ಮಡಿಕೇರಿ, ಜ.೧೪: ಎಲ್‌ಪಿಜಿ ಸಿಲಿಂಡರ್‌ಗಳನ್ನು ಗ್ರಾಹಕರಿಗೆ ಡೋರ್ ಡೆಲಿವರಿ ನೀಡುವ ಸಂದರ್ಭದಲ್ಲಿ ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರುತ್ತಿವೆ. ಸಿಲಿಂಡರ್‌ಗಳನ್ನು ಡೋರ್ ಡೆಲಿವರಿ ನೀಡುವ ಕುರಿತು ಸರ್ಕಾರದ ಆದೇಶದಲ್ಲಿ ನಿಗದಿಪಡಿಸಿರುವ ದರಗಳ ಪ್ರಕಾರ ಗ್ರಾಹಕರಿಂದ ಹಣ ಪಡೆಯಬೇಕಾಗಿದೆ.

ಆದರೆ ಡೆಲಿವರಿ ಸಿಬ್ಬಂದಿಗಳು ಗ್ರಾಹಕರಿಂದ ಹೆಚ್ಚಿನ ಹಣ ಪಡೆಯುವುದು ಎಲ್‌ಪಿಜಿ (ರೆಗ್ಯೂಲೇಷನ್ ಆಫ್ ಸಪ್ಲೆöÊ ಅಂಡ್ ಡಿಸ್ಟಿçಬ್ಯೂಷನ್)ಆದೇಶ ೨೦೦೦ ಅಟಚಿuse ೯(ಆ) SಅಊಇಆUಐಇ-೧ (See ಛಿಟಚಿuse೩(೪))೧೧ ರ ಸ್ಪಷ್ಟ ಉಲ್ಲಂಘನೆಯಾಗಿದೆ.

ಈ ಆದೇಶಾನುಸಾರ ಗ್ಯಾಸ್ ಸಿಲಿಂಡರ್‌ಗಳನ್ನು ಸರಬರಾಜು ಮಾಡುವ ಸಂದರ್ಭದಲ್ಲಿ ಗ್ಯಾಸ್ ಏಜೆನ್ಸಿಯವರುಗಳು ಸರ್ಕಾರ ನಿಗದಿಪಡಿಸಿದ ಮೊತ್ತವನ್ನು ಹೊರತುಪಡಿಸಿ ಹೆಚ್ಚುವರಿ ಮೊತ್ತ ಸಂಗ್ರಹಿಸದAತೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ಈಗಾಗಲೇ ಎಲ್ಲಾ ಗ್ಯಾಸ್ ಏಜೆನ್ಸಿದಾರರಿಗೆ ನೀಡಲಾಗಿದೆ. ಹೆಚ್ಚಿನ ದರ ವಸೂಲಿ ಬಗ್ಗೆ ಉಪ ನಿರ್ದೇಶಕರ ಕಚೇರಿಗೆ ಅಥವಾ ಆಯಾಯ ತಾಲೂಕಿನ ತಹಶೀಲ್ದಾರ್ ಕಚೇರಿಗೆ ದೂರನ್ನು ಸಲ್ಲಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ಅವರು ತಿಳಿಸಿದ್ದಾರೆ.