ಮಡಿಕೇರಿ, ಜ. ೧೬: ಉರುಳು ಹಾಕಿ ಜಿಂಕೆಯೊAದನ್ನು ಹತ್ಯೆ ಮಾಡಿದ್ದ ವ್ಯಕ್ತಿಯೋರ್ವನನ್ನು ಮಡಿಕೇರಿ ಪೊಲೀಸ್ ಅರಣ್ಯ ಸಂಚಾರಿದಳದ (ಸಿಐಡಿ ಪೊಲೀಸ್ ಅರಣ್ಯ ಘಟಕ) ಸಿಬ್ಬಂದಿಗಳು ಬಂಧಿಸಿದ್ದಾರೆ. ಸೋಮವಾರಪೇಟೆ ತಾಲೂಕು ಮಾವಿನಹಳ್ಳ ಹಾಡಿಯ ಸಮೀಪದಲ್ಲಿ ಈ ಪ್ರಕರಣ ಪತ್ತೆಯಾಗಿದೆ.

ಅಲ್ಲಿನ ಕುಮಾರ ಎಂಬಾತ ಆನೆಕಾಡು ಮೀಸಲು ಅರಣ್ಯದಲ್ಲಿ ಉರುಳು ಹಾಕಿ ಜಿಂಕೆಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಇದನ್ನು ಮಾಂಸವಾಗಿ ಪರಿವರ್ತಿಸಿ ಮಾಂಸವನ್ನು ಭಕ್ಷಿಸಲಾಗಿತ್ತು. ಈ ಬಗ್ಗೆ ದೊರೆತ ಸುಳಿವಿನ ಮೇಲೆ ದಾಳಿ ನಡೆಸಿದ ಪೊಲೀಸರು ಜಿಂಕೆಯ ಚರ್ಮ ಸಹಿತವಾಗಿ ಆರೋಪಿ ಕುಮಾರನನ್ನು ಬಂಧಿಸಿದ್ದಾರೆ.

ಈತನೊAದಿಗೆ ಸಹಕರಿಸಿರುವ ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ಈತನ ಬಂಧನಕ್ಕೆ ಯತ್ನ ನಡೆದಿದೆ. ಕಾರ್ಯಾಚರಣೆಯಲ್ಲಿ ಸಿಐಡಿ ಪೊಲೀಸ್ ಅರಣ್ಯ

(ಮೊದಲ ಪುಟದಿಂದ) ಘಟಕದ ಹೆಚ್ಚುವರಿ ಮಹಾನಿರ್ದೇಶಕ ಕೆ.ವಿ. ಶರತ್‌ಚಂದ್ರ ನಿರ್ದೇಶನದಲ್ಲಿ ಮಡಿಕೇರಿಯ ಸಿಐಡಿ ಘಟಕದ ಅಧೀಕ್ಷಕ ಚಂದ್ರಕಾAತ್ ಮಾರ್ಗದರ್ಶನದಲ್ಲಿ ಅರಣ್ಯ ಸಂಚಾರಿದಳದ ಎಸ್.ಐ. ಸಿ.ಯು. ಸವಿ, ಹೆಡ್‌ಕಾನ್ಸ್ಟೇಬಲ್‌ಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್, ಮೋಹನ್, ಸಿಬ್ಬಂದಿಗಳಾದ ಸ್ವಾಮಿ, ಮಂಜುನಾಥ್ ಪಾಲ್ಗೊಂಡಿದ್ದರು.