ಕುಡೆಕಲ್ ಸಂತೋಷ್ ಮಡಿಕೇರಿ, ಜ. ೧೭: ಕಣ್ಣು ಹಾಯಿಸಿದಷ್ಟಗಲ-ನೋಡಿದಷ್ಟು ದೂರಕ್ಕೆ ಮನೆಗಳು ರಾರಾಜಿಸುತ್ತವೆ., ಭಾರೀ ಅಗಲದ ಕಾಂಕ್ರಿಟ್ ಜೋಡಿ ರಸ್ತೆಗಳಿರುವ ಈ ಪ್ರದೇಶವನ್ನೊಮ್ಮೆ ನೋಡಿದರೆ ಬೆಂಗಳೂರು ಮಹಾನಗರಿಯ ಎಂ.ಜಿ. ರಸ್ತೆಯನ್ನು ನೋಡಿದಂತೆ ಭಾಸವಾಗುತ್ತದೆ., ಸೋಮವಾರಪೇಟೆ ರಸ್ತೆಯ ಹಾಲೇರಿ ಬಳಿಯಿಂದಲೇ ಕಣ್ಣಿಗೆ ರಾಚುವ ಪ್ರದೇಶ ನೋಡಲು ಬಲು ಸುಂದರವಾಗಿದೆ., ನೂರಾರು ಮನೆಗಳು ಒಂದೇ ಕಡೆಯಿದ್ದು, ಮಹಾನಗರಗಳ ಪ್ರತಿಷ್ಠಿತ ಬಡಾವಣೆಗಳಂತೆ ಗೋಚರಿಸುತ್ತದೆ..,!

ಆದರೆ.., ‘ದೂರದ ಬೆಟ್ಟ ನೋಡಲು ನುಣ್ಣಗೆ.,’ ಎಂಬAತೆ ಇಲ್ಲಿಯೂ ನೋಡಲು ಮಾತ್ರ ಸುಂದರ..! ಬಡಾವಣೆಯ ಒಳ ಹೊಕ್ಕು ನೋಡಿದರೆ ನೈಜ ಪರಿಸ್ಥಿತಿಯ ಅನಾವರಣವಾಗುತ್ತದೆ., ಭೂಕುಸಿತದಲ್ಲಿ ಸಂತ್ರಸ್ತರಾದವರಿಗಾಗಿ ಸರಕಾರ ಜಂಬೂರುವಿನಲ್ಲಿ ಮನೆಗಳನ್ನು ನಿರ್ಮಿಸಿ ಕೊಟ್ಟಿರುವ ನಿರಾಶ್ರಿತರ ಬಡಾವಣೆ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದು ಮಲಗಿದೆ..!

೨೦೧೮ರಲ್ಲಿ ಮಡಿಕೇರಿ ತಾಲೂಕಿನ ಹಾಗೂ ಸೋಮವಾರಪೇಟೆ ತಾಲೂಕಿನ ಕೆಲವು ಭಾಗಗಳಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಜಲಪ್ರಳಯದಲ್ಲಿ ನೂರಾರು ಮಂದಿ ತೋಟ, ಮನೆ, ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರು. ಸಂತ್ರಸ್ತರ ನೆರವಿಗೆ ಸಹಸ್ರಾರು ಸಂಖ್ಯೆಯಲ್ಲಿ ದಾನಿಗಳು ನೆರವಿಗೆ ಬಂದರು. ದಾನಿಗಳ ನೆರವಿನೊಂದಿಗೆ ಆಗಿನ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಕೂಡ ಕೈಜೋಡಿಸಿ ಪರಿಹಾರ ನೀಡಿತ್ತಲ್ಲದೆ, ಮನೆ ಕಳೆದುಕೊಂಡವರಿಗೆ ರೂ.೧೦ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವ ಯೋಜನೆ ರೂಪಿಸಿತು. ಅದರಂತೆ ಸೋಮವಾರಪೇಟೆ ತಾಲೂಕಿನ ಮಾದಾಪುರ ಬಳಿಯ ಜಂಬೂರು ಬಾಣೆಯಲ್ಲಿ ತೋಟಗಾರಿಕಾ ಇಲಾಖೆಗೆ ಸೇರಿದ ಜಾಗವನ್ನು ಗುರುತಿಸಿ ಅಲ್ಲಿ ೩೮೩ ಮನೆಗಳನ್ನು ನಿರ್ಮಿಸಲಾಯಿತು. ಇನ್ನುಳಿದ ಸಂತ್ರಸ್ತರಿಗೆ ಕರ್ಣಂಗೇರಿ, ಗೋಳಿಕಟ್ಟೆ, ಬಿಳಿಗೇರಿ, ಗಾಳಿಬೀಡು, ಕೆ.ನಿಡುಗಣೆ ಮುಂತಾದೆಡೆ ಮನೆಗಳನ್ನು ನಿರ್ಮಿಸಲಾಗಿದೆ. ಜಂಬೂರುವಿನಲ್ಲಿ ನಿರ್ಮಿಸಲಾಗಿರುವ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗಿದ್ದು, ವರ್ಷ ಕಳೆಯುವದರೊಳಗಡೆ ಮನೆಗಳ ಅಸಲಿಯತ್ತು ಹೊರಗೆ ಬರುತ್ತಿದೆ. ಕಾಟಾಚಾರದ ಕಳಪೆ ಕಾಮಗಾರಿಗಳಿಗೆ ಈ ಮನೆಗಳು ಸಾಕ್ಷಿಯಾಗಿವೆ..!

