ನೆನಪಿನ ಆಳ ಹೊಕ್ಕಾಗ ಸಮರ್ಪಣಾಭಾವದಲ್ಲಿ ಹಾಕಿಯ ಕ್ರೀಡಾಪ್ರೇಮವನ್ನು ಕಾಣ ಬಹುದು. ಸ್ವಾತಂತ್ರö್ಯ ಸಿಕ್ಕಿ ಇಂದಿಗೆ ೭೫ ವರ್ಷಗಳು ಸಂದಿವೆ. ಈಗ ನಾವು ಅಮೃತ ಮಹೋತ್ಸವ ಸಂಭ್ರಮದಲ್ಲಿ ದ್ದೇವೆ. ಏಳೂವರೆ ದಶಕಗಳ ಪ್ರಯಾಣದಲ್ಲಿ ಕ್ರೀಡಾ ಜಗತ್ತಿನ ಹಾಕಿಯಲ್ಲಿ ಎಲ್ಲಿಂದ ಎಲ್ಲಿಗೆ ಬಂದು ತಲಪಿವೆ.

ಕಳೆದ ಮೂರು ವರ್ಷಗಳಿಂದೀಚೆಗೆ ಕೊಡಗಿನ ಹಾಕಿಯ ಭವಿಷ್ಯದಲ್ಲಿ ಕೊಡಗಿನವರಿಗೆ ಸ್ಥಾನವೇ ಸಿಗದಿರುವುದಕ್ಕೆ ನಾವೇ ಕಾರಣರು. ಇದಕ್ಕೆ ಕಾರಣ ಹುಡುಕಲು ಹೋದಾಗ ನನ್ನ ಮನಸ್ಸಿನ ಆಳಕ್ಕೆ ಬಂದು ನಿಂತವರು ಬಾಳೆಯಡ ಕೆ. ಸುಬ್ರಮಣಿ. ಗಂಭೀರ ಸ್ವಭಾವದ ಒಲಿಂಪಿಕ್ ಮಾಜಿ ಆಟಗಾರ ಸುಬ್ರಮಣಿ ಭಾರತ ಮಹಿಳಾ ಹಾಕಿ ತಂಡದ ಕೋಚ್ ಆಗಿದ್ದರು. ಅವರ ಸಾಧನೆಯೂ ಒಂದು ಮೈಲಿಗಲ್ಲು. ಒಂದು ದಶಕಗಳ ಹಾಕಿ ರಂಗದಲ್ಲಿ ಅವರಿಗೆ ಸಿಹಿ-ಕಹಿ ಅನುಭವ.

೧೯೭೯ರಲ್ಲಿ ಸೇನಾಪಡೆಗೆ ಸೇರಿದ ಅವರು ಹಾಕಿ ಆಟದಲ್ಲಿ ಉತ್ತಮ ಸೆಂಟರ್ ಹಾಫ್ ಆಟಗಾರರಾಗಿದ್ದರು. ೧೯೮೫ರಲ್ಲಿ ಭಾರತ ಸೀನಿಯರ್ ತಂಡಕ್ಕೆ ಆಯ್ಕೆ ಆಗಿದ್ದ ಸುಬ್ರಮಣಿ ಅವರು ಹಾಲೆಂಡ್‌ನಲ್ಲಿ ನಡೆದ ನಾಲ್ಕು ರಾಷ್ಟçಗಳ ಹಾಕಿ ಟೂರ್ನಿ, ೧೯೮೬ರಲ್ಲಿ ಆರು ಅಂತರರಾಷ್ಟಿçÃಯ ಹಾಕಿ ಟೂರ್ನಿಗಳಲ್ಲಿ ಭಾಗವಹಿಸಿದ್ದ ಕೀರ್ತಿ ಅವರದ್ದು. ಭಾರತ-ಪಾಕ್ ನಡುವಣ ಟೆಸ್ಟ್ ಪಂದ್ಯಗಳು, ಪಾಕಿಸ್ತಾನದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ, ಸೋಲ್‌ನಲ್ಲಿ ನಡೆದ ೧೦ನೇ ಏಷ್ಯನ್ ಕ್ರೀಡಾ ಕೂಟ (ಕಂಚಿನ ಪದಕ) ಲಂಡನ್‌ನಲ್ಲಿ ನಡೆದ ಆರನೇ ವಿಶ್ವಕಪ್, ಮಲೇಷ್ಯಾದಲ್ಲಿ ನಡೆದ ನಾಲ್ಕು ರಾಷ್ಟçಗಳ ಹಾಕಿ ಟೂರ್ನಿ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ತೋರಿದ ಅವರು ೧೯೮೮ರ ಸೋಲ್ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು.

