(ಕೋವರ್ ಕೊಲ್ಲಿ ಇಂದ್ರೇಶ್)

ಮಡಿಕೇರಿ, ಜ. ೧೨: ಮಾಡೆಲಿಂಗ್ ಕ್ಷೇತ್ರದಲ್ಲಿ ಆಸಕ್ತಿಯುಳ್ಳ ಯುವತಿಯರ ಅರೆನಗ್ನ ಫೋಟೋಗಳನ್ನು ಪಡೆದು ಅದನ್ನು ಪುನಃ ನಗ್ನವಾಗಿ ಎಡಿಟ್ ಮಾಡಿ (ಕೋವರ್ ಕೊಲ್ಲಿ ಇಂದ್ರೇಶ್)

ಮಡಿಕೇರಿ, ಜ. ೧೨: ಮಾಡೆಲಿಂಗ್ ಕ್ಷೇತ್ರದಲ್ಲಿ ಆಸಕ್ತಿಯುಳ್ಳ ಯುವತಿಯರ ಅರೆನಗ್ನ ಫೋಟೋಗಳನ್ನು ಪಡೆದು ಅದನ್ನು ಪುನಃ ನಗ್ನವಾಗಿ ಎಡಿಟ್ ಮಾಡಿ ನೆಲೆಸಿದ್ದ ಎಂದು ತಿಳಿದು ಬಂದಿದೆ. ಪ್ರಪಂಚ್ ನಾಚಪ್ಪ (೨೩) ಎಂದು ಗುರುತಿಸಲಾಗಿದೆ. ಈತ ಅಲ್ಲಿನ ಖಾಸಗಿ ಕಾಲೇಜೊಂದರಲ್ಲಿ ಓದುತ್ತಿದ್ದ ಈತ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಅಂದವಾದ ಯುವತಿ ಹೆಸರಿನಲ್ಲಿ ನಕಲಿ ಖಾತೆ ತೆರೆಯುತ್ತಿದ್ದ. ತಾನು ಮಾಡೆಲಿಂಗ್ ಮಾಡುತ್ತಿದ್ದು, ಮಾಡೆಲಿಂಗ್ ಕ್ಷೇತ್ರಕ್ಕೆ ಬರಲು ಆಸಕ್ತಿಯಿರುವವರು ನನ್ನನ್ನು ಸಂಪರ್ಕಿಸಬಹುದು ಎಂದು ಪೋಸ್ಟ್ ಹಾಕುತ್ತಿದ್ದ. ಇದನ್ನು ನೋಡಿದ ಮಾಡೆಲಿಂಗ್ ಆಕಾಂಕ್ಷಿ ಯುವತಿ ಯರು ಈತನೂ ಮಹಿಳೆಯೇ ಎಂದು ಭಾವಿಸಿ ಆತನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆರೋಪಿಗೆ ಸಂದೇಶ ಕಳುಹಿಸುತ್ತಿದ್ದರು.

(ಮೊದಲ ಪುಟದಿಂದ) ಬಳಿಕ ಸಂದೇಶ ಕಳುಹಿಸಿದ ಯುವತಿಯರಿಗೆ ತನ್ನ ಮೊಬೈಲ್ ನಂಬರ್ ಕಳಿಸುತ್ತಿದ್ದ. ಯುವತಿಯರು ಸಂಪರ್ಕಿಸಿದ ಕೂಡಲೇ ಮಾಡೆಲಿಂಗ್‌ಗೆ ಅಗತ್ಯವಿರುವ ಅರೆಬೆತ್ತಲೆ ಫೋಟೋ ಕಳುಹಿಸುವಂತೆ ಸೂಚಿಸುತ್ತಿದ್ದ.

