ಸುಂಟಿಕೊಪ್ಪ, ಜ. ೧೬: ಸಮಾಜ ಸೇವೆಯೊಂದಿಗೆ ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕೆ ಯುವ ಜನತೆ ಶ್ರಮಿಸಬೇಕಾದ ಕಾಲಘಟ್ಟದಲ್ಲಿ ನಾವು ಇದ್ದೇವೆ ಎಂದು ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಹೇಳಿದರು. ಸುಂಟಿಕೊಪ್ಪ ಗುಂಡುಗುಟ್ಟಿ ಮಂಜುನಾಥಯ್ಯ ಸಭಾಭವನದಲ್ಲಿ ಸುಂಟಿಕೊಪ್ಪ ಜೆಸಿಐ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ದಿಕ್ಸೂಚಿ ಭಾಷಣ ಮಾಡಿದ ಅವರು ಯುವಜನತೆಗೆ ಸಮಾಜ ಸೇವೆ ಯೊಂದಿಗೆ ತಾವು ಬೆಳೆದುಕೊಳ್ಳುವ ವ್ಯವಸ್ಥೆ ಹಾಗೂ ಸೂಕ್ತ ತರಬೇತಿ ಯೊಂದಿಗೆ ವ್ಯಕ್ತಿತ್ವ ವಿಕಸನ ಹೊಂದಬೇಕೆAದು ಕರೆನೀಡಿದರು.

ಗತಿಸಿಹೋದ ನೂರು ವರ್ಷಗಳ ತರುವಾಯಕೂಡ ಸ್ವಾಮಿ ವಿವೇಕಾ ನಂದರು ಮತ್ತು ಆದಿ ಶಂಕರಚಾ ರ್ಯರು ಇಂದಿಗೂ ನಮಗೆ ಸ್ಪೂರ್ತಿ ದಾಯಕ ಮತ್ತು ಪ್ರೇರಣದಾಯಕ ರಾಗಿದಾರೆಂದು ಉಲ್ಲೇಖಿಸಿದ ಕಾಮತ್, ಕೇೆವಲ ನಾಲ್ಕು ದಶಕಗಳ ಜೀವಿತ ಅವಧಿಯನ್ನು ಈ ಇಬ್ಬರು ಮಹನೀಯರು ಹೊಂದಿದ್ದರೂ ಕೂಡ ಅವರ ಸಾಧನೆ ಮತ್ತು ಭೋದನೆಗಳನ್ನು ಅರ್ಥ ಮಾಡಿಕೊಳ್ಳಲು ಮೂರು ಜನ್ಮ ಸಾಲದು ಎಂದು ಬಣ್ಣಿಸಿದರು.

ಸಮಾಜಮುಖಿ ಜನೋಪಂ iÉÆÃಗಿ ಸೇವೆಯಲ್ಲಿ ತೊಡಗಿಸಿಕೊಂಡು ಹೆಸರು ಮಾಡಿರುವ ಸುಂಟಿಕೊಪ್ಪ ಜೆಸಿಐ ಘಟಕದ ಕೀರ್ತಿ ಪತಾಕೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಕೇಶವ ಕಾಮತ್ ಹಾರೈಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜೆಸಿಐ ವಲಯ ೧೪ ರ ಸೆನೆಟರ್ ಕುನಾಲ್ ಮಾನಕ್ ಚಂದ್ ಅವರು ನೂತನ ಪದಾಧಿಕಾರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ನಿರ್ಗಮಿತ ಅಧ್ಯಕ್ಷ ಪ್ರೀತಮ್ ಪ್ರಭಾಕರ್ ನೂತನ ಅಧ್ಯಕ್ಷ ಸತೀಶ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ರಮೇಶ್ ಮತ್ತು ವಲಯ ಉಪಾಧ್ಯಕ್ಷೆ ಮಾಯಾ ಗಿರೀಶ್ ಹಾಗೂ ನಿರ್ಗಮಿತ ಅಧ್ಯಕ್ಷ ಪ್ರೀತಮ್ ಪ್ರಭಾಕರ್ ಮಾತನಾಡಿದರು.

ನೂತನ ಅಧ್ಯಕ್ಷ ಸತೀಶ್ ಮಾದಾಪುರ, ಕಾರ್ಯದರ್ಶಿ ನಿರಂಜನ್ ಸೇರಿದಂತೆ ನೂತನ ಪದಾಧಿಕಾರಿಗಳು ಇತರ ಹಿರಿಯ ನಿಕಟಪೂರ್ವ ಅಧ್ಯಕ್ಷರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.