ವಿಶೇಷ ವರದಿ: ರಫೀಕ್ ತೂಚಮಕೇರಿ ಪೊನ್ನಂಪೇಟೆ, ಜ. ೧೬: ಕೊಡಗು ಮತ್ತು ಕೇರಳದ ಕಣ್ಣೂರು ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಮಾರ್ಗವಾದ ಮಾಕುಟ್ಟ- ಇರಿಟ್ಟಿ ರಸ್ತೆಯ ಉಭಯ ರಾಜ್ಯಗಳ ಗಡಿಯಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಕೂಟುಹೊಳೆ ಸೇತುವೆ ಇದೀಗ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ನೂತನ ಸೇತುವೆಯ ಕಾಮಗಾರಿಗಳೆಲ್ಲವೂ ಪೂರ್ಣ ಗೊಂಡಿದ್ದು, ಉದ್ಘಾಟನೆಯಷ್ಟೇ ಬಾಕಿ ಉಳಿದಿದೆ. ಇದರಿಂದಾಗಿ ಉಭಯ ರಾಜ್ಯಗಳ ಜನತೆಯ ಬಹುಕಾಲದ ಬೇಡಿಕೆ ಈಡೇರುವ ನಿರೀಕ್ಷೆ ಅಂತಿಮ ಘಟ್ಟ ತಲುಪಿದೆ.
ಕೇರಳ ಸರಕಾರ ಮತ್ತು ಗುತ್ತಿಗೆ ಸಂಸ್ಥೆಯ ನಡುವೆ ನಡೆದ ಒಪ್ಪಂದದAತೆ ಕಳೆದ ೪ ವರ್ಷಗಳ ಹಿಂದೆಯೇ ಈ ನೂತನ ಸೇತುವೆಯ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಕೂಟುಹೊಳೆ ಸೇತುವೆಯ ಕೆಲಸ ಆರಂಭಗೊAಡ ಕೇವಲ ೨ ತಿಂಗಳಲ್ಲೇ ಕರ್ನಾಟಕ ಅರಣ್ಯ ಇಲಾಖೆಯ ಆಕ್ಷೇಪಣೆಯಿಂದಾಗಿ ಕಾಮಗಾರಿ ಸ್ಥಗಿತಗೊಂಡಿತ್ತು. ಬಳಿಕ ಕೇರಳ-ಕರ್ನಾಟಕ ರಾಜ್ಯಗಳ ನಡುವೆ ನಡೆದ ತಾಂತ್ರಿಕ ವ್ಯವಹಾರದ ಬಳಿಕ ಕಾಮಗಾರಿ ಪುನರಾರಂಭಗೊAಡು ಇದೀಗ ಉದ್ಘಾಟನೆಗೆ ಸಜ್ಜಾಗಿದೆ. ನೂತನ ಸೇತುವೆ ಯೋಜನೆಯ ಕಾಮಗಾರಿ ಆರಂಭಗೊAಡ ೯೮ ತಿಂಗಳ ಬಳಿಕ ಕೂಟುಹೊಳೆ ನೂತನ ಸೇತುವೆ ಉದ್ಘಾಟನೆಗೆ ಸಿದ್ದಗೊಂಡಿ ರುವುದು ಮತ್ತೊಂದು ವಿಶೇಷ.
