ವೀರಾಜಪೇಟೆ, ಜ. ೧೭: ವೀರಾಜಪೇಟೆ ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ವಿರುದ್ಧ ಎಸ್.ಸಿ, ಎಸ್.ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆೆ.
ತಾ. ೯ ರಂದು ಶಿವಕೇರಿಯ ಸ್ಮಶಾನದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಮಂಜೂರಾಗಿದ್ದ ರಸ್ತೆ ಕಾಮಗಾರಿಯಲ್ಲಿ ಗ್ರಾಮಸ್ಥರೊಂದಿಗೆ ತೊಡಗಿದ್ದ ಪ.ಪಂ ಸದಸ್ಯೆ ಪೂರ್ಣಿಮಾ ಅವರ ಪತಿ ಸುಚೇಂದ್ರನ ವಿರುದ್ಧ ಸ್ಥಳಕ್ಕೆ ಬಂದ ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಸುನಿತಾ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪದಡಿ ಎಸ್.ಸಿ, ಎಸ್.ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ತಾ. ೧೨ ರಂದು ಪ್ರಕರಣ ದಾಖಲಾಗಿದೆ.
ತಾ. ೧೩ ರಂದು ರಾತ್ರಿ ೭.೪೫ಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶ್ಮಿತಾ ಟಿ.ಆರ್ ಅವರು ಸುಚೇಂದ್ರ ಹಾಗೂ ಅವರ ಸಹೋದರ ಗಜೇಂದ್ರ ಅವರುಗಳ ವಿರುದ್ಧ ದೂರು ನೀಡಿದ್ದು, ಮೊಕದ್ದಮೆ ದಾಖಲಾಗಿದೆ. -ಉಷಾ ಪ್ರೀತಂ