ಸೋಮವಾರಪೇಟೆ, ಜ.೧೩: ರಾಜ್ಯದ ಪ್ರತಿಷ್ಠಿತ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹಾಗೂ ಖರೀದಿ ಸಮಿತಿ ಅಧ್ಯಕ್ಷರಾಗಿ ಕೊಡಗಿನಿಂದ ನಿರ್ದೇಶಕರಾಗಿ ಆಯ್ಕೆಯಾಗಿರುವ ಹರಪಳ್ಳಿ ರವೀಂದ್ರ ಅವರನ್ನು ನೇಮಕ ಮಾಡಲಾಗಿದೆ. ಆ ಮೂಲಕ ಇದೇ ಪ್ರಥಮವಾಗಿ ಜಿಲ್ಲೆಯ ವ್ಯಕ್ತಿಗೆ ಒಕ್ಕಲಿಗರ ಸಂಘದಿAದ ಪ್ರಾತಿನಿಧ್ಯ ಲಭಿಸಿದೆ.

ಬೆಂಗಳೂರಿನಲ್ಲಿರುವ ರಾಜ್ಯ ಒಕ್ಕಲಿಗರ ಸಂಘದ ಕಚೇರಿ ನಾಡಪ್ರಭು ಕೆಂಪೇಗೌಡ ಭವನದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ.

ಸಂಘದ ಅಧ್ಯಕ್ಷರಾಗಿರುವ ಶಾಸಕ ಸಿ.ಎನ್. ಬಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ರವೀಂದ್ರ ಅವರನ್ನು ಸಂಘದ ಕಾರ್ಯಾಧ್ಯಕ್ಷ ಹಾಗೂ ಸಂಘ ಮತ್ತು ಸಂಘದ ಎಲ್ಲಾ ಅಧೀನ ವಿದ್ಯಾಸಂಸ್ಥೆಗಳ ಖರೀದಿ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ.

ರಾಜ್ಯ ಒಕ್ಕಲಿಗರ ಸಂಘದಲ್ಲಿ ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ನೀಡಬೇಕೆಂಬ ಬೇಡಿಕೆಯನ್ನು ರಾಜ್ಯ ಸಮಿತಿಯ ಮುಂದಿಡಲಾಗಿತ್ತು. ಅಂತೆಯೇ ಮಹತ್ತರ ಜವಾಬ್ದಾರಿ ನೀಡಲಾಗಿದ್ದು, ಪ್ರಮುಖರಾದ ಗಿರೀಶ್ ಮಲ್ಲಪ್ಪ, ಅರುಣ್ ಕೊತ್ನಳ್ಳಿ, ಮಂಜೂರು ತಮ್ಮಣ್ಣಿ, ಅನಂತ್ ಸೇರಿದಂತೆ ಇತರರು ಈ ಸಂದರ್ಭ ಉಪಸ್ಥಿತರಿದ್ದರು.