ಗೋಣಿಕೊಪ್ಪಲು, ಜ.೧೪: ಕಳೆದ ನಾಲ್ಕು ದಿನಗಳಿಂದ ತೂಚಮಕೇರಿ ಬಳಿ ಬೀಡು ಬಿಟ್ಟಿರುವ ಹುಲಿಯ ಯಾವುದೇ ಕುರುಹುಗಳು, ಹೆಜ್ಜೆ ಗುರುತುಗಳು ಪತ್ತೆಯಾಗದ ಕಾರಣ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಇದೀಗ ಹಲವಾರು ಸ್ಥಳಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಿ ರಾತ್ರಿಯ ವೇಳೆ ಹುಲಿ ಸಂಚಾರ ನಡೆಸಿರಬಹುದೇ ಎಂದು ಕಾರ್ಯಾಚರಣೆ ತಂಡ ಗಮನಿಸುತ್ತಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ತೂಚಮಕೇರಿ ಶಾಲೆಯ ಬಳಿ ೫೦ ಕ್ಕೂ ಹೆಚ್ಚಿನ ಸಿಬ್ಬಂದಿಗಳು, ಎರಡು ಸಾಕಾನೆಗಳು, ವೈದ್ಯರು, ಅರವಳಿಕೆ ತಜ್ಞರು ಬೀಡು ಬಿಟ್ಟಿದ್ದಾರೆ. ಸಮೀಪದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸಿ ಹುಲಿಯ ಬಗ್ಗೆ ಮಾಹಿತಿ ಕಲೆ ಹಾಕಲು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಎಲ್ಲಿಯೂ ಹುಲಿಯ ಸಂಚಾರದ ಬಗ್ಗೆ ತಂಡಕ್ಕೆ ಮಾಹಿತಿ ಲಭಿಸಿಲ್ಲ.

ದ.ಕೊಡಗಿನ ಜನರನ್ನು ಭಯ ಭೀತಿಗೊಳಿಸಿದ್ದ ಹುಲಿಯ ಸಂಚಾರ ಇದೀಗ ಕಂಡು ಬಾರದೇ ಇರುವುದರಿಂದ ಈ ಭಾಗದ ಗ್ರಾಮಸ್ಥರಿಗೆ ಕೊಂಚ ನೆಮ್ಮದಿ ತಂದಿದೆ. ಕೂಂಬಿAಗ್ ಕಾರ್ಯಾಚರಣೆಗೆ ಬಂದಿದ್ದ ತಿತಿಮತಿ ಮತ್ತಿಗೋಡು ಸಾಕಾನೆಗಳ ಶಿಬಿರದ ಸಾಕಾನೆಗಳಾದ ಮಹೇಂದ್ರ ಹಾಗೂ ಭೀಮ ಈ ಎರಡು ಆನೆಗಳು ಬೆಳಿಗ್ಗೆ ವೇಳೆ ಕೂಬಿಂಗ್ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದು ಸಂಜೆಯ ವೇಳೆ ಕ್ಯಾಂಪ್ ಬಳಿ ವಿಶ್ರಾಂತಿ ಪಡೆಯುತ್ತಿವೆ.

ತಿತಿಮತಿ ವಲಯದ ಎಸಿಎಫ್ ಉತ್ತಪ್ಪ, ನಾಗರಹೊಳೆ ರಾಷ್ಟಿçÃಯ ಉದ್ಯಾನದ ಎಸಿಎಫ್ ಗೋಪಾಲ್, ಪೊನ್ನಂಪೇಟೆ ಆರ್.ಎಫ್.ಒ.ರಾಜಪ್ಪ, ದಿವಾಕರ್ ಹಾಗೂ ಇತರ ಅಧಿಕಾರಿಗಳು ಆನೆ ಮಾವುತರು, ಕಾವಾಡಿಗರು ಕೂಂಬಿAಗ್ ತಂಡವನ್ನು ಮುನ್ನೆಡೆಸುತ್ತಿರುವ ಉಪವಲಯ ಅರಣ್ಯಾಧಿಕಾರಿ ದಿವಾಕರ್, ಗಣೇಶ ಶೇಟ್, ಸಿ.ಡಿ.ಬೋಪಣ್ಣ ತಂಡ ರಚನೆ, ತಾಂತ್ರಿಕ ಸಹಾಯಕ ಅರಣ್ಯಾಧಿಕಾರಿಗಳಾದ ರಕ್ಷಿತ್, ಸಚಿನ್ ಚೌಗಾಲ ಹಾಗೂ ಸಿಬ್ಬಂದಿಗಳು

ಶುಕ್ರವಾರ ಮುಂಜಾನೆಯ ವೇಳೆ ಆಗಮಿಸಿದ ಹಿರಿಯ ಅಧಿಕಾರಿಗಳಾದ ಡಿಎಫ್‌ಒ ಚಕ್ರಪಾಣಿಯವರೊಂದಿಗೆ ಚರ್ಚೆ ನಡೆಸಿ ಮುಂದಿನ ಕಾರ್ಯಾಚರಣೆ ಬಗ್ಗೆ ವಿವರ ಪಡೆದರು. ಸಾಕಾನೆಗಳ ಸಹಾಯದಿಂದ ಕೂಂಬಿAಗ್ ಕಾರ್ಯಾಚರಣೆ ಮುಂದುವರಿಸುವAತೆ ಡಿಎಫ್‌ಒ ಚಕ್ರಪಾಣಿ ಕಾರ್ಯಾಚರಣೆ ತಂಡಕ್ಕೆ ಸೂಚನೆ ನೀಡಿದರು.

-ಹೆಚ್.ಕೆ.ಜಗದೀಶ್