ಯುವತಿಯರು ಕಳುಹಿಸುತ್ತಿದ್ದ ಫೋಟೋ ನಂತರ ಅರೆಬೆತ್ತಲೆ ಫೋಟೋಗಳನ್ನು ಕಳಿಸಿಕೊಡಿ , ಮಾಡೆಲಿಂಗ್ ಕ್ಷೇತ್ರದಲ್ಲಿ ಬೋಲ್ಡ್ ಆಗಿದ್ದರೆ ಮಾತ್ರ ಒಳ್ಳೆಯ ಅವಕಾಶ ಸಿಗುತ್ತದೆ ಎಂದು ಪುಸಲಾಯಿಸುತಿದ್ದ. ಅಲ್ಲದೆ ಕಳಿಸಿದ ಒಂದು ಫೋಟೋಗೆ ೨೦೦೦ ರೂಪಾಯಿ ನೀಡುವುದಾಗಿ ಆಮಿಷವೊಡ್ಡುತ್ತಿದ್ದ. ಫೋಟೋ ಕಳಿಸಿದ ನಂತರ ಬಿಕಿನಿ ಧರಿಸಿದ ಚಿತ್ರ ಕಳಿಸಿಕೊಡಿ ಅದಕ್ಕೆ ೧೦ ಸಾವಿರ ರೂಪಾಯಿ ಸಿಗುತ್ತದೆ ಎಂದು ಆಮಿಷ ಒಡ್ಡುತ್ತಿದ್ದ. ಪುನಃ ಸಂಪೂರ್ಣ ನಗ್ನ ಚಿತ್ರ ಕಳಿಸಿಕೊಡಲು ಹೇಳುತ್ತಿದ್ದ. ಅವರು ಕಳಿಸಿಕೊಡದಿದ್ದಾಗ ಆಕಾಂಕ್ಷಿಗಳ ಅರೆ ಬೆತ್ತಲೆ ಚಿತ್ರಗಳನ್ನೆ ಅಶ್ಲೀಲ ಚಿತ್ರಗಳಿಗೆ ಮಾರ್ಫಿಂಗ್ ಮಾಡಿ ಪುನಃ ಅದೇ ಯುವತಿಯರ ವಾಟ್ಸ್ಆ್ಯಪ್‌ಗೆ ಕಳುಹಿಸಿ ಆರೋಪಿ ಹಣಕ್ಕೆ ಬೇಡಿಕೆಯಿಡುತ್ತಿದ್ದ. ಹಣ ಕೊಡದಿದ್ದರೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸುತ್ತಿದ್ದ. ಇದರಿಂದ ಆತಂಕಕ್ಕೊಳಗಾದ ಕೆಲ ಯುವತಿಯರು ಆರೋಪಿ ಪ್ರಪಂಚ್ ಹೇಳಿದ ಬ್ಯಾಂಕ್ ಖಾತೆಗೆ ಆನ್‌ಲೈನ್ ಮೂಲಕ ಹಣ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಮಾತನಾಡಿದ ಹಲಸೂರು ಇನ್ಸ್ಪೆಕ್ಟರ್ ಎಂ ಮಂಜುನಾಥ್ ಅವರು ಆರೋಪಿ ಮೊದಲು ೧೦ ಸಾವಿರ ರೂ. ಕಳುಹಿಸುವಂತೆ ಸೂಚಿಸಿ ನಂತರ ಹಂತ-ಹAತವಾಗಿ ೧ ಲಕ್ಷ ರೂ.ವರೆಗೆ ಹಣ ವಸೂಲು ಮಾಡಿರುವ ಕುರಿತು ದೂರು ಇದೆ. ಇದುವರೆಗೂ ೨೦ಕ್ಕೂ ಅಧಿಕ ಯುವತಿಯರು ಆರೋಪಿಯ ಬಲೆಗೆ ಬಿದ್ದಿದ್ದಾರೆ ಎನ್ನುವ ಮಾಹಿತಿ ದೊರೆತಿದೆ ಎಂದರು. ಆರೋಪಿಯಿಂದ ಇದೇ ರೀತಿ ಬ್ಲಾಕ್‌ಮೇಲ್‌ಗೆ ಒಳಗಾದ ಯುವತಿಯೊಬ್ಬಳು ಈ ಕುರಿತು ೨೦೨೧ ನವೆಂಬರ್‌ನಲ್ಲಿ ಹಲಸೂರು ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ ನಂತರ ಮೊನ್ನೆ ಸೋಮವಾರ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿಯು ಹಲವಾರು ಯುವತಿಯರಿಗೆ ಬ್ಲಾಕ್‌ಮೇಲ್ ಮಾಡಿರುವುದು ಧೃಡಪಟ್ಟಿದ್ದು ಈತನ ಮೊಬೈಲ್ ಮತ್ತು ಲ್ಯಾಪ್ ಟಾಪ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಬ್ಲಾಕ್‌ಮೇಲ್‌ನಿಂದಾಗಿ ಎಷ್ಟು ಹಣ ಪಡೆದುಕೊಂಡಿದ್ದಾನೆ ಎಂದು ತಿಳಿದುಬಂದಿಲ್ಲ. ತನಿಖೆ ಮುಂದುವರೆದಿದೆ ಎಂದು ಇನ್ಸ್ಪೆಕ್ಟರ್ ಮಂಜುನಾಥ್ ತಿಳಿಸಿದರು.