*ಸಿದ್ದಾಪುರ, ಜ.೧೨ : ಚೋರರು ದೇವಾಲಯದ ಕಾಣಿಕೆ ಹುಂಡಿಯನ್ನು ಕದ್ದೊಯ್ದ ಪ್ರಕರಣ ಅಭ್ಯತ್ ಮಂಗಲದ ಒಂಟಿಯAಗಡಿ ಕೋಟೇರ ಬಬ್ಬು ಸ್ವಾಮಿ ದೇವಾಲಯದಲ್ಲಿ ನಡೆದಿದೆ.

ದೇವಾಲಯದಲ್ಲಿದ್ದ ಎರಡು ಕಾಣಿಕೆ ಹುಂಡಿಯಲ್ಲಿ ಒಂದನ್ನು ಒಡೆದು ಹಣ ದೋಚಿದ್ದು, ಮತ್ತೊಂದನ್ನು ಹೊತ್ತೊಯ್ದಿದ್ದಾರೆ. ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಮುಂಜಾನೆ ೪ ಗಂಟೆ ಸುಮಾರಿಗೆ ಬೈಕ್ ಶಬ್ಧ ಕೇಳಿಸಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

ದೇವಾಲಯದ ಅಧ್ಯಕ್ಷ ದಾಮು ಹಾಗೂ ಅರ್ಚಕ ವಿಶ್ವನಾಥ್ ಅವರು ನೀಡಿದ ದೂರಿನ ಹಿನ್ನೆಲೆ ಠಾಣಾಧಿಕಾರಿ ಶ್ರೀನಿವಾಸ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚೋರರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.