(ಮೊದಲ ಪುಟದಿಂದ)
ನೂತನ ಸೇತುವೆಯ ಎಲ್ಲಾ ಕಾಮಗಾರಿಗಳು ಪೂರ್ಣ ಗೊಂಡಿದ್ದರೂ ಉದ್ಘಾಟನೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಈ ಕುರಿತು ಕೇರಳ ಸರ್ಕಾರವೇ ಅಂತಿಮ ನಿರ್ಧಾರ ತೆಗೆದುಕೊಳ್ಳ ಬೇಕಿದೆ. ಇದೀಗ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಇದರಿಂದಾಗಿ ನೂತನ ಸೇತುವೆಯ ಉದ್ಘಾಟನೆ ವಿಳಂಬ ವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ನಿರ್ಮಾಣಗೊಂಡು ನೂರಾರು ವರ್ಷದ ಇತಿಹಾಸವಿರುವ ಹಳೆಯ ಕೂಟುಹೊಳೆ ಸೇತುವೆ ತೀರಾ ಶಿಥಿಲಾವಸ್ಥೆಗೆ ತಲುಪಿ ಹತ್ತಾರು ವರ್ಷಗಳೇ ಕಳೆದಿತ್ತು. ಕೇವಲ ಒಂದು ವಾಹನ ಮಾತ್ರ ಏಕಮುಖವಾಗಿ ಸಂಚರಿಸಲು ಸಾಧ್ಯವಿದ್ದ ಹಳೆಯ ಸೇತುವೆಯನ್ನು ದಾಟುವುದೇ ವಾಹನ ಚಾಲಕರಿಗೆ ಸಮಸ್ಯೆಯಾಗಿತ್ತು. ಅಲ್ಲದೆ ಉಭಯ ರಾಜ್ಯಗಳ ನಡುವೆ ಸಂಚರಿಸುತ್ತಿದ್ದ ಬಸ್ಸುಗಳು ಹಳೆಯ ಸೇತುವೆ ದಾಟಲು ದೊಡ್ಡ ಸವಾಲನ್ನು ಎದುರಿಸಬೇಕಾಗಿತ್ತು. ಇದರಿಂದಾಗಿ ಕಣ್ಣೂರು ಜಿಲ್ಲೆಯ ಇರಿಟ್ಟಿ ವ್ಯಾಪ್ತಿಯ ಕೂಟುಹೊಳೆ ಮತ್ತು ಕೊಡಗು ಗಡಿ ಮಾಕುಟ್ಟವನ್ನು ಸಂಪರ್ಕಿಸಲು ವೀರಾಜಪೇಟೆಯಿಂದ ೨೭ ಕಿಲೋಮೀಟರ್ ದೂರದಲ್ಲಿರುವ ಕೂಟುಹೊಳೆಯಲ್ಲಿ ನೂತನ ಸೇತುವೆ ನಿರ್ಮಾಣವಾಗಬೇಕು ಎಂಬುದು ಜನರ ಬಹುಕಾಲದ ಬೇಡಿಕೆಯಾಗಿತ್ತು.
ಜನರ ಬೇಡಿಕೆಯನ್ನು ಮನಗಂಡ ಕೇರಳ ಸರಕಾರ ಕೂಟುಹೊಳೆಯಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ೨೦೧೭ರಲ್ಲಿ ಮಂಜೂರಾತಿ ನೀಡಿತ್ತು. ಇದರಂತೆ ಕೇರಳದ ಲೋಕೋಪ ಯೋಗಿ ಇಲಾಖೆಯ ಅಧೀನದಲ್ಲಿರುವ ಕೇರಳ ರಾಜ್ಯ ಸಾರಿಗೆ ಯೋಜನೆಯ (ಕೆ.ಎಸ್. ಟಿ.ಪಿ.) ಮೂಲಕ ವಿಶ್ವಬ್ಯಾಂಕ್ ನೆರವಿನಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾ ಯಿತು. ರೂ. ೬.೭೫ ಕೋಟಿ ವೆಚ್ಚದ ಈ ಕಾಮಗಾರಿಯನ್ನು ಈಜಿಸ್ ಇಂಡಿಯ ಕನ್ಸಲ್ಟಿಂಗ್ ಇಂಜಿನಿಯರಿAಗ್ ಪ್ರೆöÊವೇಟ್ ಲಿಮಿಟೆಡ್ ಎಂಬ ನಿರ್ಮಾಣ ಸಂಸ್ಥೆ ಗುತ್ತಿಗೆ ಪಡೆದುಕೊಂಡಿತು.
ಅರಣ್ಯ ಇಲಾಖೆ ತಡೆ ನಿವಾರಣೆ
ಒಪ್ಪಂದದAತೆ ೨೦೧೭ ರ ಅಕ್ಟೋಬರ್ ನಲ್ಲಿ ನೂತನ ಸೇತುವೆಯ ಕಾಮಗಾರಿಯನ್ನು ಆರಂಭಿಸಿ ಕೇವಲ ೨ ತಿಂಗಳ ಅವಧಿಯಲ್ಲೇ ಶೇ೪೦%ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಿತು. ಉದ್ದೇಶಿತ ಯೋಜನೆಯು ಮಾಕುಟ್ಟ ಅರಣ್ಯ ವ್ಯಾಪ್ತಿಯ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿದ್ದು, ಈ ಪ್ರದೇಶದಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಕರ್ನಾಟಕ ಅರಣ್ಯ ಇಲಾಖೆಯ ತಾಂತ್ರಿಕ ಅನುಮತಿ ಇಲ್ಲ ಎಂದು ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ ಕಾರಣ ೨೦೧೭ರ ಡಿಸೆಂಬರ್ ೨೭ರಂದು ಕಾಮಗಾರಿ ಸ್ಥಗಿತಗೊಂಡಿತ್ತು.
