ವೀರಾಜಪೇಟೆ, ಜ. ೧೭: ನಗರದ ಶಿವಕೇರಿ ಸ್ಮಶಾನದ ಒತ್ತುವರಿ ಜಾಗ ತೆರವು ಮಾಡಿಕೊಡುವಂತೆ ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲಾಯಿತು.
ನಗರದ ತಹಶೀಲ್ದಾರ್ ಕಚೇರಿ ಎದುರು ಜಮಾಯಿಸಿದ ಶಿವಕೇರಿ ಗ್ರಾಮಸ್ಥರು ತಲತಲಾಂತರದಿAದ ಶಿವಕೇರಿಯ ಸ್ಥಿರಾಸ್ತಿಯನ್ನು ಸ್ಮಶಾನ ಜಾಗವಾಗಿ ಉಪಯೋಗಿಸುತ್ತಾ ಬಂದಿದ್ದೇವೆ. ಅಲ್ಲದೇ ಹಲವು ಕುಟುಂಬಗಳು ಈ ಸ್ಮಶಾನದ ಬಳಕೆ ಮಾಡುತ್ತಿವೆ.
ಈ ಜಾಗ ದಾನವಾಗಿ ಬಂದಿದೆ. ಆದರೆ ಇತ್ತೀಚೆಗೆ ಶಿವಕೇರಿಯ ಕುಟುಂಬವೊAದು ಆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ನಕಲಿ ದಾಖಲೆ ಸೃಷ್ಟಿ ಮಾಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಬಳಿಕ ಈ ಕೃತ್ಯದ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ದೂರಿದರು.
ಈ ಬಗ್ಗೆ ಆಗ್ಗಿಂದಾಗ್ಗೆ ಕೇರಿಯಲ್ಲಿ ಕಲಹಗಳು ನಡೆಯುತ್ತಿವೆ. ಈ ಸಂಬAಧ ಕಾನೂನು ಕ್ರಮ ಜರುಗಿಸಿ ಒತ್ತುವರಿ ತೆರವು ಮಾಡಿಕೊಡುವಂತೆ ಶಿವಕೇರಿಯ ನಿವಾಸಿಗಳು ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಉಪ ತಹಶೀಲ್ದಾರ್ ಪೊನ್ನು ಅವರಿಗೆ ಮನವಿ ಸಲ್ಲಿಸಿದರು. ಒಂದು ವೇಳೆ ತಹಶೀಲ್ದಾರ್ ಈ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸದೇ ಇದ್ದಲ್ಲಿ ತಹಶೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸತೀಶ್, ಶಿವಕೇರಿಯ ಗ್ರಾಮಸ್ಥರು ಹಾಜರಿದ್ದರು.