ಸಿದ್ದಾಪುರ, ಜ.೧೪: ಕಾಡಾನೆ ದಾಳಿಗೆ ವಿದ್ಯಾರ್ಥಿಯೋರ್ವ ಸಾವನ್ನಪ್ಪಿರುವ ಘಟನೆ ಅರೆಕಾಡು ರಸ್ತೆಯಲ್ಲಿ ನಡೆದಿದೆ. ನೆಲ್ಯಹುದಿಕೇರಿ ಗ್ರಾಮದ ನಲ್ವತೇಕ್ರೆ ನಿವಾಸಿ ಕಬೀರ್ ಎಂಬವರ ಪುತ್ರ ವಿದ್ಯಾರ್ಥಿ ಮೊಹಮ್ಮದ್ ಆಶಿಕ್ (೧೯) ಮೃತ ವಿದ್ಯಾರ್ಥಿ.

ಆಶಿಕ್ ಹಾಗೂ ಆತನ ಸ್ನೇಹಿತ ಅಸ್ಮಲ್ ಬೈಕ್ ನಲ್ಲಿ ಅರೆಕಾಡಿನಲ್ಲಿರುವ ತಮ್ಮ ಸಂಬAಧಿಕರ ಮನೆಗೆ ತೆರಳಿ ಹಿಂತಿರುಗಿ ನೆಲ್ಯಹುದಿಕೇರಿಗೆ ಬೈಕಿನಲ್ಲಿ ಬರುತ್ತಿದ್ದ ಸಂದರ್ಭ ಹಠಾತ್ತÀನೆ ಕಾಡಾನೆಯೊಂದು ಕಾಫಿ ತೋಟ ದಿಂದ ರಸ್ತೆಗೆ ಬಂದು ಬೈಕ್ ಸವಾರರ ಮೇಲೆ ದಾಳಿ ಮಾಡಿದೆ. ಕಾಡಾನೆ ದಾಳಿಗೆ ಆಶಿಕ್ ಎದೆಯ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಆಶಿಕ್‌ನನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸುವ ಸಂದರ್ಭ ಸಾವನ್ನಪ್ಪಿದ್ದಾನೆ.

(ಮೊದಲ ಪುಟದಿಂದ) ಅಸ್ಮಲ್‌ಗೆ ಗಂಭೀರ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆೆ. ಗಾಯಾಳುವನ್ನು ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದು, ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಭೇಟಿನೀಡಿ ಪರಿಶೀಲಿಸಿದರು. -ವಾಸು.