ಸಿದ್ದಾಪುರ, ಜ. ೧೧: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನ ಮೇಲೆ ವಿದ್ಯುತ್ ತಂತಿಯೊAದು ತುಂಡಾಗಿ ಮೈಮೇಲೆ ಬಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾ ಪಾಯದಿಂದ ಪಾರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ವೀರಾಜಪೇಟೆ ತಾಲೂಕಿನ ಸಿದ್ದಾಪುರ ಕರಡಿಗೋಡು ರಸ್ತೆಯಲ್ಲಿ ನಡೆದಿದೆ.
ಸಿದ್ದಾಪುರ ಕರಡಿಗೋಡು ರಸ್ತೆಯಲ್ಲಿ ವಾಸವಾಗಿರುವ ಜೆಮ್ಮಸಿ ಎಂಬವರ ಮಗ ಜನೀಶ್ (೧೨) ವಿದ್ಯುತ್ ಸ್ಪರ್ಶದಿಂದ ಕುತ್ತಿಗೆಗೆ ಗಾಯಗೊಂಡು ಸಿದ್ದಾಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಗೆ ದಾಖಲಾಗಿದ್ದಾನೆ.
ಸಹಪಾಠಿಗಳೊಂದಿಗೆ ಆಟವಾಡಿ ಸಂಜೆ ೬ಗಂಟೆ ಸುಮಾರಿಗೆ ಮನೆಗೆ ನಡೆದುಕೊಂಡು ಬರುತ್ತಿದ್ದ ವೇಳೆ ಬಿಎಸ್ಸೆನ್ನೆಲ್ ಕಚೇರಿ ಸಮೀಪ ವಿದ್ಯುತ್ ತಂತಿ ತುಂಡಾಗಿ ಮೈಮೇಲೆ ಬಿದ್ದಿದೆ. ಜತೆಯಲ್ಲಿದ್ದ ಇತರ ಯುವಕರು ಹಾಗೂ ಇಬ್ಬರು ಕಾರ್ಮಿಕ ಮಹಿಳೆಯರು ಭಾರಿ ಅನಾಹುತದಿಂದ ಪಾರಾಗಿದ್ದಾರೆ.
ಚೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷö್ಯ : ಕರಡಿಗೋಡು ರಸ್ತೆಯಲ್ಲಿರುವ ಮನೆಯೊಂದರ ತೆಂಗಿನ ಮರ ತೆರವುಗೊಳಿಸಲು ೨ದಿನಗಳ ಹಿಂದೆ ಚೆಸ್ಕಾಂ ಇಲಾಖೆ ಸಿಬ್ಬಂದಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ತಂತಿಗಳನ್ನು ಕೆಳಗಿಳಿಸಲಾಗಿತ್ತು. ತೆಂಗಿನ ಗರಿ ತೆರವು ನಂತರ ನಿರ್ಲಕ್ಷö್ಯತೆಯಿಂದ ತಂತಿಗಳನ್ನು ವಿದ್ಯುತ್ ಕಂಬದಲ್ಲಿ ಸರಿಯಾಗಿ ಕಟ್ಟದೆ ನಿರ್ಲಕ್ಷö್ಯ ಮಾಡಿದ ಹಿನ್ನೆಲೆಯಲ್ಲಿ ವಿದ್ಯುತ್ ತಂತಿ ಯುವಕನ ಮೇಲೆ ತುಂಡಾಗಿ ಬೀಳಲು ಕಾರಣವಾಗಿದೆ. ಇಲಾಖೆಯ ಸಿಬ್ಬಂದಿಗಳ ನಿರ್ಲಕ್ಷö್ಯದಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಚೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷö್ಯದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.