ಟೈಲ್ಸ್ಗಳು ಕಿತ್ತು ಬರುತ್ತಿವೆ..!

೨೦೧೮ರ ಆಗಸ್ಟ್ ತಿಂಗಳಲ್ಲಿ ಭೂಕುಸಿತ ಸಂಭವಿಸಿದ್ದು, ಸಂತ್ರಸ್ತರಿಗಾಗಿ ಮನೆಗಳ ನಿರ್ಮಾಣ ಕಾರ್ಯ ಆರಂಭಗೊAಡವು. ಆದರೆ, ೨೦೧೯ ಕಳೆದರೂ ಯಾರಿಗೂ ಮನೆ ಸಿಗಲಿಲ್ಲ. ಈ ಸಂದರ್ಭದಲ್ಲಿ ಸರಕಾರ ಮನೆ ಕಳೆದುಕೊಂಡ ಸಂತ್ರಸ್ತರಿಗೆ ೧೦ ತಿಂಗಳ ಮನೆ ಬಾಡಿಗೆ ಪಾವತಿ ಮಾಡಿತು. ೨೦೨೦ ಬಂದರೂ ಮನೆಗಳ ನಿರ್ಮಾಣ ಹಾಗೂ ಹಸ್ತಾಂತರ ಆಗದೇ ಇದ್ದುದರಿಂದ ಸಂತ್ರಸ್ತರು ಬೀದಿಗಿಳಿದು ಹೋರಾಟ ಆರಂಭಿಸಿದ ಬಳಿಕ ಮನೆಗಳನ್ನು ಹಸ್ತಾಂತರಿಸಲಾಯಿತು. ಲಾಟರಿ ಮೂಲಕ ಹಸ್ತಾಂತರಿಸಲಾದ ಮನೆಗಳಲ್ಲಿ ನಿರಾಶ್ರಿತರು ನೆಲೆ ಕಂಡು ಕೊಂಡರು. ಆರಂಭದಿAದಲೇ ನೀರು, ಚರಂಡಿ ಅವ್ಯವಸ್ಥೆಗಳ ಬಗ್ಗೆ ಅಸಮಾಧಾನಗಳು ಕೇಳಿ ಬರುತ್ತಲೇ ಇವೆ. ಆದರೀಗ ಒಂದು ಮಳೆಗಾಲ ಕಳೆಯುತ್ತಿರು ವಂತೆಯೇ ಇನ್ನಿತರ ಸಮಸ್ಯೆಗಳೂ ಕಳಚಿಕೊಳ್ಳುತ್ತಿವೆ.

