ಮಡಿಕೇರಿ, ಜ.೧೪: ನಗರಸಭೆ ವತಿಯಿಂದ ನೂತನವಾಗಿ ಖರೀದಿಸಿರುವ ೩೩ ಲಕ್ಷ ರೂ. ವೆಚ್ಚದ ಜೆಸಿಬಿ ಯಂತ್ರವನ್ನು ಶಾಸಕ ಎಂ.ಪಿ.ಅಪ್ಪಚ್ಚುರAಜನ್ ಅವರು ಸಾರ್ವಜನಿಕರಿಗೆ ಸಮರ್ಪಿಸಿದರು.

ನಗರದ ನಗರಸಭೆ ಆವರಣದಲ್ಲಿ ಹೊಸ ಜೆಸಿಬಿ ಯಂತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ಮಾಡಿದ ನಂತರ ಮಾತನಾಡಿದ ಶಾಸಕರು ನಗರಸಭೆ ವ್ಯಾಪ್ತಿಯಲ್ಲಿನ ತುರ್ತು ಕೆಲಸಗಳಿಗೆ ಜೆಸಿಬಿ ಯಂತ್ರ ಉಪಯೋಗಿಸ ಬಹುದಾಗಿದೆ ಎಂದು ಅವರು ತಿಳಿಸಿದರು. ನಗರಸಭೆ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿಗೆ ಎರಡು ಹೊಸ ಟ್ರಾö್ಯಕ್ಟರ್‌ನ್ನು ಖರೀದಿ ಮಾಡಲಾಗುವುದು. ಹಾಗೆಯೇ ಒಂದು ಟಿಪ್ಪರ್‌ನ್ನು ಖರೀದಿಸಲಾಗುವುದು, ಮಡಿಕೇರಿ ನಗರದ ಸ್ವಚ್ಛತೆ ಮತ್ತು ಅಭಿವೃದ್ಧಿ ಕೆಲಸಗಳಿಗೆ ಟ್ರಾö್ಯಕ್ಟರ್ ಉಪಯುಕ್ತವಾಗಲಿದೆ ಎಂದು ಅವರು ಹೇಳಿದರು.

ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯರಾದ ಕೆ.ಎಸ್.ರಮೇಶ್, ಮಹೇಶ್ ಜೈನಿ, ಅರುಣ್ ಶೆಟ್ಟಿ, ಶ್ವೇತಾ, ಕಲಾವತಿ, ಚಂದ್ರಶೇಖರ್, ಪೌರಾಯುಕ್ತ ಎಸ್.ವಿ.ರಾಮದಾಸ್, ಸಹಾಯಕ ಎಇಇ ರಾಜೇಂದ್ರ ಕುಮಾರ್, ಪರಿಸರ ಎಂಜಿನಿಯರ್ ಸೌಮ್ಯ ಇತರರು ಇದ್ದರು.