ಇಂಥ ಅನುಭವಿ ಆಟಗಾರ ಸುಬ್ರಮಣಿ ಅವರೊಂದಿಗೆ ಮಾತಿಗಿಳಿದಾಗ ಹಲವಾರು ಅಂಶಗಳು ಬೆಳಕಿಗೆ ಬಂದವು. ಸುಮಾರು ಮೂರು ಗಂಟೆ ಅವರೊಂದಿಗೆ ಮುಕ್ತ ಮನಸ್ಸಿನ ಚರ್ಚೆಯೂ ನಡೆಯಿತು.

‘‘ವಿದ್ಯೆ ಕಲಿಸದ ತಂದೆ, ಬುದ್ಧಿ ಹೇಳದ ಗುರುವು, ಬಿದ್ದಿರಲು ಬಂದು ನೋಡದ ತಾಯಿಯು ಶುದ್ಧ ವೈರಿಗಳು ಸರ್ವಜ್ಞ.’’ ಎಂಬAತೆ ಮಾನವನ ಜೀವನದಲ್ಲಿ ಮಾರ್ಗದರ್ಶನವಿಲ್ಲದೆ ದಾರಿ ತಪ್ಪಿದರೆ ಅವನ ಬಾಳು ನರಕವೇ ಸರಿ. ಎಲ್ಲಾ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯ ಮಾನವನಿಗೆ ಅತಿ ಮುಖ್ಯವಾಗಿ ಇರಬೇಕಾದ ಸಂಪತ್ತು.

ಮಾನಸಿಕ ಉಲ್ಲಾಸ, ಉತ್ತಮ ದೇಹಕ್ಕಾಗುವ ಇವು ಉತ್ತಮ ಪ್ರಜೆ ಎನಿಸಿಕೊಳ್ಳುವವನೊಬ್ಬನ ಅರ್ಹತೆ, ಆದರೆ ಇತ್ತೀಚಿನ ಪೀಳಿಗೆಯಲ್ಲಿ ಈ ಒಂದು ಮಾತಿನ ಅರ್ಥ ಅನರ್ಥವೆನಿಸಿಕೊಂಡಿರುವುದು ದುರ್ದೈವ. ದುಶ್ಚಟಗಳಿಗೆ ಯೌವನದಲ್ಲೇ ಬಲಿಯಾಗಿ ರೋಗದ ಮುದ್ದೆಗಳಂತೆ ಕಾಣಬರುವ ಇಂತಹ ಯುವಕರಿಗೆ ಮುಕ್ತಿ ಎಂದು ?

ಸರಿಯಾದ ಮಾರ್ಗದರ್ಶನ ನೀಡು ವಂತಹ ನಿಷ್ಠಾವಂತ ಗುರುವಿನ ಸಹಾಯ ಇಲ್ಲದಿರುವುದೇ ಕಾರಣ. ‘‘ಊಟ ಬಲ್ಲವನಿಗೆ ರೋಗವಿಲ್ಲ’’ ಎಂಬAತೆ ಉತ್ತಮ ಆಹಾರ ಶಾರೀರಿಕ ವ್ಯಾಯಾಮ ಈ ಎರಡೂ ಆರೋಗ್ಯ ಭಾಗ್ಯದ ಗುಟ್ಟು.

ದೇಹ ದಣಿದರೆ ಹಸಿವು ಆಗುತ್ತದೆ. ಹಸಿವಾದರೆ ಆಹಾರ ತಿನ್ನ ಬೇಕೆನಿಸುತ್ತದೆ ಯಲ್ಲವೇ ? ಭಾರತದ ಇತಿಹಾಸದಲ್ಲಿ ಶಾರೀರಿಕ ವ್ಯಾಯಾಮಕ್ಕೆ ಮೊದಲಿನಿಂದಲೂ ಅಗ್ರಸ್ಥಾನ. ಯೋಗಾಸನ, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಬಾಲ್‌ಬ್ಯಾಡ್ಮಿಂಟನ್, ಕಬಡ್ಡಿ, ಕೊಕ್ಕೋ ಇವು ನಮ್ಮ ಇತಿಹಾಸದಲ್ಲಿ ಪ್ರಮುಖ ಉಲ್ಲೇಖ.

‘‘ಕೊಡಗಿನ ಕ್ರೀಡಾಪಟುಗಳು ಯಾವಾಗಲೂ ಹೋರಾಟಕ್ಕೆ ಹೆಸರುವಾಸಿ ಅವರಲ್ಲಿಯ ಆ ಮನೋಭಾವವೇ ಅವರಿಗೆ ಗೆಲುವು ಯಶಸ್ವಿ ತರುವುದು’’ ಈ ಅಂಶವನ್ನು ತಮ್ಮ ಮಾತಿನ ಆರಂಭದಲ್ಲೇ ಸುಬ್ರಮಣಿ ಪ್ರಸ್ತಾಪ ಮಾಡಿದ್ದರು.

