ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ೩ ಮಕ್ಕಳ ನಿಗೂಢ ಸಾವು

ಬೆಳಗಾವಿ, ಜ. ೧೬: ಜಿಲ್ಲಾಸ್ಪತ್ರೆ ಬಿಮ್ಸ್ನಲ್ಲಿ ಮೂರು ಮಕ್ಕಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ೧೩ ತಿಂಗಳ ಮಗು ಪವಿತ್ರಾ ಹುಲಗುರ್, ೧೪ ತಿಂಗಳ ಮಗು ಮಧು ಉಮೇಶ್ ಕುರಗುಂದಿ ಮತ್ತು ಒಂದೂವರೆ ವರ್ಷದ ಚೇತನ ಪೂಜಾರಿ ಮೃತಪಟ್ಟ ಹಸುಗೂಸುಗಳು. ಮೂರು ದಿನಗಳ ಹಿಂದೆ ಚಿಕಿತ್ಸೆಗಾಗಿ ಈ ಮಕ್ಕಳನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿವೆ. ಸಾವಿಗೆ ಕಾರಣ ಇನ್ನು ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ಆರಂಭವಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕಾರಣ ಹೊರ ಬೀಳಲಿದೆ. ಮಕ್ಕಳ ಸಾವಿನ ಬಗ್ಗೆ ಕುಲಗೋಡ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಿನ್ನೆ ಒಂದು ಮಗು ಮೃತಪಟ್ಟಿತ್ತು. ಇಂದು ಮತ್ತೆ ಎರಡು ಮಗು ಸಾವನ್ನಪ್ಪಿವೆ. ತಾ. ೧೨ ರಂದು ಆರೋಗ್ಯ ಇಲಾಖೆ ಸಿಬ್ಬಂದಿ ರುಬೆಲ್ಲಾ ಲಸಿಕೆ ನೀಡಿದ್ದರು. ಇಂಜೆಕ್ಷನ್ ಪಡೆದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಇಲಾಖೆ ಸಿಬ್ಬಂದಿ ಬೇಜವಾಬ್ದಾರಿಯಿಂದ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಘಟನೆ ಸಂಬAಧ ಜಿಲ್ಲಾ ಆರೋಗ್ಯಾಧಿಕಾರಿ ಶಶಿಕಂತ ಮುನ್ಯಾಳ ವರದಿ ಸಲ್ಲಿಸುವಂತೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಗುಣಮುಖರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಜ. ೧೬: ಕೋವಿಡ್ ಸೋಂಕಿಗೊಳಗಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೀಗ ಗುಣಮುಖರಾಗಿದ್ದಾರೆ. ಅವರ ಪ್ರತ್ಯೇಕವಾಸದ ಅವಧಿ ತಾ. ೧೭ಕ್ಕೆ ಮುಗಿಯಲಿದ್ದು, ನಂತರ ಭೌತಿಕವಾಗಿ ಕಾರ್ಯ ಕಲಾಪಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ತಾ. ೧೦ ರಂದು ಬಸವರಾಜ ಬೊಮ್ಮಾಯಿ ಅವರ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿತ್ತು. ಅಂದಿನಿAದ ಪ್ರತ್ಯೇಕ ವಾಸದಲ್ಲಿದ್ದರು.

ಲತಾ ಮಂಗೇಶ್ಕರ್‌ಗೆ ಚಿಕಿತ್ಸೆ ಮಂದುವರಿಕೆ

ಮುAಬೈ, ಜ. ೧೬: ಲೆಜೆಂಡರಿ ಗಾಯಕಿ ಲತಾ ಮಂಗೇಶ್ಕರ್ ಅವರು ಮುಂಬೈನ ಆಸ್ಪತ್ರೆಯೊಂದರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ. ೯೨ ವರ್ಷದ ಲತಾ ಮಂಗೇಶ್ಕರ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಕಳೆದ ವಾರ ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗಿದ್ದರು. ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆದಿರುವುದಾಗಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಅಸೋಸಿಯೇಟ್ ಪ್ರೊ. ಡಾ. ಪ್ರತಿತ್ ಸಮ್ದಾನಿ ತಿಳಿಸಿದ್ದಾರೆ.

ದರೋಡೆ ಮಾಡುತ್ತಿದ್ದ ಐವರ ಬಂಧನ

ಬೆAಗಳೂರು, ಜ. ೧೬: ಪೊಲೀಸರ ಸೋಗಿನಲ್ಲಿ ಬಂದು ದರೋಡೆ ಮಾಡಿದ್ದ ಐವರು ವ್ಯಕ್ತಿಗಳನ್ನು ಮಹಾಲಕ್ಷ್ಮಿ ಲೇಔಟ್‌ನ ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಇಬ್ಬರು ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ತೊಡಗಿದವರಾಗಿದ್ದಾರೆ. ಈ ಗ್ಯಾಂಗ್‌ನಲ್ಲಿದ್ದವರು ಮನೆಯನ್ನು ದರೋಡೆ ಮಾಡುವುದಷ್ಟೇ ಅಲ್ಲದೇ, ಮನೆಯ ಮಾಲೀಕ ಹಾಗೂ ಆತನ ಪುತ್ರನನ್ನೂ ಅಪಹರಿಸಿದ್ದರು. ಪೊಲೀಸರ ಸೋಗಿನಲ್ಲಿ ಬಂದಿದ್ದ ದರೋಡೆಕೋರರು ಮನೆಯಲ್ಲಿದ್ದ ಚಿನ್ನಾಭರಣ ಸೇರಿದಂತೆ ೧೬ ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ಇದಷ್ಟೇ ಅಲ್ಲದೇ ಎರಡು ಬೈಕ್‌ಗಳನ್ನೂ ದರೋಡೆ ಮಾಡಿದ್ದು ಪೊಲೀಸರು ಬಂಧಿತರಿAದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ಬಾಲಕೃಷ್ಣ (೨೩), ಚೇತನ್ ಕುಮಾರ್ (೨೭) ಯಲಹಂಕ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್‌ಗಳಾಗಿದ್ದು, ಅವರ ಸಹವರ್ತಿಗಳಾದ ಪುನೀತ್ (೨೪), ಪೃಥ್ವಿ (೨೩), ರೋಹನ್ (೨೪) ಬಂಧಿತರ ಆರೋಪಿಗಳಾಗಿದ್ದಾರೆ.