ಶನಿವಾರಸಂತೆ : ಪಟ್ಟಣದ ಜನತೆ ಶನಿವಾರ ಮಕರ ಸಂಕ್ರಾAತಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಸರಳವಾಗಿ ಆಚರಿಸಿದರು. ಸೂರ್ಯ ಪಥ ಬದಲಾಯಿಸುವ ದಿನವಾಗಿದ್ದು ಸೂರ್ಯ ನಮಸ್ಕಾರದೊಂದಿಗೆ ಜನ ಇಷ್ಟ ದೇವರುಗಳನ್ನು ಪೂಜಿಸಿದರು. ಪಟ್ಟಣದ ಶ್ರೀ ಚಂದ್ರಮೌಳೇಶ್ವರ ಪಾರ್ವತಿ-ಗಣಪತಿ ದೇವಾಲಯ, ಬೀರಲಿಂಗೇಶ್ವರ ಗುಡಿ, ರಾಮ ಮಂದಿರ, ವಿಜಯ ವಿನಾಯಕ ದೇವಸ್ಥಾನ, ಶ್ರೀ ಚಾಮುಂಡೇಶ್ವರಿ ಬನದಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.
ವಾರಾಂತ್ಯ ಕರ್ಫ್ಯೂ ಹಿನ್ನೆಲೆ ಭಕ್ತರು ವಿರಳ ಸಂಖ್ಯೆಯಲ್ಲಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು. ಮನೆಮನೆಗಳಲ್ಲೂ ಪೊಂಗಲ್, ಪಾಯಸದ ಅಡುಗೆ ಘಮಘಮಿಸಿತು. ಸಂಜೆ ಮಹಿಳೆಯರು, ಹೆಣ್ಣು ಮಕ್ಕಳು ನೂತನ ವಸ್ತç ಧರಿಸಿ ಸ್ನೇಹಿತರು, ಬಂಧುಗಳ ಮನೆಗೆ ತೆರಳಿ ಎಳ್ಳು-ಬೆಲ್ಲ ಹಂಚಿ. ಒಳ್ಳೆಯ ಮಾತನಾಡುವಂತೆ ಹೇಳಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ವರ್ಷದ ಮೊದಲ ಸುಗ್ಗಿ ಹಬ್ಬವಾಗಿದ್ದು ಸುತ್ತಮುತ್ತಲ ಹಳ್ಳಿಗಳಲ್ಲಿ ರೈತರು ಗೋಪೂಜೆ ಮಾಡಿ, ಕಣಜ ತುಂಬಿದ ದವಸಧಾನ್ಯಗಳಿಗೆ ಪೂಜೆ ಸಲ್ಲಿಸಿ ಹಬ್ಬವನ್ನಾಚರಿಸಿದರು.ಸೋಮವಾರಪೇಟೆ : ಸಂಕ್ರಾAತಿ ಹಬ್ಬದಾಚರಣೆಯಂದು ಶ್ರೀ ಕುಮಾರಲಿಂಗೇಶ್ವರ ಜಾತ್ರೆ ಹಾಗೂ ರಥೋತ್ಸವ ಹಿನ್ನೆಲೆ ಸಮೀಪದ ಕೂತಿ ಗ್ರಾಮದ ಸಬ್ಬಮ್ಮ ದೇವರ ಕೆರೆಯಲ್ಲಿ ವಿಶೇಷ ಪೂಜೆ ನಡೆಯಿತು. ಅನಾದಿಕಾಲದಿಂದಲೂ ನಡೆದುಕೊಂಡು ಬಂದAತೆ ದೇವರಕಟ್ಟೆಯಲ್ಲಿ ಗ್ರಾಮದ ಒಕ್ಕಲಿಗ ಮನೆತನದ ಎಣಿಗೆ (ದೇವರ ಪಟ್ಟ, ಕಳಸ, ಹಣ್ಣುಕಾಯಿ ಇತರೆ ಪದಾರ್ಥಗಳು) ತಂದಿಟ್ಟು ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಗುತ್ತಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಗ್ರಾಮದ ಸುಗ್ಗಿ ಕಟ್ಟೆಯನ್ನು ನವೀಕರಣ ಮಾಡುತ್ತಿರುವ ಹಿನ್ನೆಲೆ ಗ್ರಾಮದ ದೇವರ ಕೆರೆಯಲ್ಲಿ ಪೂಜೆ ಸಲ್ಲಿಸಲಾಯಿತು. ನಂತರ ಎಣಿಗೆ ಹೊತ್ತ ಮಹಿಳೆಯರು ಹಾಗೂ ಗ್ರಾಮಸ್ಥರು ಸಮೀಪದ ಶಾಂತಳ್ಳಿಯ ಕುಮಾರಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದರು. ಈ ಸಂದರ್ಭ ಗ್ರಾಮಾಧ್ಯಕ್ಷ ಹೆಚ್. ಡಿ. ಮೋಹನ್, ಕಾರ್ಯದರ್ಶಿ ವಿನೋದ್ ಕುಮಾರ್, ಖಜಾಂಚಿ ಕಿಶನ್, ಗಣೇಶ್, ಗಿರೀಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಕೂಡಿಗೆ : ಬ್ಯಾಡಗೊಟ್ಟದ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿ ಮಕರ ಸಂಕ್ರಾAತಿ ಅಂಗವಾಗಿ ಗಣಪತಿ ಹೋಮ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ಶದ್ಧಾಭಕ್ತಿಯಿಂದ ನಡೆಯಿತು. ವನವಾಸಿ ಕಲ್ಯಾಣ ಮತ್ತು ಕೇಂದ್ರದ ನಿವಾಸಿಗಳಿಂದ ನಡೆದ ಪೂಜೋತ್ಸವದಲ್ಲಿ ಸಿದ್ದಲಿಂಗಪುರದ ಮಂಜುನಾಥ ದೇವಾಲಯದ ರಾಜೇಶ್ನಾಥ್ ಹಾಗೂ ಪರಮೇಶ್ವರ್ ಭಟ್ ಪೂಜಾ ವಿಧಿ ವಿಧಾನ ನೆರವೇರಿಸಿದರು. ಸ್ಥಳೀಯ ಹಾರಂಗಿ ನದಿಯಿಂದ ಕಳಸ ಹೊತ್ತ ಮಹಿಳೆಯರು ಬ್ಯಾಡಗೊಟ್ಟ ಕೇಂದ್ರದವರೆಗೆ ಚಂಡೆವಾದ್ಯ ಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಸಾಗಿಬಂದರು. ವಿಶೇಷ ಪೂಜೆ, ಮಹಾಮಂಗಳಾರತಿ ಮಧ್ಯಾಹ್ನ ಪ್ರಸಾದ ವಿತರಣೆ ಹಾಗೂ ಅನ್ನದಾನ ನೆರವೇರಿಸಲಾಯಿತು. ಈ ಸಂದರ್ಭ ವನವಾಸಿ ಕಲ್ಯಾಣ ರಾಜ್ಯ ಅಧ್ಯಕ್ಷÀ ಚಕ್ಕೇರ ಮನು ಕಾವೇರಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹರೀಶ್, ಶಿಬಿರದ ಪ್ರಮುಖರಾದ ಮುತ್ತಣ್ಣ, ಮಂಜೇಶ್, ಸಿದ್ದಣ್ಣ, ಮಣಿ ಮತ್ತಿತರರು ಇದ್ದರು.ಕುಶಾಲನಗರ : ಇಲ್ಲಿಗೆ ಸಮೀಪದ ಹಾರಂಗಿ ರಸ್ತೆಯ ಚಿಕ್ಕತ್ತೂರು ಗ್ರಾಮಕ್ಕೆ ಸ್ಥಳಾಂತರಗೊAಡಿರುವ ಶ್ರೀಕೃಷ್ಣ ಗೋಶಾಲೆಯಲ್ಲಿ ಗೋವುಗಳಿಗೆ ಪೊಜೆ ನಡೆಯಿತು. ಕಾರ್ಯಕ್ರಮದಲ್ಲಿ ಗೋವುಗಳಿಗೆ ಹೂವಿನ ಸಿಂಗಾರ ದೊಂದಿಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಗೋ ಶಾಲೆಯ ಸಂಸ್ಥಾಪಕ ಹರೀಶ್ ಆಚಾರ್ಯ ಮತ್ತು ಟ್ರಸ್ಟಿಗಳ ಉಪಸ್ಥಿತಿಯಲ್ಲಿ ಅರ್ಚಕರಾದ ಪುರುಷೋತ್ತಮ ಭಟ್ ಅವರು ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಹರೀಶ್ ಆಚಾರ್ಯ, ಮಕರ ಸಂಕ್ರಮಣ ಸಂದರ್ಭ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇತ್ತೀಚೆಗಷ್ಟೇ ಚೆಟ್ಟಿಮಾನಿ ಬಳಿಯಿಂದ ಸ್ಥಳಾಂತರಗೊAಡಿರುವ ಗೋಶಾಲೆಯಲ್ಲಿ ೨೫ಕ್ಕೂ ಗೋವುಗಳು ಇರುವ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಟ್ರಸ್ಟಿಗಳಾದ ಶೋಭಾ ರಾಧಾಕೃಷ್ಣ, ಸುಮಾ ಗೋವಿಂದರಾಜು, ಒಬ್ಬಳ್ ರೆಡ್ಡಿ, ಮುನಿಸ್ವಾಮಿ, ವಸಂತ್ ಕುಮಾರ್ ಮತ್ತು ಸ್ಥಳೀಯ ಗ್ರಾಮ ವಿಕಾಸ ಸಮಿತಿಯ ಪ್ರಮುಖರು ಇದ್ದರು. ಮೇಕೇರಿ: ಮಡಿಕೇರಿ, ಸಂಕ್ರಾAತಿ ಉತ್ಸವವನ್ನು ಮೇಕೇರಿಯ ಆರ್.ಎಸ್.