ಗೋಣಿಕೊಪ್ಪಲು, ಜ. ೧೭: ನಗರದಲ್ಲಿ ಗೂಳಿಗಳ ಮೇಲೆ ವ್ಯಾಘ್ರ ದಾಳಿ ನಡೆಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಸ್ಥಳದಲ್ಲಿ ಹುಲಿಯ ಸೆರೆಗೆ ಅಳವಡಿಸಿರುವ ಬೋನಿನ ಬಳಿ ಹುಲಿಯು ಸುಳಿಯಲಿಲ್ಲ. ಗೂಳಿಗಳ ಮೇಲೆ ದಾಳಿ ನಡೆಸಿದ ಗೋಣಿಕೊಪ್ಪಲುವಿನ ಕುಪ್ಪಂಡ ಸಂಜು ರವರ ಮನೆಯ ಬಳಿಯಿರುವ ಗದ್ದೆಯ ಸಮೀಪದಲ್ಲಿ ಅರಣ್ಯ ಸಿಬ್ಬಂದಿಗಳು ಬೋನನ್ನು ಅಳವಡಿಸಿ ಹುಲಿಯ ಸುಳಿವಿಗಾಗಿ ರಾತ್ರಿಯಿಡೀ ಪಹರೆ ನಡೆಸಿದ್ದರು ಆದರೆ ಹುಲಿ ಸುಳಿವು ಲಭ್ಯವಾಗಲಿಲ್ಲ.

ತಿತಿಮತಿ ವಲಯದ ಎಸಿಎಫ್ ಉತ್ತಪ್ಪ ನಾಗರಹೊಳೆ ರಾಷ್ಟಿçÃಯ ಉದ್ಯಾನದ ಎಸಿಎಫ್ ಗೋಪಾಲ್, ತಿತಿಮತಿ ಆರ್‌ಎಫ್‌ಒ ಅಶೋಕ್ ಹುನಗುಂದ ಪೊನ್ನಂಪೇಟೆ ಆರ್. ಎಫ್.ಒ. ದಿವಾಕರ್ ಹಾಗೂ ಆರ್.ಆರ್.ಟಿ. ತಂಡ ದಿನಪೂರ್ತಿ ಹುಲಿಯ ಕಾರ್ಯಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸ್ಥಳದಲ್ಲಿ ಬೋನನ್ನು ಅಳವಡಿಸಿ ಅದರ ಸುತ್ತಲೂ ಕ್ಯಾಮರಾ ಅಳವಡಿಸಿ ಹುಲಿಯ ಚಲನವಲನಗಳನ್ನು ಗಮನಿಸುವ ಪ್ರಯತ್ನ ನಡೆಸಿದರು. ಆದರೆ ಯಾವುದೇ ಸಫಲತೆ ದೊರೆಯಲಿಲ್ಲ.

ಗೂಳಿಗಳ ಮಾಲೀಕರಾದ ಕುಪ್ಪಂಡ ಸಂಜು ಇನ್ನುಳಿದ ಜಾನುವಾರುಗಳ ಮೇಲೆ ಹುಲಿಯು ದಾಳಿ ನಡೆಸಬಹುದು ಎಂಬ ಕಾರಣದಿಂದ ಇವರ ಕೊಟ್ಟಿಗೆಯ ಸಮೀಪ ರಾತ್ರಿ ಪಹರೆ ಕಾರ್ಯ ನಡೆಸಿದರು. ಹುಲಿಯ ದಾಳಿಯಿಂದ ಗಂಭೀರ ಸ್ವರೂಪದ ಗಾಯದಿಂದ ಎರಡು ಗೂಳಿಗಳು ತೀವ್ರ ಸ್ವರೂಪದ ಜ್ವರದಿಂದ ನರಳುತ್ತಿವೆ.

ಪಶುವೈದ್ಯ ಅಧಿಕಾರಿಗಳಾದ ಡಾ.ಭವಿಷ್ಯ ಕುಮಾರ್ ಗೂಳಿಗಳನ್ನು ಪರೀಕ್ಷಿಸಿ ಔಷಧಗಳನ್ನು ನೀಡಿದ್ದಾರೆ. ಸುತ್ತಮುತ್ತಲಿನಲ್ಲಿರುವ ರೈತರ ಮನೆಯ ಬಳಿ ಹುಲಿಯು ಬರಬ ಹುದು ಎಂಬ ಆತಂಕ ಮನೆಮಾಡಿದೆ. ತೂಚಮಕೇರಿ ಶಾಲೆಯ ಬಳಿಯಲ್ಲಿ ಕಳೆದ ಏಳು ದಿನಗಳಿಂದ ಬೀಡು ಬಿಟ್ಟಿರುವ ಹುಲಿ ಕಾರ್ಯಚರಣೆ ತಂಡ ಸೋಮವಾರ ಕೂಡ ಕಾರ್ಯಾಚರಣೆ ಮುಂದುವರಿಸಿದೆ, ಆದರೆ ಹುಲಿಯ ಸುಳಿವು ಮಾತ್ರ ಇನ್ನೂ ಕಂಡುಬAದಿಲ್ಲ.

ಸ್ಥಳದಲ್ಲಿ ಎಸಿಎಪ್ ಉತ್ತಪ್ಪ, ನಾಗರಹೊಳೆ ಎಸಿಎಪ್ ಗೋಪಾಲ್, ತಿತಿಮತಿ ಆರ್‌ಎಫ್‌ಒ ಅಶೋಕ್ ಹುನಗುಂದ, ಪೊನ್ನಂಪೇಟೆ ಆರ್.ಎಪ್.ಒ. ರಾಜಪ್ಪ, ದಿವಾಕರ್ ಸೇರಿದಂತೆ ಹಲವು ಅಧಿಕಾರಿಗಳು ಮೊಕಾಂ ಹೂಡಿದ್ದಾರೆ.

- ಹೆಚ್.ಕೆ.ಜಗದೀಶ್