ಸುಂಟಿಕೊಪ್ಪ, ಜ. ೧೨: ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಸಿ. ಶೀಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ ೧೬ ಸದಸ್ಯ ಬಲವಿದ್ದು, ೧೩ ಮಂದಿ ಸದಸ್ಯರುಗಳು ಬಿಜೆಪಿ ಬೆಂಬಲಿತರಿದ್ದಾರೆ. ಅಧ್ಯಕ್ಷ ಸ್ಥಾನ ಮೀಸಲಾತಿಯಡಿ ಬಿಸಿಎಂಎ ಮಹಿಳೆಗೆ ನಿಗದಿಯಾಗಿತ್ತು. ೩ ಮಂದಿ ಬಿಸಿಎಂಎ ಮಹಿಳಾ ಸದಸ್ಯರುಗಳು ಬಿಜೆಪಿಯಿಂದ ಚುನಾಯಿತರಾಗಿದ್ದರು. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಊರಾದ ಮಾದಾಪುರದಲ್ಲಿ ಕಳೆದ ವರ್ಷ ಡಿಸೆಂಬರ್ನಲ್ಲಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಧಿಕಾರ ಹಂಚಿಕೆಯ ಒಡಂಬಡಿಕೆಯಾಗಿದ್ದು ೧ ವರ್ಷ ಪೂರೈಸಿದ ಕೆ.ಸಿ.ಶೀಲಾ ಅವರು ಬಿಜೆಪಿ ಪಕ್ಷದ ಅಣತಿಯಂತೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಮುಂದಿನ ಅಧ್ಯಕ್ಷರಾಗಿ ಹಟ್ಟಿಹೊಳೆ ಕ್ಷೇತ್ರದ ನಿರೂಪ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.