ಎಸ್. ಮೃತ್ಯುಂಜಯ ಶಾಖೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಕ್ರಾAತಿಯ ಮಹತ್ವವನ್ನು ವಿವರಿಸಿದ ಸ್ವಯಂ ಸೇವಕ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಲಿಖಿತ್ ಸೂರ್ಯನು ಮಕರರಾಶಿಯನ್ನು ಪ್ರವೇಶಿಸುವ ಈ ದಿನದಿಂದ ಪ್ರಕೃತಿಯಲ್ಲಿ ಹಲವು ಬದಲಾವಣೆಗಳು ಘಟಿಸುತ್ತವೆ. ಇಂದಿನಿAದ ಚಳಿ ಕಡಿಮೆಯಾಗಿ ಸೂರ್ಯನು ಹೆಚ್ಚು ಹೆಚ್ಚು ಪ್ರಜ್ವಲಿಸುತ್ತಾನೆ. ಬಿಸಿಲು ಅಧಿಕವಾಗುತ್ತಾ ಸಾಗುತ್ತದೆ.
ಅದೇ ರೀತಿ ಸಕಲ ಜೀವರಾಶಿಗಳು ತಮ್ಮ ತಮ್ಮ ಜೀವನದಲ್ಲಿ ಪ್ರಜ್ವಲಿಸುತ್ತಾ ಸಧೃಡ ಸಮಾಜವನ್ನು ಕಟ್ಟುತ್ತಾ ದೇಶವನ್ನು ಪರಮವೈಭವ ಸ್ಥಿತಿಗೆ ಕೊಂಡೊಯ್ಯುವAತಾಗ ಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ|| ಮೇಚಿರ ಸುಭಾಶ್ ನಾಣಯ್ಯ ಮಕ್ಕಳಿಗೆ ಚಿಕ್ಕಂದಿನಿAದಲೇ ಪೋಷಕರು ಸಂಸ್ಕಾರವನ್ನು ಕಲಿಸಿಕೊಡುವ ಮೂಲಕ ತಮ್ಮ ಮಕ್ಕಳನ್ನು ಸತಜೆಗಳಾಗಿ ರೂಪಿಸಬೇಕಾದ ಜವಾಬ್ದಾರಿ ಪೋಷಕರಿಗಿದು,್ದ ಆ ಕೆಲಸವನ್ನು ಸರಿಯಾಗಿ ಪೋಷಕರು ನಿರ್ವಹಿಸಿದ್ದಲ್ಲಿ ಮುಂದೆ ತಮ್ಮ ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಗುರುತಿಸಿಕೊಳ್ಳುತ್ತಾರೆ ಎಂದರು. ಸಂಕ್ರಾAತಿ ಉತ್ಸವದಲ್ಲಿ ಸಂಘದ ವಿವಿದ ಕ್ಷೇತ್ರಗಳ ಸ್ವಯಂಸೇವಕರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. ಕೂಡಿಗೆ ವ್ಯಾಪ್ತಿಯಲ್ಲಿ
ಕೂಡಿಗೆ : ಕೂಡಿಗೆ, ಹೆಬ್ಬಾಲೆ, ಶಿರಂಗಾಲ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಆಯಾ ವ್ಯಾಪ್ತಿಯ ಗ್ರಾಮದ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಮಕರ ಸಂಕ್ರಾAತಿ ಹಬ್ಬವನ್ನು ಆಚರಣೆ ಮಾಡಿದರು. ಈ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ರೈತರು ತಾವು ಸಾಗಿದ ಹಸು ಮತ್ತು ಎತ್ತುಗಳ ಮೈ ತೊಳೆದು ಅವುಗಳನ್ನು ಸಿಂಗಾರ ಮಾಡಿ ಪೂಜೆ ಮಾಡಿದರು. ಅಲ್ಲದೆ ಗ್ರಾಮದ ಪುಟ್ಟ ಮಕ್ಕಳು ಹೊಸ ಬಟ್ಟೆಗಳನ್ನು ಧರಿಸಿ ಗ್ರಾಮದ ಮನೆ-ಮನೆಗೆ ತೆರಳಿ ಅರಿಶಿಣ ಕುಂಕುಮ ನೀಡಿ ಬೆಲ್ಲ ಮತ್ತು ಸಿಹಿ ನೀಡಿ, ಆಶೀರ್ವಾದ ಪಡೆದರು. ಪುದುಪಾಡಿ ಅಯ್ಯಪ್ಪ ದೇವಾಲಯ
ವೀರಾಜಪೇಟೆ: ಸಮೀಪದ ಬೇಟೋಳಿ ಗ್ರಾಮದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾAತಿಯ ಪ್ರಯುಕ್ತ ಅಯ್ಯಪ್ಪ ದೇವರ ಮಹೋತ್ಸವ ಭಕ್ತಿಭಾವದಿಂದ ಜರುಗಿತು.