ಮಳೆಗಾಲದಲ್ಲಿ ಬಹುತೇಕ ಮನೆಗಳಲ್ಲಿ ಸೋರಿಕೆಯಾಗಿದೆ. ಮನೆಗಳು ಸೋರಿರುವ ಕಲೆಗಳು ಕೆಲವು ಮನೆಗಳಲ್ಲಿವೆ. ಇನ್ನೂ ಕೆಲವು ಮನೆಗಳಲ್ಲಿ ನೆಲಕ್ಕೆ ಹಾಸಿರುವ ಟೈಲ್ಸ್ಗಳು ಕಿತ್ತು ಬರುತ್ತಿವೆ. ಬಹುತೇಕ ಕಡೆಗಳಲ್ಲಿ ಟೈಲ್ಸ್ನ ಕೆಳಭಾಗದಲ್ಲಿ ಸಿಮೆಂಟ್ ಕೂಡ ಹಾಕಿರುವದಿಲ್ಲ. ಕಾಮಗಾರಿಯ ಉಸ್ತುವಾರಿ ವಹಿಸಿಕೊಂಡಿರುವ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳ ಗಮನಕ್ಕೆ ತಂದರೆ ಯಾವದೇ ಸ್ಪಂದನವಿಲ್ಲದ್ದರಿAದ ಫಲಾನುಭವಿಗಳೇ ದುರಸ್ತಿ ಮಾಡಿಸಿಕೊಳ್ಳುವಂತಾಗಿದೆ..! ಇನ್ನೂ ಬಹುತೇಕ ಮನೆಗಳಿಗೆ ಅಳವಡಿಸಲಾದ ಬಾಗಿಲುಗಳಲ್ಲಿ ಬಿರುಕುಗಳು ಕಾಣಿಸಿಕೊಂಡು ಬಿಚ್ಚಿಕೊಳ್ಳುತ್ತಿವೆ..!

ಕುಳಿತಲ್ಲೇ ಕುಸಿಯುವ ‘ಟಾಯ್ಲೆಟ್ ಬೇಸಿನ್..’!

ಮನೆ ಎಂದ ಮೇಲೆ ಎಲ್ಲವೂ ವ್ಯವಸ್ಥಿತವಾಗಿರಬೇಕು. ಇಲ್ಲಿಯೂ ಸರಕಾರದ ಯೋಜನೆ, ನಕಾಶೆ ಪ್ರಕಾರ ವ್ಯವಸ್ಥಿತವಾಗಿಯೇ ಇದೆ. ಆದರೆ, ಕಳಪೆ ಕಾಮಗಾರಿಯಿಂದಾಗಿ ಎಲ್ಲವೂ ಹಾಳಾಗಿದೆ.

(ಮೊದಲ ಪುಟದಿಂದ) ಇಲ್ಲಿನ ಮನೆಗಳಲ್ಲಿ ಶೌಚಗೃಹದಲ್ಲಿ ಅಳವಡಿಸಲಾಗಿರುವ ಶೌಚಾಲಯದ ಬೇಸಿನ್ ಕುಸಿಯುತ್ತಿದೆ..! ಬೇಸಿನ್ ಅಳವಡಿಸುವಾಗ ಕೊರೆಯಲಾದ ಗುಂಡಿಗಳಿಗೆ ಸಿಮೆಂಟ್, ಕಾಂಕ್ರಿಟ್ ಹಾಕಿ ಬಲಗೊಳಿಸದೇ ಕೇವಲ ಮರಳು ಮಾತ್ರ ಹಾಕಿ ಅಳವಡಿಸಿರುವದರಿಂದ ಇದೀಗ ಅದರ ಮೇಲೆ ಕುಳಿತುಕೊಳ್ಳುವ ಸಂದರ್ಭ ಬೇಸಿನ್ ಕುಸಿತಗೊಳ್ಳುತ್ತಿದೆ. ಮಕ್ಕಳು, ವೃದ್ಧರು ‘ಟಾಯ್ಲೆಟ್’ಗೆ ಹೋಗಲೂ ಹೆದರಿಕೊಳ್ಳುವಂತಾಗಿದೆ..! ಮನೆ ಪಡೆದುಕೊಂಡವರಿಗೆ ಆಗಾಗ್ಗೆ ಸಿಮೆಂಟ್ ಹಾಕಿ ಮುಚ್ಚುವದೇ ಕೆಲಸವಾಗಿದೆ..!

ನಾರುತ್ತಿರುವ ಶೌಚ ಗುಂಡಿ..!

