ಒಂದಾನೊAದು ಕಾಲದಲ್ಲಿ ಇಂದ್ರದ್ಯುಮ್ನನೆAಬುವವನು ಪಾಂಡ್ಯ ದೇಶವನ್ನು ಧರ್ಮದಿಂದ ಆಳುತ್ತಿದ್ದನು. ಅವನು ಶ್ರೀಮನ್ನಾರಾಯಣನ ಪರಮಭಕ್ತ. ರಾಜ್ಯವನ್ನು ತೊರೆದು ಮಲಯ ಪರ್ವತದ ತಪ್ಪಲಿನಲ್ಲಿ ಆಶ್ರಮವನ್ನು ಕಟ್ಟಿ ಮೌನವ್ರತ ಧಾರಣೆ ಮಾಡಿ ಶ್ರೀಹರಿಯ ನಾಮಸ್ಮರಣೆ ಮಾಡುತ್ತಾ ತಪೋನಿರತನಾಗಿಬಿಟ್ಟನು.

ಇಂದ್ರದ್ಯುಮ್ನನ ಕುಲಪುರೋಹಿತರಾದ ಅಗಸ್ತö್ಯ ಋಷಿಗಳು ರಾಜನು ಮಾಡಿದ್ದನ್ನು ಕೇಳಿ ಬಹಳ ಹರುಷಗೊಂಡರು. ಅವನ ಘನತೆಯನ್ನು ಪ್ರತ್ಯಕ್ಷವಾಗಿಯೇ ನೋಡುವ ಹಂಬಲದಿAದ ಅವನ ಆಶ್ರಮಕ್ಕೆ ಹೊರಟು ಬಂದರು. ಆಗ ರಾಜನು ಶ್ರೀಹರಿಯ ಧ್ಯಾನದಲ್ಲಿ ತನ್ನನ್ನು ತಾನು ಮರೆತು ಕುಳಿತಿದ್ದನು. ಗುರುಗಳು ಬಂದದ್ದನ್ನು ಲಕ್ಷಿಸಲೇ ಇಲ್ಲ. ಇದರಿಂದ ಕೋಪಗೊಂಡ ಋಷಿಗಳು ‘‘ನೀನು ಮದಾಂಧವಾದ ಅನೆಯಾಗು” ಎಂದು ಶಪಿಸಿ ಹೊರಟು ಹೋದರು.

ತನ್ನ ಅನುಷ್ಠಾನವು ಮುಗಿದ ಬಳಿಕ ಇಂದ್ರದ್ಯುಮ್ನನು ಕಣ್ತೆರೆದನು, ಅಗಸ್ಯರು ಬಂದು ಹೋದದ್ದನ್ನು ಅವರು ಶಾಪಕೊಟ್ಟದ್ದು ಎಲ್ಲವನ್ನು ತಪಃ ಶಕ್ತಿಯಿಂದ ಅರಿತನು. ಸರಿ ಇದೆಲ್ಲವೂ ತನ್ನ ಪ್ರಾರಬ್ಧಕ್ಕನುಗುಣವಾಗಿ ನಡೆಯಿತೆಂದು ಸುಮ್ಮನಾದನು. ರಾಜನ ಮರಣದ ನಂತರ ತ್ರಿಕೂಟ ಪರ್ವತದ ಸುತ್ತಲಿರುವ ದಟ್ಟವಾದ ಅರಣ್ಯದಲ್ಲಿ ಬಿದಿರಿನ ಮೆಳೆಗಳು ಬಹಳವಾಗಿರುವದರಿಂದ ಆನೆಗಳ ಸಂಖ್ಯೆ ಅತಿಯಾಗಿದ್ದವು. ಇಲ್ಲಿ ಆನೆಗಳ ಗುಂಪಿನಲ್ಲಿ ಗಂಡಾನೆಯಾಗಿ ಜನಿಸಿದನು, ಬಹು ಬೃಹದಾಕಾರನಾಗಿಯೂ ಅಸಮಾನ ಬಲಾಢ್ಯನಾಗಿಯೂ ಬೆಳೆದು ಆ ಅರಣ್ಯದಲ್ಲಿನ ಸಮಸ್ತ ಗಜ ವೃಂದಕ್ಕೆ ಅಧಿಪತಿಯಾಗಿ ‘‘ಗಜೇಂದ್ರ’’ ಎಂದು ಮೆರೆಯತೊಡಗಿದನು.