ಇದರಿAದಾಗಿ ೩ ವರ್ಷಗಳ ಕಾಲ ಸೇತುವೆ ಕಾಮಗಾರಿ ನಡೆಯದೆ ಅರ್ಧಕ್ಕೆ ನಿಂತAತಿತ್ತು. ಬಳಿಕ ಕೇರಳ ಸರಕಾರ ಕರ್ನಾಟಕ ಸರಕಾರದೊಂದಿಗೆ ಈ ಕುರಿತು ವ್ಯವಹರಿಸಿ ಅರಣ್ಯ ಇಲಾಖೆಯ ಅನುಮತಿಗಾಗಿ ಪಾವತಿಸಬೇಕಿದ್ದ ರೂ ೯.೨೫ ಲಕ್ಷ ಹಣವನ್ನು ಸಂದಾಯ ಮಾಡಿ ಸೇತುವೆ ಕಾಮಗಾರಿ ಪುನರಾರಂಭಿಸಲು ಅಗತ್ಯವಿರುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತು. ಇದರಿಂದಾಗಿ ೨೦೨೦ ರ ಡಿಸೆಂಬರ್ ೨೪ರಂದು ಅರ್ಧಕ್ಕೆ ನಿಂತಿದ್ದ ಕೂಟುಹೊಳೆ ಸೇತುವೆಯ ಕಾಮಗಾರಿ ಪುನರಾರಂಭಿಸಲು ಅನುಮತಿ ದೊರೆಯಿತು.
ಈ ಹಿನ್ನೆಲೆಯಲ್ಲಿ ೨೦೨೧ರ ಜನವರಿ ೧ರಿಂದ ಮತ್ತೆ ಕಾಮಗಾರಿ ಆರಂಭಗೊAಡು ಕೇವಲ ಒಂದು ವರ್ಷದೊಳಗೆ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ. ನೂತನ ಸೇತುವೆ ನಿರ್ಮಾಣದಿಂದ ಈ ಮಾರ್ಗದಲ್ಲಿ ದಿನನಿತ್ಯ ಚಲಿಸುವ ಸಾವಿರಾರು ವಾಹನಗಳ ಮತ್ತು ಜನರ ಸುಗಮ ಸಂಚಾರಕ್ಕೆ ಬಹುದೊಡ್ಡ ಪ್ರಯೋಜನವಾಗಲಿದೆ. ಅಲ್ಲದೆ ಹಳೆಯ ಸೇತುವೆಗಿಂತಲೂ ಮೊದಲೇ ನೂತನ ಸೇತುವೆ ನಿರ್ಮಾಣ ವಾಗಿರುವುದರಿಂದ ಅಂದಾಜು ಅರ್ಧ ಕಿಲೋ ಮೀಟರ್ ಪ್ರಯಾಣದ ದೂರ ಕೂಡ ಕಡಿಮೆಯಾಗಲಿದೆ ಎನ್ನಲಾಗಿದೆ.
ಹಸಿರು ಪರಿಸರದ ನಡುವೆ ಅಂತರಾಷ್ಟಿçÃಯ ಗುಣಮಟ್ಟದಲ್ಲಿ ನಿರ್ಮಾಣಗೊಂಡಿರುವ ಕೂಟುಹೊಳೆ ಸೇತುವೆ ಉದ್ಘಾಟನೆಗೆ ಸಿದ್ದಗೊಂಡಿರುವುದರಿAದ ಇದೀಗ ನವವಧುವಿನಂತೆ ಕಂಗೊಳಿಸುತ್ತಿದೆ. ಕೋವಿಡ್ ಆತಂಕದ ಪರಿಣಾಮ ಭಾಧಿಸದಿದ್ದಲ್ಲಿ ನೂತನ ಸೇತುವೆಯನ್ನು ಸಂಚಾರ ಮುಕ್ತಗೊಳಿಸಲು ಕೇರಳ ಸರಕಾರ ಶೀಘ್ರದಲ್ಲೇ ದಿನಾಂಕ ನಿಗದಿಪಡಿಸುವ ನಿರೀಕ್ಷೆ ಹೊಂದಲಾಗಿದೆ.
