ಸಿದ್ದಾಪುರ, ಜ. ೧೨: ಜಂಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ಆಯೋಜಿಸಿದ ಸಿದ್ದಾಪುರ ರೇಂಜ್ ಮಟ್ಟದ ೧೬ನೇ ಕಲಾ ಸಾಹಿತ್ಯ ಸ್ಪರ್ಧೆಯಲ್ಲಿ ನೆಲ್ಲಿಹುದಿಕೇರಿ ದಾರುಸ್ಸಲಾಂ ಹೈಯರ್ ಸೆಕೆಂಡರಿ ಮದರಸ ಮರ್‌ಹೂಂ ಉಸ್ಮಾನ್ ಹಾಜಿ ಮೆಮೋರಿಯಲ್ ಚಾಂಪಿಯನ್ ಟ್ರೋಫಿ ಪಡೆದುಕೊಂಡಿದೆ.
ಮದರಸ ವಿದ್ಯಾರ್ಥಿಗಳಲ್ಲಿನ ಕಲೆ ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಂಇಯ್ಯತುಲ್ ಮುಅಲ್ಲಿಮೀನ್ ಕೇಂದ್ರ ಸಮಿತಿಯು ಪ್ರತೀ ಎರಡು ವರ್ಷಕ್ಕೊಮ್ಮೆ ಸ್ಪರ್ಧೆ ಏರ್ಪಡಿಸುತ್ತಿದೆ.
ನಲ್ವತ್ತೇಕರೆ ಶಾದಿಮಹಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ನೆಲ್ಲಿಹುದಿಕೇರಿ ದಾರುಸ್ಸಲಾಂ ಮದರಸ ವಿದ್ಯಾರ್ಥಿಗಳು ಜೂನಿಯರ್, ಸೀನಿಯರ್ ಮತ್ತು ಸೂಪರ್ ಸೀನಿಯರ್ ವಿಭಾಗದಲ್ಲಿ ೨೮೧ ಅಂಕ ಪಡೆದು ಪ್ರಥಮ ಸ್ಥಾನ ಪಡೆದರೆ ಸಿದ್ದಾಪುರ ಮುನವ್ವಿರುಲ್ ಇಸ್ಲಾಂ ಮದರಸ ೧೮೯ ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ಅರೆಕಾಡು ಮುನೀರುಲ್ ಇಸ್ಲಾಂ ಮದರಸ ೧೧೧ ಅಂಕಗಳೊAದಿಗೆ ತೃತೀಯ ಸ್ಥಾನ ಪಡೆದುಕೊಂಡಿತು.