ಮತ್ತೊಂದು ಕಡೆ ದೇವಲೋಕದ ಗಂಧರ್ವರಲ್ಲಿ ‘‘ಹೂಹೂ’’ ಎಂಬುವನು ಒಮ್ಮೆ ಭೂಮಿಗೆ ಬಂದು ಒಂದು ಉದ್ಯಾನದಲ್ಲಿ ವಿಹರಿಸುತ್ತಿರು ವಾಗ ಅವನೆದುರು ದೇವಲ ಋಷಿಗಳು ಬರುತ್ತಿದ್ದರು. ಆ ಋಷಿಗಳು ವೃದ್ಧಾಪ್ಯದಿಂದ ಕೃಶವಾಗಿ ಕುರೂಪಿಯಾಗಿದ್ದರು. ಇವರನ್ನು ಕಂಡ ಹೂಹೂ ಹಾಸ್ಯದಿಂದ ನಕ್ಕನು. ಇದರಿಂದ ಋಷಿಗಳು ಸಿಟ್ಟಾಗಿ, "ಎಲೈ ಮಧಾಂಧಾ, ನೀನು ಈಗಿಂದೀಗಲೇ ಕ್ರೂರ ಜಂತುವಾದ ಮೊಸಳೆಯಾಗು’’ ಎಂದು ಶಪಿಸಿದರು. ತಪ್ಪಿನ ಅರಿವಾಗಿ ಹೂಹೂ ಪಶ್ಚಾತ್ತಾಪದಿಂದ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿದನು. ಆಗ ದೇವಲರು ಕರುಣೆಯಿಂದ ‘‘ಗಂಧರ್ವ ಏಳು, ನಾನು ಕೊಟ್ಟ ಶಾಪವು ಸುಳ್ಳಾಗಲಾರದು, ಮೊಸಳೆ ಜನ್ಮ ನೀನು ತಾಳಿದಾಗ ನಿನ್ನಂತೆ ಶಾಪಗ್ರಸ್ಥವಾದ ಒಂದು ಆನೆಯ ಕಾಲನ್ನು ಹಿಡಿ, ಆಗ ಆ ಪುಣ್ಯಾತ್ಮನ ಪ್ರಾರ್ಥನೆಗೆ ಒಲಿದು ಶ್ರೀ ಮಹಾವಿಷ್ಣುವು ಅವನನ್ನು ಉದ್ಧರಿಸಲು ಬರುವನು, ಆಗ ನಿನ್ನ ಶಾಪವಿಮೋಚನೆಯಾಗುತ್ತದೆ" ಎಂದು ಹೇಳಿ ಹೊರಟು ಹೋದರು.

ಹೂಹೂ ಗಂಧರ್ವನು ಬೃಹದಾಕಾರದ ಮೊಸಳೆಯಾಗಿ ತ್ರಿಕೂಟ ಪರ್ವತದ ಅರಣ್ಯದ ಮಧ್ಯದಲ್ಲಿದ್ದ ಋತುಮಂಥ ಎಂಬ ಸರೋವರವನ್ನು ಹೊಕ್ಕು ಅಲ್ಲಿ ವಾಸಿಸತೊಡಗಿದನು. ಒಮ್ಮೆ ಗಜೇಂದ್ರನು ಅದೇ ಋತುಮಂಥ ಸರೋವರದಲ್ಲಿ ತನ್ನ ಪರಿವಾರ ಸಮೇತ ಇಳಿದು ಸ್ವಚ್ಛಂದವಾಗಿ ವಿಹರಿಸಿ ದಡಕ್ಕೆ ಬರುವ ಸಮಯಕ್ಕೆ ಸರಿಯಾಗಿ ಅಲ್ಲೇ ವಾಸಿಸುತ್ತಿದ್ದ ಮೊಸಳೆಯೂ (ಹೂಹೂ ಗಂಧರ್ವನು) ಗಜೇಂದ್ರನ ಕಾಲನ್ನು ಹಿಡಿಯಿತು. ಗಜೇಂದ್ರನು ಕಾಲನ್ನು ಝಾಡಿಸುತ್ತ ಮೊಸಳೆಯ ಹಿಡಿತದಿಂದ ತಪ್ಪಿಸಿಕೊಳ್ಳಲು ಬಹಳವಾಗಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವನ ಪರಿವಾರದವರು ಪ್ರಯತ್ನಿಸಿದರೂ ಅವರೆಲ್ಲರ ಶಕ್ತಿ ಮೀರಿ ಮೊಸಳೆಯೂ ಗಜೇಂದ್ರನನ್ನು ನೀರಿನಲ್ಲಿ ಜಗ್ಗ ತೊಡಗಿತು. ತಮ್ಮಿಂದ ಸಾಧ್ಯವಿಲ್ಲವೆಂದು ಎಲ್ಲ ಆನೆಗಳು ಹಿಂತಿರುಗಿದವು. ಗಜೇಂದ್ರನು ನೋವಿನಿಂದ ಪರಿತಪಿಸುತ್ತಿರಲು ಅವನಿಗೆ ತನ್ನ ಪೂರ್ವಜನ್ಮದ ಸ್ಮರಣೆಯಾಯಿತು. ತನ್ನ ಹಿಂದಿನ ಜನ್ಮದಲ್ಲಿ ಶ್ರೀಹರಿಯ ಭಕ್ತನಾಗಿದ್ದು ನೆನೆದು ಶ್ರೀಹರಿಯನ್ನು ಭಕ್ತಿಯಿಂದ ಸ್ತೋತ್ರ ಮಾಡತೊಡಗಿದನು. ಗಜೇಂದ್ರನು ಮರಣ ಸಂಕಟದಿAದ ತೊಳಲಾಡುತ್ತಿದ್ದರೂ ಸಹ ಅದನ್ನು ಮರೆತು ಶ್ರೀಹರಿಯ ಪಾದಾರವಿಂದಗಳಲ್ಲಿ ಮನಸ್ಸಿಟ್ಟು ಕೂಗಲು ಶ್ರೀಮನ್ನಾರಾಯಣನು ಗರುಡವಾಹನನಾಗಿ ಬಂದು ತನ್ನ ಸುದರ್ಶನ ಚಕ್ರದಿಂದ ಗಜೇಂದ್ರನ ಕಾಲನ್ನು ಎಳೆಯುತ್ತಿದ್ದ ಮೊಸಳೆಯನ್ನು ಪ್ರಹರಿಸಿ ಕತ್ತರಿಸಿದನು. ಕೂಡಲೇ ಅದರೊಳಗಿಂದ ಹೂಹೂ ಗಂಧರ್ವನು ತನ್ನ ಮೂಲ ರೂಪದಿಂದೆದ್ದು ಬಂದು ಶ್ರೀಮನ್ನಾರಾಯಣನಿಗೆ ಪ್ರದಕ್ಷಿಣೆ ನಮಸ್ಕಾರಗಳನ್ನರ್ಪಿಸಿ ತನ್ನ ಲೋಕಕ್ಕೆ ಹೊರಟು ಹೋದನು. ನಂತರ ಶ್ರೀಹರಿಯು ಗರುಡನಿಂದ ಇಳಿದು ಗಜೇಂದ್ರನ ಮೈದಡವಿ ಸಮಾಧಾನ ಪಡಿಸಿದನು. ಶ್ರೀಹರಿಯ ಸ್ಪರ್ಶದಿಂದ ಗಜೇಂದ್ರನು ತನ್ನ ನಿಜರೂಪವಾದ ಇಂದ್ರದ್ಯುಮ್ನನಾಗಿ ಶ್ರೀಹರಿಯ ಮುಂದೆ ನಿಂತನು, ಶ್ರೀಹರಿಯು ಗಜೇಂದ್ರನಿಗೆ (ಇಂದ್ರದ್ಯುಮ್ನನಿಗೆ) ಮೋಕ್ಷವನ್ನು ಕರುಣಿಸಿ ತನ್ನ ಜೊತೆ ವೈಕುಂಠಕ್ಕೆ ಕರೆದೊಯ್ದನು. ಭಕ್ತಿಯಿಂದ ಭಜಿಸುವ ಭಕ್ತರು ಸಂಕಟದಲ್ಲಿದ್ದಾಗ ನಂಬಿದ ಭಕ್ತರನ್ನು ಎಂದಿಗೂ ಕೈಬಿಡುವುದಿಲ್ಲ, ಶ್ರೀಹರಿಯು ಅವರನ್ನು ರಕ್ಷಿಸುತ್ತಾನೆ. ಅಗಸ್ತö್ಯರು ಶಾಪ ನೀಡಿದುದು ಕೂಡ ಗಜೇಂದ್ರ ಮೋಕ್ಷವೆಂಬ ಮಹಾನ್ ಚರಿತ್ರೆಗೆ ಕಾರಣವಾಯಿತು.