ಪ್ರತಿಭೆ, ತಂತ್ರ ನೈಪುಣ್ಯಗಳಲ್ಲಿ ನಾವು ಯಾರಿಗೂ ಕಡಿಮೆ ಇಲ್ಲ. ವಿಶ್ವ ವಿಜೇತರು ಮತ್ತು ನಮ್ಮ ನಡುವೆ ಇರುವ ಅಂತರ. ಶ್ರೇಷ್ಠ ಗುಣಮಟ್ಟದ ಸಲಕರಣೆಗಳು ಮತ್ತು ಸಮರ್ಪಕ ತರಬೇತಿಯ ಕೊರತೆ. ವಿದೇಶಿಯರು ಗೆಲ್ಲುತ್ತಾರೆ. ನಾವು ಗೆಲ್ಲುವುದಿಲ್ಲ. ನಾವು ನಮ್ಮ ಶಕ್ತಿ, ಯುಕ್ತಿ ಎಲ್ಲವನ್ನು ಓರೆಗೆ ಹಚ್ಚಿ ಹೋರಾಡುತ್ತೇವೆ. ಈ ಹೋರಾಟಕ್ಕೂ ಒಂದು ಮಿತಿ ಇದೆ. ಆ ಮಿತಿ ಮೀರಿದನಂತರ ನಾವು ಅಸಹಾಯಕರು. ನಮ್ಮದು ಹೋರಾಟದಿಂದಲೇ ಆರಂಭ ಹೋರಾಟದಿಂದಲೇ ಮುಕ್ತಾಯ. ಈ ಶಕ್ತಿ ಹೋರಾಟಕ್ಕೆ ಪೂರಕವಾದ ಸೌಲಭ್ಯ ವಾತಾವರಣದ ಬೆಂಬಲ ನಮಗೆ ಇಲ್ಲ. ವಿದೇಶಿಯರು ಗೆಲ್ಲುತ್ತಾರೆ. ನಾವು ಸೋಲುತ್ತೇವೆ ಅನುಭವದ ಆಳದಿಂದ ಪುಟಿದು ಬಂದು ಕೇಳುಗರ ಮನಸ್ಸಿನ ಮೇಲೆ ಅಚ್ಚೊತ್ತುವ ಮಾತುಗಳು ಯಾರೋ ಉಪಚಾರಕ್ಕೆ ಹೇಳುವ ಮಾತುಗಳಲ್ಲ, ಹೆಸರಾಂತ ಮಾಜಿ ಹಾಕಿ ಆಟಗಾರ ಒಲಿಂಪಿಯನ್ ಬಾಳೆಯಡ ಕೆ. ಸುಬ್ರಮಣಿ ಅವರು ಆಡಿದ ಈ ಮಾತುಗಳನ್ನು ಕಡೆಗಣಿಸಲಾಗದು. ಸಭ್ಯ ಶಬ್ದಗಳಲ್ಲಿ ಮೂಡಿ ಬಂದಿರುವ ಈ ಮಾತುಗಳಲ್ಲಿ ನಿರಾಸೆ, ಅಸಾಯಕತೆ, ರೋಷ ಎಲ್ಲಾ ತುಂಬಿವೆ. ಬಿಡಿಸಿ ಓದಬೇಕು ಅಷ್ಟೇ.

ಕೋಚ್ ಹಾಗೂ ಕೋಚಿಂಗ್ ಬಗೆಗೆ ಸುಬ್ರಮಣಿ ಅವರಿಗೆ ಸಮಾಧಾನ ಇಲ್ಲ. ಅನೇಕರು ಯಾವ ವಿಧದಲ್ಲೂ ಆಟಗಾರರಿಗಿಂತ ಹೆಚ್ಚಿನವರಾಗಿಲ್ಲ. ಬದಲಾಗುತ್ತಾ ಸಾಗಿರುವ ಆಟದ ಸ್ವರೂಪಕ್ಕೆ ತಕ್ಕ ತಂತ್ರ ರೂಪಿಸುವ ಸಾಮರ್ಥ್ಯ ನಮ್ಮವರಲ್ಲಿ ಇಲ್ಲ. ಸಾಂಪ್ರದಾಯಕ ಮನೋಭಾವ ಇನ್ನು ಅವರ ವಿಧಾನವನ್ನು ಆವರಿಸಿಕೊಂಡಿದೆ. ಕಾರಣ ಇಷ್ಟೇ. ಬದಲಾದ ತಂತ್ರಗಳಲ್ಲಿ ಇವರಿಗೆ ತರಬೇತಿ ಅನುಭವ ಇಲ್ಲ. ನಮ್ಮ ಕೋಚ್‌ಗಳನ್ನು ವಿದೇಶಕ್ಕೆ ಕಳುಹಿಸಬೇಕು. ಇದು ಸುಬ್ರಮಣಿ ಅವರ ಖಚಿತ ಅಭಿಪ್ರಾಯ.