ದೇವತಾ ಪ್ರಾರ್ಥನೆಯನ್ನು ಮಾಡುವುದರೊಂದಿಗೆ ಶ್ರೀ ಗಣಪತಿ ಪೂಜೆ ಹಾಗೂ ಶ್ರೀ ಗಣಪತಿ ಹವನವನ್ನು ನಡೆಸಲಾಯಿತು. ಆ ಬಳಿಕ ಧರ್ಮಶಾಸ್ತನಿಗೆ ಪಂಚಾಮೃತ ಅಭಿಷೇಕವು ನೆರವೇರಿತು. ದೇವಸ್ಥಾನದ ನೂತನ ಪಾಕ ಶಾಲೆಗೆ ಶಂಕುಸ್ಥಾಪನೆಯನ್ನು ಸಹ ಈ ಸಂದರ್ಭದಲ್ಲಿ ನೆರವೇರಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ಬಿ. ಜಿ. ನಂದ ಶಂಕುಸ್ಥಾಪನೆಯನ್ನು ನೆರವೇರಿಸಿದರು. ಅಯ್ಯಪ್ಪ ವೃತಾಧಾರಿಗಳಿಂದ ಭಜನೆ ನಡೆದು ಮಕರ ಜ್ಯೋತಿಯ ಪೂಜೆಯನ್ನು ಮಾಡಲಾಯಿತು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೇಟೋಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ.ಮಣಿ ಭಾಗವಹಿಸಿದ್ದರು. ಜಾದೂಗಾರ ವಿಕ್ರಮ್ ಶೆಟ್ಟಿ ಜಾದೂ ಪ್ರದರ್ಶಿಸಿದರು. ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಅಲಂಕೃತ ಮಾಡಲಾಗಿತ್ತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಬಿ. ಬಿ. ರಾಮಕೃಷ್ಣ, ಕಾರ್ಯದರ್ಶಿ ಸುಮನ ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ದೇವಸ್ಥಾನದ ಅರ್ಚಕರಾದ ವಿಶ್ವನಾಥ್ ಭಟ್ ಹಾಗೂ ವಾಮನಮೂರ್ತಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಾಗೂ ಸಮೀಪ ಗ್ರಾಮದ ಭಕ್ತರು ಉಪಸ್ಥಿತರಿದ್ದರು.
ಚೆಟ್ಟಳ್ಳಿಯಲ್ಲಿ ಪೂಜೆ
ಚೆಟ್ಟಳ್ಳಿ: ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಿAದ, ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ನೇತೃತ್ವದಲ್ಲಿ ಮಕರ ಸಂಕ್ರಾAತಿ ಪ್ರಯುಕ್ತ, ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪ್ರತಿಷ್ಠಾಪನೆ ಮಾಡಿರುವ ಶ್ರೀ ಪಶುಪತಿನಾಥನಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಸಂದರ್ಭ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ವ್ಯವಸ್ಥಾಪಕರಾದ ನಂದಿನಿ, ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ನೊಕ್ಯ ಗ್ರಾಮ
ಗೋಣಿಕೊಪ್ಪ : ಮಕರ ಸಂಕ್ರಾAತಿ ಹಿನ್ನೆಲೆ, ನೊಕ್ಯ ಗ್ರಾಮದಲ್ಲಿರುವ ಶ್ರೀ ಕೃಷ್ಣ ಬಲರಾಮ ದೇವಸ್ಥಾನದಲ್ಲಿ ಹಸುವನ್ನು ಕಿಚ್ಚು ಹಾಯಿಸುವ ಆಚರಣೆ ನಡೆಸಲಾಯಿತು. ಸ್ಥಳೀಯ ಭಕ್ತರು ಪಾಲ್ಗೊಂಡರು.