೈಜ್ ಕಲ್ಲುಗಳನ್ನು ಗುತ್ತಿಗೆದಾರ ತನ್ನ ಸ್ವಂತ ಕಾರ್ಯಕ್ಕೆ ಬಳಸಿಕೊಂಡಿರುವ ಬಗ್ಗೆ ಗ್ರಾಮಸ್ಥರಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಮಚ್ಚಿ ಹಾಡಿಗೆ ಸಂಚರಿಸುವ ಮಾರ್ಗದಲ್ಲಿ ೫ ವರ್ಷಗಳ ಹಿಂದೆ ಪಂಚಾಯತಿ ಅನುದಾನದಲ್ಲಿ ಚರಂಡಿಯನ್ನು ನಿರ್ಮಿಸಲಾಗಿತ್ತು. ಆದರೆ, ಚರಂಡಿ ಅವೈಜ್ಞಾನಿಕವಾಗಿ ಕೂಡಿರುವುದರಿಂದ ಮಳೆಗಾಲದಲ್ಲಿ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಇರುವುದರಿಂದ ಐದು ವರ್ಷಗಳ ನಂತರ ಮತ್ತೆ ನೂತನ ಚರಂಡಿಗೆ ಪಂಚಾಯಿತಿಯಿAದ ೨ ಲಕ್ಷದ ೩೦ ಸಾವಿರ ಅನುದಾನವನ್ನು ಮೀಸಲಿಟ್ಟಿತ್ತು.

ಗುತ್ತಿಗೆದಾರನೊಬ್ಬ ಚರಂಡಿ ಕಾಮಗಾರಿಗೆ ಗುತ್ತಿಗೆಯನ್ನು ಪಡೆದುಕೊಂಡು ಚರಂಡಿ ನಿರ್ಮಾಣಕ್ಕೆ ಮುಂದಾದರು. ಆದರೆ, ಈ ಹಿಂದೆ ನಿರ್ಮಿಸಿದ ಚರಂಡಿಗೆ ಬಳಸಿರುವಂತಹ ಸೈಜ್ ಕಲ್ಲುಗಳನ್ನು ಪಂಚಾಯಿತಿ ಸುಪರ್ಧಿಗೆ ಒಪ್ಪಿಸದೆ ತನ್ನ ಸ್ವಂತ ಕಾರ್ಯಕ್ಕೆ ಬಳಸಿಕೊಂಡಿರುವ ಬಗ್ಗೆ ಆರೋಪ ಕೇಳಿಬಂದಿದೆ.

ಗುತ್ತಿಗೆದಾರ ಸುಮಾರು ಮೂರಕ್ಕೂ ಹೆಚ್ಚು ಟಿಪ್ಪರ್‌ಗಳಲ್ಲಿ ಸೈಜು ಕಲ್ಲುಗಳನ್ನು *ಗೋಣಿಕೊಪ್ಪ, ಜ. ೧೭: ಚರಂಡಿ ಕಟ್ಟಲು ಬಳಸಿದ ಸೈಜ್ ಕಲ್ಲುಗಳನ್ನು ಗುತ್ತಿಗೆದಾರ ತನ್ನ ಸ್ವಂತ ಕಾರ್ಯಕ್ಕೆ ಬಳಸಿಕೊಂಡಿರುವ ಬಗ್ಗೆ ಗ್ರಾಮಸ್ಥರಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.