(-ರೆಹಮಾನ್)
ಕಣ್ಣನೂರು ಅಂರ್ರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ಸಾಗುವ ರಸ್ತೆ ಎಂಬ ನೆಲೆಯಲ್ಲಿ ಕೇರಳ ಲೋಕೋಪಯೋಗಿ ಇಲಾಖೆಯ ತಲಚೇರಿ-ವಳವುಪಾರ ಹೆದ್ದಾರಿಯ ೩೫೬ ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಯಡಿಯಲ್ಲಿ ಸೇತುವೆ ನಿರ್ಮಾಣ ಅಧಿಕೃತವಾಗಿ ಪ್ರಾರಂಭಗೊAಡಿತು. ಆದರೆ ಸೇತುವೆ ನಿರ್ಮಾಣಕ್ಕೆ ಸ್ಥಾಪಿಸಲಾದ ಸ್ತಂಭಗಳಲ್ಲಿ ಒಂದು ಕರ್ನಾಟಕ ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿದ ಜಾಗದಲ್ಲಿದೆಯೆಂದೂ, ಇದಕ್ಕೆ ಇಲಾಖೆಯಿಂದ ಪೂರ್ವಾನುಮತಿ ಪಡೆಯಲಿಲ್ಲವೆಂದೂ ರಾಜ್ಯ ಅರಣ್ಯ-ಪರಿಸರ ಇಲಾಖೆ ಆಕ್ಷೇಪವೆತ್ತಿತು. ಈ ಬಗ್ಗೆ ಉಭಯ ರಾಜ್ಯಗಳ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಂದಕ್ಕಿAತ ಹೆಚ್ಚು ಬಾರಿ ಚರ್ಚೆ ನಡೆಸಿದರೂ ಫಲ ಕಾಣಲಿಲ್ಲ. ಇದರಿಂದ ಮೂರು ವರ್ಷಗಳ ಕಾಲ ಸೇತುವೆ ಕಾಮಗಾರಿ ಸ್ಥಗಿತಗೊಂಡಿತು. ಕೊನೆಗೆ ಕೇಂದ್ರ ಪರಿಸರ ಮತ್ತು ವನ್ಯಜೀವಿ ಸಚಿವಾಲಯ ನೇರವಾಗಿ ವ್ಯವಹರಿಸಿ ೨೦೨೦ರಲ್ಲಿ ಗಡಿ ಪ್ರದೇಶದ ಮರು ಸರ್ವೆ ನಡೆಸಿ ಪರಿಹಾರ ಕಂಡುಕೊಳ್ಳಲು ಸೂಚಿಸಲಾಯಿತು. ಸಚಿವಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ೨೦೨೦ರ ಏಪ್ರಿಲ್ ೨೩ರಂದು ಕೆಲಸ ಪುನರಾರಂಭಿಸಲಾಯಿತು. ಆದರೆ ಜೊತೆಯಲ್ಲಿಯೇ ಬಂದ ಕೊರೋನಾದಿಂದಾಗಿ ಕಾಮಗಾರಿಗೆ ಪುನಃ ತಡೆಯುಂಟಾಗಿತ್ತು.
ಕರ್ನಾಟಕ ವನ್ಯಜೀವಿ ಸಂರಕ್ಷಣಾ ಮಂಡಳಿಯ ಅನುಮತಿಗಾಗಿ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ವಿಶೇಷ ಪ್ರಯತ್ನ ನಡೆಸಿದ್ದನ್ನು ಇಲ್ಲಿ ಸ್ಮರಿಸಲಾಗಿದೆ. ಆದರೆ ಬೋಪಯ್ಯ ಮತ್ತು ಇತರ ಜನಪ್ರತಿನಿಧಿಗಳ ಪ್ರಯತ್ನವನ್ನು ಗಣನೆಗೆ ತೆಗೆದುಕೊಳ್ಳದೆ ಏಕಾ-ಏಕಿ ಸೇತುವೆ ಉದ್ಘಾಟನೆಗೆ ದಿನ ನಿಗದಿಪಡಿಸಿದ ಕೇರಳ ರಾಜ್ಯದ ಕ್ರಮಕ್ಕೆ ಶಾಸಕರ ಕಚೇರಿ, ರಾಜ್ಯ ಅರಣ್ಯ-ವನ್ಯಜೀವಿ-ಪರಿಸರ ಇಲಾಖೆಯವರೂ ಅತೃಪ್ತಿಯನ್ನು ವ್ಯಕ್ತಪಡಿಸಿದ್ದರು. ಆದರೆ ಶತಮಾನದ ಹಿಂದೆ ಆಂಗ್ಲರಿAದ ನಿರ್ಮಾಣಗೊಂಡ ಹಳೆಯ ಸೇತುವೆ ದುರ್ಬಲಗೊಂಡಿದ್ದು, ಉದ್ಘಾಟನೆಯನ್ನು ವಿಳಂಬ ಮಾಡುತ್ತಿರುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆ.