ಮಡಿಕೇರಿ, ಜ. ೧೪: ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨೦೨೧-೨೨ನೇ ಸಾಲಿನ ೨ನೇ ಹಂತದ ವಾರ್ಡ್೧ ರ ವಾರ್ಡ್ ಸಭೆ ತಾ.೧೭ರಂದು ಅಪರಾಹ್ನ ೨.೩೦ ಗಂಟೆಗೆ ಪಂಚಾಯಿತಿ ಸಭಾಂಗಣದಲ್ಲಿ ವಾರ್ಡ್ ಅಧ್ಯಕ್ಷ ಎಂ.ಎನ್. ಮಾದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ವಾರ್ಡ್ ೨ ಮತ್ತು ೩ ರ ಸಭೆಯು ಅಪರಾಹ್ನ ೪ ಗಂಟೆಗೆ ದುಬಾರೆ ತಮಿಳು ಶಾಲೆಯಲ್ಲಿ ವಾರ್ಡ್ ಅಧ್ಯಕೆÀ್ಷ ವಿಶಾಲಕ್ಷಿ ಹಾಗೂ ಮಹೇಶ್ವರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ವಾರ್ಡ್೪ ರ ಸಭೆಯು ಬೆಳಿಗ್ಗೆ ೧೧ ಗಂಟೆಗೆ ಕಳತ್ಮಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಡ್ ಅಧ್ಯಕ್ಷ ವಿ.ವಿ.ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಗ್ರಾಮಸಭೆ

ಗ್ರಾಮ ಪಂಚಾಯಿತಿಯ ೨೦೨೧-೨೨ನೇ ಸಾಲಿನ ೨ನೇ ಹಂತದ ಗ್ರಾಮ ಸಭೆ ತಾ.೨೪ರಂದು ಪೂರ್ವಾಹ್ನ ೧೧ ಗಂಟೆಗೆ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕೆÀ್ಷ ಶಾಂತಿ ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.