ಕ್ರೌಂಚನಿಗೆ ಪರ್ವತವಾಗುವಂತೆ ಅಗಸ್ತö್ಯರ ಶಾಪ

ಅಗಸ್ತö್ಯರು ವಿಂಧ್ಯ ಪರ್ವತವನ್ನು ಮಣಿಸಿ ದಕ್ಷಿಣ ದಿಕ್ಕಿಗೆ ಪ್ರಯಾಣ ಮಾಡುತ್ತಿರುವಾಗ ಕ್ರೌಂಚನೆAಬ ರಾಕ್ಷಸನು ಅಗಸ್ತö್ಯರ ದಾರಿ ದಿಕ್ಕಿಗೆ ಅಡ್ಡಲಾಗಿ ಬಂದನು. ಕ್ರೌಂಚನು ತನ್ನ ಮಾಯಾಶಕ್ತಿಯಿಂದ ಎಲ್ಲ ಕಡೆಯೂ ಮಳೆಯನ್ನು ಸುರಿಸುವ ಸಾಮರ್ಥ್ಯವನ್ನು ಹೊಂದಿದ್ದ. ಇದರಿಂದ ಜೀವಿಗಳಿಗೆ ತೊಂದರೆ ಕೊಡಲು ಉದ್ಯುಕ್ತನಾದಾಗ ಅಗಸ್ಯರು ತಮ್ಮ ಕಮಂಡಲುವಿನಲ್ಲಿದ್ದ ನೀರನ್ನು ಕ್ರೌಂಚ ರಾಕ್ಷಸನ ಮೇಲೆ ಎರಚಿ ‘ನೀನು ಪರ್ವತವಾಗು' ಎಂದು ಶಾಪವಿತ್ತರು. ಆಗ ಅವನು ಪರ್ವತವಾದನು. ಅವನು ಅಗಸ್ತö್ಯರಿಗೆ ಶರಣಾಗತನಾಗಲು, ‘ಸುಬ್ರಹ್ಮಣ್ಯನು ಮುಂದೊಮ್ಮೆ ಇಲ್ಲಿಗೆ ಬಂದು ನಿನ್ನ ಮೇಲೆ ದಿವ್ಯಾಸ್ತçವನ್ನು ಪ್ರಯೋಗಿಸಿದಾಗ ನಿನಗೆ ಮೊದಲಿನ ರೂಪವು ಬರುವುದು' ಎಂದು ಅವನಿಗೆ ಹೇಳಿ ಅಗಸ್ತö್ಯರು ಮುಂದೆ ಪ್ರಯಾಣ ಮಾಡಿದರು. ಅದೇ ರೀತಿ ಸುಬ್ರಹ್ಮಣ್ಯನ ಅವತಾರವಾದ ಬಳಿಕ ತಾರಕಾಸುರನ ವಧೆಗೆ ತೆರಳಿದ ಸುಬ್ರಹ್ಮಣ್ಯನಿಗೆ ಅನೇಕ ಅಸುರರು ಯುದ್ಧದಲ್ಲಿ ಎದುರಾಗುತ್ತಾರೆ. ಆ ಸಂದರ್ಭ ಬಲಿಯ ಮಗನಾದ ಮಹಾಬಲನಾದ ಬಾಣನೆಂಬ ಹೆಸರಿನ ದೈತ್ಯನು ಕ್ರೌಂಚ ಪರ್ವತವನ್ನು ಆಶ್ರಯಿಸಿ ದೇವತೆಗಳನ್ನು ಬಾಧಿಸ ತೊಡಗಿದನು. ಉದಾರ ಬುದ್ಧಿಯವನಾದ ಮಹಾಸೇನ ಸುಬ್ರಹ್ಮಣ್ಯನು ಸುರಶತ್ರುವಾದ ಬಾಣನನ್ನು ಹಿಂಬಾಲಿಸಿ ಹೋದನು. ಆ ಬಾಣಾಸುರನು ಕಾರ್ತಿಕೇಯನ ಭಯದಿಂದಾಗಿ ಕ್ರೌಂಚಪರ್ವತವನ್ನೇ ಮರೆಹೊಕ್ಕನು. ಅದರಿಂದ ಬಹಳವಾಗಿ ಕೋಪಗೊಂಡ ಕಾರ್ತಿಕೇಯನು ಅಗ್ನಿಯಿಂದ ತನಗೆ ಕೊಡಲ್ಪಟ್ಟಿದ್ದ ಶಕ್ತಾö್ಯಯುಧದಿಂದ ಕ್ರೌಂಚಪಕ್ಷಿಗಳ ಕಿಲ ಕಿಲ ಧ್ವನಿಯಿಂದ ನಿನಾದಿತವಾಗಿದ್ದ ಕ್ರೌಂಚಪರ್ವತವನ್ನೇ ಸೀಳಿಬಿಟ್ಟನು. ಆ ಕ್ರೌಂಚ ಪರ್ವತವು ವಿಶಾಲವೃಕ್ಷ ಗಳಿಂದ ಸಮೃದ್ಧವಾಗಿದ್ದು ಹಚ್ಚಗೆ ಕಾಣುತ್ತಿದ್ದಿತು. ಕುಮಾರಸ್ವಾಮಿಯು ಶಕ್ತಾö್ಯಯುಧದಿಂದ ಪರ್ವತವನ್ನು ಭೇದಿಸಿದೊಡನೆಯೇ ಆ ಪರ್ವತದಲ್ಲಿ ವಾಸಮಾಡುತ್ತಿದ್ದ ಕಪಿಗಳೂ ಮತ್ತು ಆನೆಗಳೂ ಭಯಗೊಂಡವು. ವೃಕ್ಷಗಳ ಮೇಲಿದ್ದ ಪಕ್ಷಿಗಳು ಭ್ರಾಂತಿಗೊAಡು ಮೇಲಕ್ಕೆ ಹಾರಿದವು, ವೃಕ್ಷಗಳ ಮೇಲಿದ್ದ ಹಾವುಗಳು ಕೆಳಗೆ ಬಿದ್ದುವು. ಗೋಲಾಂಗೂಲಗಳೆAಬ ಕಪಿಗಳೂ ಮತ್ತು ಕರಡಿಗಳೂ ಚೀತ್ಕಾರಮಾಡುತ್ತಾ ಓಡಿಹೋಗುತ್ತಿದ್ದು, ಆ ಧ್ವನಿಯಿಂದ ಪರ್ವತದಲ್ಲಿ ಪ್ರತಿಧ್ವನಿಯನ್ನುಂಟು ಮಾಡಿದುವು. ಭಯಗೊಂಡು ಆರ್ತನಾದ ಮಾಡುತ್ತಾ ಓಡಿಹೋಗುತ್ತಿದ್ದ ಜಿಂಕೆಗಳ ಶಬ್ದದಿಂದ ಆ ಪರ್ವತದ ವನ ಪ್ರದೇಶವು ತುಂಬಿಹೋಯಿತು. ಗುಹೆಗಳಿಂದ ಹೊರಬಂದು ದಿಕ್ಕಾಪಾಲಾಗಿ ಓಡಿಹೋಗುತ್ತಿದ್ದ ಶರಭಗಳಿಂದಲೂ ಮತ್ತು ಸಿಂಹಗಳಿAದಲೂ ಆ ಪರ್ವತವು ಶೋಚನೀಯ ವಾದ ಸ್ಥಿತಿಯನ್ನು ಹೊಂದಿದ್ದರೂ ಶೋಭಾಯಮಾನವಾಗಿರುವಂತೆಯೇ ಕಾಣುತ್ತಿದ್ದಿತು. ಕ್ರೌಂಚಪರ್ವತದ ಶಿಖರದಲ್ಲಿ ವಾಸಮಾಡುತ್ತಿದ್ದ ವಿದ್ಯಾಧರರೂ ಮತ್ತು ಕಿನ್ನರರೂ ಶಕ್ತಾö್ಯಯುಧ ಪ್ರಹಾರದಿಂದ ಉಂಟಾದ ಶಬ್ದದಿಂದ ಭ್ರಾಂತರಾಗಿ ಆಕಾಶಕ್ಕೆ ಹಾರಿದರು. ಶಕ್ತಾö್ಯಯುಧ ಪ್ರಹಾರದಿಂದ ಪ್ರದೀಪ್ತವಾಗಿದ್ದ ಶ್ರೇಷ್ಠವಾದ ಕ್ರೌಂಚಪರ್ವತ ದಿಂದ ವಿಚಿತ್ರವಾದ ಆಭರಣಗಳನ್ನೂ ಮತ್ತು ಮಾಲೆಗಳನ್ನು ಧರಿಸಿದ್ದ ನೂರಾರು-ಸಾವಿರಾರು ದೈತ್ಯರು ಹೊರ ಬಂದರು. ಕುಮಾರನ ಅನುಚರರು ಹಾಗೆ ಹೊರಬಂದ ದೈತ್ಯರನ್ನು ಯುದ್ಧದಲ್ಲಿ ಆಕ್ರಮಿಸಿ ಸಂಹರಿಸಿದರು. ಭಗವಾನ್ ಕುಮಾರಸ್ವಾಮಿಯೂ ಪರಮ ಕ್ರುದ್ಧನಾಗಿ ದೈತ್ಯೇಂದ್ರನಾದ ಬಲಿಯ ಮಗನಾದ ಬಾಣನನ್ನು ಅವನ ತಮ್ಮನ ಸಹಿತವಾಗಿ ದೇವಪತಿಯಾದ ಇಂದ್ರನು ವೃತ್ರಾಸುರನನ್ನು ಸಂಹರಿಸಿದAತೆ ಸಂಹರಿಸಿದನು. ತನ್ನ ಶರೀರವನ್ನು ಕೆಲವು ಸಮಯಗಳಲ್ಲಿ ಏಕರೂಪವಾಗಿಯೇ ಇದ್ದುಕೊಂಡು ಕ್ರೌಂಚಪರ್ವತವನ್ನು ಶಾಕ್ತಾö್ಯಯುಧ ದಿಂದ ಸೀಳಿದನು. ಕುಮಾರಸ್ವಾಮಿಯು ಬಿಡುತ್ತಿದ್ದ ಶಕ್ತಾö್ಯಯುಧವು ಶತ್ರುಗಳನ್ನು ಸಂಹರಿಸಿ ಪುನಃ ಅವನ ಕೈಯನ್ನೇ ಸೇರುತ್ತಿದ್ದಿತು. ಗುಹನು ಅಂತಹ ಪ್ರಭಾವಶಾಲಿಯಾಗಿದ್ದನು. ಮೇಲಾಗಿ ಶೌರ್ಯಾದಿ ಗುಣ ಗಳಿಂದಲೂ, ತೇಜಸ್ಸಿನಿಂದಲೂ, ಯಶಸ್ಸಿನಿಂದಲೂ, ಕಾಂತಿಯಿAದಲೂ ಸಂಪನ್ನನಾಗಿದ್ದನು. ಅಂತಹ ಅತುಲಪರಾಕ್ರಮಿ ಯಾದ ಭಗವಾನ್ ಕಾರ್ತಿಕೇಯನು ಕ್ರೌಂಚಪರ್ವತವನ್ನು ಧ್ವಂಸ ಮಾಡಿದನು. ಆ ಸಂದರ್ಭ ಕ್ರೌಂಚ ಪರ್ವತವು ಮಾಯವಾಯಿತು. ಅಗಸ್ತö್ಯರ ಶಾಪ ವಿಮೋಚನೆ ಗೊಂಡು ಆಗ ಕ್ರೌಂಚನು ನೈಜ ಅಸುರ ರೂಪ ತಾಳಿದನು. ಬಳಿಕ ಶಾಂತ ಸ್ವಭಾವದವನಾದನು. -ಜಿ. ರಾಜೇಂದ್ರ.