ನಮ್ಮ ಕೋಚ್‌ಗಳ ನಿಷ್ಠೆ ಪ್ರಾಮಾಣಿಕತೆ ಬಗ್ಗೆ ಕ್ರೀಡಾ ಆಡಳಿತಗಾರರಿಗೆ ಸಂಶಯ. ಇದನ್ನು ಮೊದಲು ದೂರಮಾಡಬೇಕು. ರಾಷ್ಟçವನ್ನು ಪ್ರತಿನಿಧಿಸುವ ಆಟಗಾರರಿಗೆ ಸಿಕ್ಕ ಬೇಕಾದ ಮನ್ನಣೆ ನಮ್ಮ ದೇಶದಲ್ಲಿ ದೊರೆಯುವಂತಿಲ್ಲ. ಅಧಿಕಾರಿಗಳೇ ದೊಡ್ಡವರು. ಆಟಗಾರರ ಸುಖ-ದುಃಖಗಳನ್ನು ವಿಚಾರಿಸು ವವರು ಕಡಿಮೆ.

ಕ್ರೀಡೆಯ ರಾಜಕೀಯ ಅವರಿಗೆ ಬೇಸರ ತಂದಿದೆ. ಅಧಿಕಾರಕ್ಕೆ ನಡೆದ ಕಚ್ಚಾಟದಲ್ಲಿ ಆಟ ಕೊಚ್ಚಿ ಹೋಗುತ್ತದೆ ಎಂಬ ಆತಂಕ. ಹಾಕಿ ಆಟಗಾರರ ಪ್ರತಿಭೆ ದೇಶದಲ್ಲಿ ಹೇರಳವಾಗಿದೆ. ಸರಿಯಾದ ಪ್ರೋತ್ಸಾಹ ಮಾರ್ಗದರ್ಶನ ದೊರೆತರೆ ನಾವೂ ವಿಶ್ವ ಮಟ್ಟದಲ್ಲಿ ಏರುತ್ತೇವೆ ಎನ್ನುವ ವಿಶ್ವಾಸವನ್ನು ಕಳೆದುಕೊಂಡಿಲ್ಲ.

ಜಿಲ್ಲಾ ಮಟ್ಟದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಯುವಜನತೆಯ ಪ್ರತಿನಿಧಿಯಾಗಿ, ಅವರ ಧ್ವನಿಯಾಗಿ ಕೆಲಸ ಮಾಡಬೇಕು. ಕೊಡಗಿನ ಯುವ ಕ್ರೀಡಾಪಟುಗಳು, ಹಾಕಿ ಆಟಗಾರರ ಒಟ್ಟಾರೆ ಸಮಸ್ಯೆಗೆ ಸ್ಪಂದಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು. ಯುವ ಕ್ರೀಡಾಪಟುಗಳನ್ನು ಗಮನದಲ್ಲಿಟ್ಟುಕೊಂಡು ಯುವಜನ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಕೆಲಸ ಮಾಡಬೇಕು. ಜಿಲ್ಲೆಯ ಯುವಕರು ಸ್ವಾವಲಂಬಿಗಳಾಗುವತ್ತ ಗಮನಹರಿಸಬೇಕು.

ಕ್ರೀಡಾಪಟುಗಳ ಬದುಕು ನಿಗೂಢವಾದದ್ದು, ಅಷ್ಟೇ ಮನೋಉಲ್ಲಾಸ ದಿಂದ ಕೂಡಿದ್ದು, ಕ್ರೀಡೆಯಲ್ಲಿ ಸಾಧಿಸಬೇಕಾದರೆ ಲೆಕ್ಕಾಚಾರ, ಬುದ್ಧಿವಂತಿಕೆ ಕೌಶಲ್ಯ, ಸಂತಸ ಕ್ರೀಡಾಪಟು ಪಡೆದುಕೊಂಡ ಅಂಶಗಳಾಗಿವೆ.

ಕ್ರೀಡಾಪಟುಗಳ ಸ್ಪರ್ಶದ ವೃತ್ತ್ತಿನಿಷ್ಠೆ ಮನುಷ್ಯನ ಕಣ್ಣನ್ನು ತೆರೆಸುತ್ತದೆ. ಕ್ರೀಡೆಯು ಸಂಬAಧಗಳನ್ನು ಬೆಸೆಯುತ್ತದೆ. ಈ ನಿಟ್ಟಿನಲ್ಲಿ ಸುಬ್ರಮಣಿ ಅವರು ಕಾರ್ಯನಿರತರಾಗಿ ಕೊಡಗಿಗೆ ಹೆಸರು ತರುವ ಪ್ರಯತ್ನ ಮಾಡಲಿ.