ಬಡಾವಣೆಯಲ್ಲಿರುವ ೩೮೩ ಮನೆಗಳಿಗಾಗಿ ಬಡಾವಣೆಯ ಒಂದು ಬದಿಯಲ್ಲಿ ಶೌಚ ಗುಂಡಿಯನ್ನು ನಿರ್ಮಿಸಲಾಗಿದೆ. ಇದು ಕಳೆದ ಮಳೆಗಾಲ ಆರಂಭವಾದಾಗಲೇ ತುಂಬಿ ಮೇಲ್ಭಾಗದಲ್ಲಿ ಹರಿದು ವಾತಾವರಣ ಗಬ್ಬೆದ್ದು ನಾರುವಂತಾಗಿತ್ತು. ನಂತರದಲ್ಲಿ ತಾತ್ಕಾಲಿಕ ದುರಸ್ತಿ ವ್ಯವಸ್ಥೆ ಮಾಡಲಾಯಿತಾದರೂ ಇದೀಗ ಮತ್ತೆ ತುಂಬಿದೆ. ಇದರಿಂದಾಗಿ ವಾತಾವರಣ ನಾರುತಿದ್ದು, ಸನಿಹದ ಮನೆಗಳಲ್ಲಿ ವಾಸಿಸುತ್ತಿರುವವರು ಬಾಗಿಲು, ಕಿಟಕಿ ಹಾಕಿಕೊಂಡು, ಮೂಗು ಮುಚ್ಚಿಕೊಂಡು ಬದುಕು ಸಾಗಿಸುವಂತಾಗಿದೆ..!

ಅವೈಜ್ಞಾನಿಕ ಚರಂಡಿ ವ್ಯವಸ್ಥೆ..!

ರಸ್ತೆ ಬದಿ, ಮನೆಯ ಸನಿಹ ಎಲ್ಲೇ ಆದರೂ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ನಿರ್ಮಿಸಲಾಗುತ್ತದೆ. ಆದರೆ., ಈ ಬಡಾವಣೆಯಲ್ಲಿ ಮಾತ್ರ ಚರಂಡಿಗಳನ್ನು ‘ವಿಶೇಷ’ ತಂತ್ರಜ್ಞಾನ ಉಪಯೋಗಿಸಿ ನಿರ್ಮಿಸಲಾಗಿದೆ..!

ಒಂದು ಕಡೆಯಿಂದ ಸಂಪೂರ್ಣ ಇಳಿಜಾರು ಪ್ರದೇಶವಿದ್ದರೂ ತಾನಾಗಿಯೇ ನೀರು ಸರಾಗವಾಗಿ ಹರಿದು ಹೋಗುವ ಅವಕಾಶವಿದ್ದರೂ ಕಾಂಕ್ರಿಟ್ ಚರಂಡಿ ನಿರ್ಮಿಸಿ ಕೊಳಚೆ ನೀರನ್ನು ಮನೆಗಳ ಎದುರು ಸಂಗ್ರಹವಾಗುವ ಹಾಗೆ ಮಾಡಲಾಗಿದೆ. ಚರಂಡಿಯಿAದ ಬಡಾವಣೆಯ ಹೊರಕ್ಕೆ ನೀರು ಹರಿಯಲು ಸಣ್ಣ ಪೈಪ್‌ಗಳನ್ನು ಅಳವಡಿಸಲಾಗಿದ್ದು, ಅಲ್ಲಿಗೆ ನೀರು ಹರಿಯದಂತೆ ಎತ್ತರಿಸಲಾಗಿದೆ. ಇದರಿಂದಾಗಿ ಎಲ್ಲರ ಮನೆಗಳಿಂದ ಬರುವ ಶೌಚ ನೀರು ಸೇರಿದಂತೆ ಕೊಳಚೆ ನೀರು ಸಂಗ್ರಹವಾಗಿ ವಾಸನೆ ಬೀರುತ್ತಿದ್ದು, ಪ್ರದೇಶ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಪರಿಣಮಿಸಿದೆ..! ಒಂದು ಕಡೆಯಂತೂ ಚರಂಡಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದ್ದು, ನೀರು ಮುಂದೆ ಹರಿಯಲಾಗದೆ ಮನೆಯ ಎದುರೇ ಸಂಗ್ರಹಗೊAಡು ವಾಸನೆ ಬರುತ್ತಿದೆ..!

ಧೂಳು-ಕೆಸರಿನ ರಸ್ತೆ..!

