ಸೋಮವಾರಪೇಟೆ, ಜ. ೧೧: ಇನ್ನರ್‌ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್ ವತಿಯಿಂದ ಕುಶಾಲನಗರ ಶಕ್ತಿಧಾಮ ವೃದ್ದಾಶ್ರಮದ ನಿವಾಸಿಗಳಿಗೆ ಅಗತ್ಯ ವಸ್ತುಗಳನ್ನು ಈಚೆಗೆ ವಿತರಿಸಲಾಯಿತು. ಕ್ಲಬ್ ಸದಸ್ಯೆ ಮೋಹಿನಿ ಶಿವಶಂಕರ್ ನೀಡಿದ ಸಹಾಯಧನದಲ್ಲಿ ಕುಕ್ಕರ್, ನೀರು ಶುದ್ಧೀಕರಣ ಯಂತ್ರ ಹಾಗೂ ಎಲ್‌ಇಡಿ ಬಲ್ಬ್ಗಳನ್ನು ವಿತರಿಸಲಾಯಿತು. ೨೪ ಮಂದಿ ಸೌಲಭ್ಯಗಳನ್ನು ಪಡೆದುಕೊಂಡರು. ಕ್ಲಬ್ ಅಧ್ಯಕ್ಷೆ ಆಶಾ ಯೋಗೇಂದ್ರ, ಉಪಾಧ್ಯಕ್ಷೆ ಪ್ರೇಮಾ ಹೃಷಿಕೇಶ್,ಮಾಜಿ ಅಧ್ಯಕ್ಷೆ ಕವಿತಾ ವಿರೂಪಾಕ್ಷ, ಪದಾಧಿಕಾರಿಗಳಾದ ಲತಾ ನಾಗೇಶ್, ಚಂದ್ರಿಕಾ ಕುಮಾರ್ ಮತ್ತು ಸದಸ್ಯರುಗಳು ಇದ್ದರು.