ಗೋಣಿಕೊಪ್ಪಲು, ಜ. ೧೬: ಕಾಫಿ ತೋಟದ ಮಾಲೀಕರು ತೋಟಕ್ಕೆ ಬೇಲಿ ಹಾಕುವುದನ್ನು ಪ್ರಶ್ನಿಸಲು ತೆರಳಿದ ವೇಳೆ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ದೂರಿನ್ವಯ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಎಂಟು ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ. ಹುದಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಸರ್ಕಾರದ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ನೂರಾರು ಬಡ ಕಾರ್ಮಿಕರು ಹಲವು ವರ್ಷಗಳಿಂದ ನೆಲೆಸಿದ್ದಾರೆ.
ಈ ವಾಸವಿರುವ ಜಾಗಕ್ಕೆ ಹಕ್ಕು ಪತ್ರ ನೀಡುವಂತೆ ಅನೇಕ ರೀತಿಯ ಹೋರಾಟಗಳು ಈ ಹಿಂದೆ ನಡೆದಿದ್ದವು. ಈ ಬಗ್ಗೆ ಆಗಿನ ತಹಶೀಲ್ದಾರ್ ಯೋಗಾನಂದ್ ಹಾಗೂ ರೆವಿನ್ಯೂ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಸಭೆ ನಡೆಸಿ ಹಕ್ಕು ಪತ್ರ ನೀಡುವ ಬಗ್ಗೆ ಸ್ವಲ್ಪ ಸಮಯದ ನಂತರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಈ ಜಾಗಕ್ಕೆ ಸಂಬAಧಿಸಿದAತೆ ಅಲ್ಲಿನ ತೋಟದ ಮಾಲೀಕರು ತೋಟಕ್ಕೆ ತಂತಿ ಬೇಲಿ ಹಾಕಲು ತೆರಳಿದ್ದರೆನ್ನಲಾಗಿದೆ. ಈ ವೇಳೆ ಜಾಗಕ್ಕೆ ಬೇಲಿ ಹಾಕುವ ವಿಚಾರದಲ್ಲಿ ಕಾರ್ಮಿಕರ ಹಾಗೂ ಮಾಲೀಕರ ನಡುವೆ ಮಾತಿನ ವಾಗ್ಯುದ್ದ ನಡೆದಿತ್ತು.
ಈ ವೇಳೆ ತೋಟದ ಮಾಲೀಕರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕಾರ್ಮಿಕರು ಶ್ರೀಮಂಗಲ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ್ವಯ ಪೋಲಿಸರು ಘಟನೆಗೆ ಸಂಬAಧಿಸಿದAತೆ ಎಂಟು ಮಂದಿಯ ಮೇಲೆ ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಘಟನೆ ಸ್ಥಳಕ್ಕೆ ಡಿವೈಎಸ್ಪಿ ಜಯಕುಮಾರ್ ಹಾಗೂ ಶ್ರೀಮಂಗಲ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್, ಸಿಬ್ಬಂದಿಗಳು ತೆರಳಿ ಮಹಜರು ನಡೆಸಿದ್ದಾರೆ. ಆದರೆ ಇದು ಸುಳ್ಳು ಪ್ರಕರಣವಾಗಿದೆ ಕಾರ್ಮಿಕರಿಂದಲೇ ಮಾಲೀಕರ ವಿರುದ್ಧ ಹಲ್ಲೆಗೆ ಯತ್ನ ನಡೆದಿದೆ ಎಂಬ ಆಕ್ಷೇಪವೂ ಮತ್ತೊಂದೆಡೆಯಿAದ ಕೇಳಿಬಂದಿದೆ. ಈ ಕುರಿತು ರೈತ ಸಂಘದ ವತಿಯಿಂದ ತಾ. ೧೭ ರಂದು (ಇಂದು) ಹುದಿಕೇರಿ ಪೊಲೀಸ್ ಉಪಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.