ಬಡಾವಣೆಯಲ್ಲಿ ಎಲ್ಲಾ ವಿಭಾಗಗಳಲ್ಲಿಯೂ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ. ಆದರೆ, ಬಡಾವಣೆಯ ಕೊನೆಯಲ್ಲಿ ಇನ್ನೂ ಕೂಡ ರಸ್ತೆ ಆಗಲೇ ಇಲ್ಲ.., ಬೇಸಿಗೆ ಕಾಲದಲ್ಲಿ ವಾಹನಗಳು ಒಡಾಡುವ ಸಂದರ್ಭ ಎದ್ದೇಳುವ ಧೂಳಿನಿಂದಾಗಿ ಸುತ್ತ ಮುತ್ತಲಿನ ಮನೆಗಳೆಲ್ಲವೂ ಧೂಳಿನಲ್ಲಿ ಮುಳುಗಿ ಹೋಗಿವೆ. ಸನಿಹದಲ್ಲೇ ಇನ್ಫೋಸಿಸ್ ವತಿಯಿಂದ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಅವರುಗಳು ರಸ್ತೆಗೆ ನೀರು ಹಾಯಿಸಿದರೆ ಮಾತ್ರ ಸ್ವಲ್ಪ ನಿರಾಳತೆ ದೊರೆಯುತ್ತದೆ. ಇನ್ನೂ ಮಳೆಗಾಲದಲ್ಲಿ ಕೆಸರಿನಿಂದಾಗಿ ಇಲ್ಲಿನ ಮನೆಯವರಿಗೆ ನಡೆದಾಡಲೂ ಕೂಡ ಸಾಧ್ಯವಿಲ್ಲದಂತಹ ಪರಿಸ್ಥಿತಿ.

ಕೊನೆಯಲ್ಲಿರುವ ಈ ಮನೆಗಳ ಹಿಂಭಾಗದಲ್ಲಿ ಉದ್ದಕ್ಕೆ ಮಣ್ಣು ತೆಗೆಯಲಾಗಿದ್ದು, ಗುಂಡಿಯAತಾಗಿದೆ. ಇಲ್ಲಿ ಮಳೆಗಾಲದಲ್ಲಿ ನೀರು ಸಂಗ್ರವಾಗುತ್ತಿದ್ದು, ಒಂದು ವೇಳೆ ಶೀತ ಹೆಚ್ಚಾದರೆ ಮನೆಗಳಿಗೆ ಹಾನಿಯುಂಟಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ..! ನಿರಾಶ್ರಿತರ ಬಡಾವಣೆಯಲ್ಲಿಯೇ ಮತ್ತೆ ನಿರಾಶ್ರಿತರಾಗುವ ಸಂಭವ ಕೂಡ ಎದ್ದು ಕಾಣುತ್ತದೆ. ಈ ಗುಂಡಿ ಪ್ರದೇಶಕ್ಕೆ ಮಣ್ಣು ಹಾಕಿ ತುಂಬಿಸಲು ಕೆಲವರು ಮುಂದಾಗಿದ್ದಾರಾದರೂ ಪ್ರವೇಶದಲ್ಲಿ ಇರುವ ಮನೆಯವರು ಇಟ್ಟಿಗೆಗಳನ್ನು ಜೋಡಿಸಿ ಅಡ್ಡಕಟ್ಟಿರುವದರಿಂದ ಲಾರಿಗಳು ತೆರಳಲು ಸಾಧ್ಯವಿಲ್ಲದಂತಾಗಿದೆ..!

ರಸ್ತೆ ಬದಿ ಕಸದ ರಾಶಿ..!

ಬಡಾವಣೆಯಲ್ಲಿರುವ ಮನೆಗಳ ಕಸಗಳನ್ನು ಹಾಕಲು ಬಡಾವಣೆಯ ಕೊನೆಯಲ್ಲಿ ಸ್ಥಳ ಗುರುತಿಸಲಾಗಿದೆ. ಆದರೆ, ಅಲ್ಲಿಗೆ ತೆರಳುವ ರಸ್ತೆ ಧೂಳು ಹಾಗೂ ಕೆಸರಿನಿಂದ ಕೂಡಿರುವ ಹಿನ್ನೆಲೆಯಲ್ಲಿ ಜನರು ಅಲ್ಲಲ್ಲೇ ಕಸದ ಗುಂಡಿಯ ಸುತ್ತಲೂ ರಸ್ತೆ ಬದಿ ಕಸಗಳನ್ನು ಎಸೆದು ಹೋಗುತ್ತಿರುವದು ಕಂಡು ಬರುತ್ತದೆ. ಇಲ್ಲಿಗೆ ಪಂಚಾಯ್ತಿ ವತಿಯಿಂದ ಕಸ ಸಂಗ್ರಹಣೆ ಮಾಡುವ ವ್ಯವಸ್ಥೆ ಆಗಬೇಕಾಗಿದೆ..!

ಅಪಾಯಕ್ಕೆ ಆಹ್ವಾನ..!

ಬಡಾವಣೆ ನಿರ್ಮಿತವಾಗಿರುವ ಸ್ಥಳ ಸಮತಟ್ಟಾಗಿಲ್ಲದೆ ಜೌಗು ಪ್ರದೇಶವಾಗಿದೆ. ಅಂತಹ ಜಾಗದಲ್ಲಿ ಎತ್ತರದ ಕಾಂಕ್ರಿಟ್ ತಡೆಗೋಡೆ ನಿರ್ಮಿಸಿ, ಮಣ್ಣು ಹಾಕಿ ಸಮತಟ್ಟು ಮಾಡಿ ಮನೆಗಳನ್ನು ನಿರ್ಮಿಸಲಾಗಿದೆ. ಬಹುತೇಕ ಕಡೆಗಳಲ್ಲಿ, ಎತ್ತರ ಕಡಿಮೆ ಇರುವಲ್ಲಿ ಆರಂಭಿಕವಾಗಿ ನಿರ್ಮಿಸಲಾದ ಮನೆಗಳ ಎದುರಿಗೆ ಕಬ್ಬಿಣದ ಸರಳುಗಳನ್ನು ಅಳವಡಿಸಲಾಗಿದೆ. ಇನ್ನೂ ಅನೇಕ ಕಡೆಗಳಲ್ಲಿ, ಎತ್ತರವಿರುವ ಪ್ರದೇಶಗಳಲ್ಲಿ ಯಾವದೇ ಭದ್ರತಾ ವ್ಯವಸ್ಥೆಗಳನ್ನು ಮಾಡಿಲ್ಲ. ಕೆಲವು ಮನೆಗಳಲ್ಲಿ ಪುಟಾಣಿ ಮಕ್ಕಳು, ವಯೋವೃದ್ಧರು ವಾಸವಿದ್ದಾರೆ. ಒಂದಿಷ್ಟು ಎಚ್ಚರ ತಪ್ಪಿದರೂ ಕೆಳಗೆ ಬಿದ್ದು ಅಪಾಯ ಸಂಭವಿಸುವ ಸಾಧ್ಯತೆಯಿದೆ. ಇವರುಗಳನ್ನು ಮನೆಯೊಳಗೆ ಕೂಡಿ ಹಾಕುವದು ಅಥವಾ ಹೊರಗಡೆ ಬರುವಾಗ ಜೊತೆಯಲ್ಲಿಯೇ ಇದ್ದುಕೊಂಡು ಕಾಯುವ ಕೆಲಸ ಇಲ್ಲಿನವರದ್ದಾಗಿದೆ..!

ಕೈ ಕೊಡುವ ಮೋಟಾರು..!

ಈ ಬಡಾವಣೆಯ ನಿವಾಸಿಗಳಿಗೆ ಕುಡಿಯುವ ನೀರನ್ನೊದಗಿಸುವ ಸಲುವಾಗಿ ಮೂರು ಕೊಳವೆ ಬಾವಿಗಳನ್ನು ಕೊರೆಯಲಾಗಿದ್ದು, ಮೋಟಾರು ಅಳವಡಿಸಲಾಗಿದೆ. ಆದರೆ, ನೀರು ಹೆಚ್ಚಿಗೆ ಬೇಕಾಗಿರುವದರಿಂದ ಆಗಾಗ್ಗೆ ಮೋಟಾರು ಚಾಲನೆಗೊಳ್ಳುವದರಿಂದ ಆಗಾಗ್ಗೆ ಮೋಟಾರುಗಳು ಕೈಕೊಡುತ್ತವೆ. ಮೊದಲೇ ಎರಡು- ಮೂರು ದಿನಗಳಿಗೊಮ್ಮೆ ನೀರು ಬಿಡುವದರಿಂದ ಹಾಗೂ ಮೋಟಾರು ಕೈ ಕೊಡುವದರಿಂದ ನೀರಿನ ಸಮಸ್ಯೆ ಇಲ್ಲಿನವರನ್ನು ಕಾಡುತ್ತಿದೆ. ಕೆಲವರು ತಮ್ಮ ಮನೆಗಳಲ್ಲಿ ೨ -೩ ನೀರಿನ ಟ್ಯಾಂಕ್‌ಗಳನ್ನು ಇರಿಸಿಕೊಂಡಿದ್ದಾರೆ..!

ಗಮನ ಹರಿಸುವವರಿಲ್ಲ..!

ಬಡಾವಣೆಯಲ್ಲಿ ಸಮಸ್ಯೆಗಳ ಸರಮಾಲೆಗಳೇ ಇದ್ದರೂ ಇತ್ತ ಗಮನ ಹರಿಸುವವರೇ ಇಲ್ಲವೆಂದು ಅಲ್ಲಿನ ನಿವಾಸಿಗಳು ತಮ್ಮ ನೋವನ್ನು ಹೇಳಿಕೊಳ್ಳುತ್ತಾರೆ. ಈ ಬಡಾವಣೆಯ ಸಮಸ್ಯೆಗಳ ಬಗ್ಗೆ ಸಾಕಷ್ಟು ಬಾರಿ ಗಮನ ಸೆಳೆದರೂ ಸೂಕ್ತ ಸ್ಪಂದನ ಸಿಗುತ್ತಿಲ್ಲ. ಶಾಸಕರ ಗಮನಕ್ಕೆ ತಂದ ಸಂದರ್ಭ ಶಾಸಕರು ಭೇಟಿ ನೀಡಿ ವ್ಯವಸ್ಥೆ ಸರಿಪಡಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಇದುವರೆಗೂ ಅಧಿಕಾರಿಗಳು ಪೂರಕವಾಗಿ ಸ್ಪಂದಿಸಿಲ್ಲವೆAಬದು ನಿವಾಸಿಗಳ ಆರೋಪವಾಗಿದೆ. ಅಲ್ಲಿನ ನಿವಾಸಿಯೋರ್ವರ ಮನೆಯ ಹಿಂದೆ ದೊಡ್ಡ ದೊಡ್ಡ ಬಂಡೆ ಕಲ್ಲುಗಳನ್ನು ತಂದು ರಾಶಿ ಹಾಕಲಾಗಿದ್ದು, ಇದನ್ನು ತೆರವುಗೊಳಿಸುವಂತೆ ನಿವಾಸಿಯ ಕೋರಿಕೆಯ ಮೇರೆಗೆ ಶಾಸಕ ಅಪ್ಪಚ್ಚು ರಂಜನ್ ಅವರೇ ಅಧಿಕಾರಿಗೆ ಸೂಚಿಸಿದ್ದರೂ ವರ್ಷ ಕಳೆದರೂ ಇನ್ನೂ ತೆರವಾಗಿಲ್ಲ. ನಿರಾಶ್ರಿತರೆಂದು ನಗಣ್ಯವಾಗಿ ಕಾಣದೆ ಸಮಸ್ಯೆಗಳಿಗೆ ಸ್ಪಂದಿಸಿ ಸಹಜವಾಗಿ ಬದುಕು ರೂಪಿಸಲು ಅನುವು ಮಾಡಿಕೊಡಬೇಕೆಂಬದು ಇಲ್ಲಿನ ನಿವಾಸಿಗಳ ಭಿನ್ನಹವಾಗಿದೆ.

ಬಡಾವಣೆಗೆ ರಾಷ್ಟçದ ಮಹಾನ್ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಬಡಾವಣೆ ಎಂದು ಹೆಸರಿಸಲಾಗಿದೆ ಘನತೆವೆತ್ತ ಆ ಹೆಸರಿಗಾದರೂ ಗೌರವ ನೀಡುತ್ತಾ ಜಂಬೂರು ಬಡವರ ಬಾಳಿಗೆ ಒಂದು ಸುಂದರ ಊರಾಗಲಿ ಎಂಬದೇ ವರದಿಯ ಆಶಯ..!