ಮಡಿಕೇರಿ, ಜ. ೧೪: ರೋಟರಿ ಮಿಸ್ಟಿ ಹಿಲ್ಸ್ ಮತ್ತು ಮಂಗಳೂರಿನ ಫಾದರ್ ಮುಲ್ರ‍್ಸ್ ಆಸ್ಪತ್ರೆಗಳ ಸಹಯೋಗದಲ್ಲಿ ಜನವರಿ ೨೫ಕ್ಕೆ ಉಚಿತ ಸೀಳು ತುಟಿ ಶಿಬಿರ ಏರ್ಪಡಿಸಲಾಗಿದೆ. ಎಲ್ಲ ವಯಸ್ಸಿನ ಅರ್ಹ ಅಭ್ಯರ್ಥಿಗಳಿಗೂ ಉಚಿತ ಶುಶ್ರೂಷೆ ನೀಡಲಾಗುವುದು ಎಂದು ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ ಮತ್ತು ಮಂಗಳೂರಿನ ವೈದ್ಯ, ಸೀಳು ತುಟಿ ಯೋಜನೆಯ ನಿರ್ದೇಶಕ ಡಾ. ನವೀನ್ ರಾವ್ ತಿಳಿಸಿದ್ದಾರೆ.

ಅರ್ಹ ಅಭ್ಯರ್ಥಿಗಳು ಜನವರಿ ೨೦ ರೊಳಗೆ ಕೆಳಗೆ ಕಾಣಿಸಿರುವ ಮೊಬೈಲ್ ನಂಬರುಗಳಿಗೆ ವಿವರ ನೀಡುವಂತೆ ಕೋರಲಾಗಿದೆ. ಅನಿತಾ ಪೂವಯ್ಯ: ೯೪೪೯೯೮೨೯೨೫, ರಾಜೇಶ್: ೯೪೪೮೫೮೭೮೮೨, ಬಿ.ಜಿ. ಅನಂತ ಶಯನ: ೯೮೪೪೫೭೬೪೨೯.