ಮಡಿಕೇರಿ, ಜ. ೧೨: ಸಹಕಾರ ಭಾರತೀಯ ಸ್ಥಾಪನಾ ದಿನದ ಅಂಗವಾಗಿ ಜಿಲ್ಲಾ ಕೇಂದ್ರ ಮಡಿಕೇರಿಯ ಜಿಲ್ಲಾ ಯೂನಿಯನ್ ಸಭಾಂಗಣದಲ್ಲಿ ಭಾರತ ಮಾತೆ ಹಾಗೂ ಸಹಕಾರ ಭಾರತಿ ಸಂಸ್ಥಾಪಕ ಲಕ್ಷö್ಮಣ್‌ರಾವ್ ಇನಾಂಧರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮಿಸಲಾಯಿತು.

ಈ ಸಂದರ್ಭ ಅಪ್ಪಚಟ್ಟೋಳಂಡ ಮನು ಮುತ್ತಪ್ಪ ಹಾಗೂ ನಂದಿನೆರವAಡ ರವಿ ಬಸಪ್ಪ ಅವರು ಸಹಕಾರ ಭಾರತಿ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು.

ಈ ಸಂದರ್ಭ ಜಿಲ್ಲಾ ಅಧ್ಯಕ್ಷ ನಾಪಂಡ ಉಮೇಶ್ ಉತ್ತಪ್ಪ, ಕನ್ನಂಡ ಸಂಪತ್, ಕಾಳನ ರವಿ, ಉಪಾಧ್ಯಕ್ಷರಾದ ಧರ್ಮಪಾಲ್, ಶಿವರಾಜ್, ಕೃಷ್ಣ ಶಿರಂಗಾಲ, ಪ್ರಸನ್ನ ಕುಮಾರ್, ಮಹಿಳಾ ಪ್ರಮುಖ್ ಬೀನಾ ಬೊಳ್ಳಮ್ಮ, ರೀನಾ ತುಳಸಿ, ಬೇಬಿ ಪೂವಯ್ಯ, ಭಾರತಿ ನಾಣಯ್ಯ, ಸವಿತಾ ಭಟ್, ಚಿತ್ರಾವತಿ, ಬಾಳೆಯಡ ದಿವ್ಯ ಮಂದಪ್ಪ, ಲೀಲಾ ಮೇದಪ್ಪ ಹಾಗೂ ಸದಸ್ಯರು ಹಾಜರಿದ್ದರು.