ಸುಂಟಿಕೊಪ್ಪ, ಜ. ೧೧ : ಶೃದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯ ಕ್ರಮದಡಿಯಲ್ಲಿ ಗರಗಂದೂರು ಮಲ್ಲಿಕಾರ್ಜುನ ಕಾಲೋನಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗರಗಂದೂರು ಒಕ್ಕೂಟ, ಪ್ರಗತಿ ಬಂಧು ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು ಮಲ್ಲಿಕಾರ್ಜುನ ದೇವಸ್ಥಾನದ ಆವರಣ ಸುತ್ತಮುತ್ತಲಿನಲ್ಲಿ ಬೆಳೆದಿದ ಕಾಡು ಗಿಡಗಂಟಿ ಕಡಿದು ಸ್ವಚ್ಚಗೊಳಿಸಿದರು.

ಗರಗಂದೂರು ಮಲ್ಲಿಕಾರ್ಜುನ ಕಾಲೋನಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ ಬೆಳೆದಿದ್ದ ಕಾಡು ಗಿಡಗಂಟಿ, ಪ್ಲಾಸ್ಟಿಕ್ ಇನ್ನಿತರÀ ತ್ಯಾಜ್ಯ ಹಾಗೂ ದೇವಾಲಯದ ಒಳಾಂಗಣವನ್ನು ಶುಭ್ರಗೊಳಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮದಡಿಯಲ್ಲಿ ಸ್ವಚ್ಚತಾ ಕಾರ್ಯವನ್ನು ಸಂಘದ ಸದಸ್ಯರುಗಳು ನೇರವೇರಿಸಿದರು.

ಈ ಸಂದರ್ಭ ಧರ್ಮಸ್ಥಳ ಸಂಘದ ಅಧ್ಯಕ್ಷರಾದ ಪುಷ್ಪ, ಅಂಗನವಾಡಿ ಶಿಕ್ಷಕಿ ದೇವಕ್ಕಿ ರಮೇಶ್, ವಿಪತ್ತು ನಿರ್ವಹಣಾ ಸದಸ್ಯ ಪೂವಪ್ಪ, ಗ್ರಾ.ಪಂ.ಸದಸ್ಯೆ ಕುಸುಮ ಪೂವಪ್ಪ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಪುಷ್ಪಲತಾ, ಸೇವಾಪ್ರತಿನಿಧಿ ಕುಸುಮ ಸೋಮಯ್ಯ, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ನವಜೀವನ ಸಮಿತಿಯ ಪದಾಧಿಕಾರಿಗಳು, ಒಕ್ಕೂಟ ಪದಾಧಿಕಾರಿಗಳು ಹಾಗೂ ಮಹಿಳಾ ಸ್ವಸಹಾಯ ಸಂಘದ ಪದಾಧಿಕಾರಿಗಳು ಇದ್ದರು.