ಮಡಿಕೇರಿ, ಜ. ೧೧ : ನಿಶಾನೆ ಮೊಟ್ಟೆ ಬೆಟ್ಟ ವಿಶಾಲವಾಗಿ ಹರಡಿಕೊಂಡಿದೆ., ಕಣಿವೆಗಳಿಂದ ಕೂಡಿರುವ ಪ್ರದೇಶ ಗಡಿ ಭಾಗದಲ್ಲಿ ರಕ್ಷಣಾ ಗೋಡೆಯಂತಿದೆ., ಆದರೆ, ಅಕ್ರಮ ಗಣಿಗಾರಿಕೆಗಾಗಿ ಆಗಾಗ್ಗೆ ಬೆಟ್ಟವನ್ನು ಕೊರೆಯುತ್ತಿರುವದರಿಂದ ಬೆಟ್ಟ ಕುಸಿಯುವ ಭೀತಿ ಉಂಟಾಗಿದೆ. ಒಂದು ವೇಳೆ ಬೆಟ್ಟ ಕುಸಿಯಿತೆಂದರೆ ಬೆಟ್ಟದ ತಳ ಭಾಗದಲ್ಲಿರುವ ಮನೆಗಳು, ನೆರೆಯ ಸುಳ್ಯ ತಾಲೂಕಿನ ತೊಡಿಕಾನ ದಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೂ ಅಪಾಯ ತಪ್ಪಿದಲ್ಲ..!

ದೂರದಿಂದ ನೋಡಲು ಬಲು ಸುಂದರವಾಗಿ ಕಾಣುವ., ಚಾರಣಕ್ಕೆ ಬಹು ಯೋಗ್ಯವಾದ ನಿಶಾನೆ ಮೊಟ್ಟೆ ಇದೀಗ ಅಕ್ರಮ ಗಣಿಗಾರಿಕೆಯ ದಂಧೆಯೊAದಿಗೆ ಸುದ್ದಿಯಾಗುತ್ತಿದೆ. ಯಾವದೇ ಸುಂದರ ಪ್ರದೇಶಗಳು ಆ ಪ್ರದೇಶದ ಪ್ರಾಮುಖ್ಯತೆಯೊಂದಿಗೆ ಹೆಸರುವಾಸಿಯಾಗುತ್ತಿದ್ದರೆ., ಇಲ್ಲಿ ಈ ಸುಂದರ ಪ್ರದೇಶ ಕೆಟ್ಟ ಕಾರ್ಯಕ್ಕೆ ಹೆಸರಾಗುತ್ತಿದೆ. ಬೆಲೆ ಬಾಳುವ ಹರಳು ಕಲ್ಲಿಗಾಗಿ ಬೆಟ್ಟವನ್ನು ಬಗೆಯ ಲಾಗುತ್ತಿದೆ. ಹೀಗೆ ಬಗೆಯುತ್ತಾ ಹೋದರೆ ಮುಂದೊAದು ದಿನ ಬೆಟ್ಟ ಕುಸಿದು ಭಾರೀ ಆಪತ್ತು, ಜೀವ ಹಾನಿಯಾಗುವ ಸಂಭವವನ್ನು ಅಲ್ಲಗಳೆಯುವಂತಿಲ್ಲ..!

ಗಜಗಿರಿಯAತೆ ಭಯ..!

ರಮಣೀಯ ಪ್ರದೇಶವಾಗಿದ್ದ., ಪುಣ್ಯ ಕ್ಷೇತ್ರ ತಲಕಾವೇರಿಯ ಕಿರೀಟದಂತಿದ್ದ ಗಜಗಿರಿ ಬೆಟ್ಟ ಕುಸಿದು ಜೀವ ಹಾನಿಯಾಗಿರುವ ಘಟನೆಯನ್ನು ಯಾರೂ ಮರೆಯಲಾರರು. ಅಲ್ಲಿಯೂ ಬೆಟ್ಟದ ಮೇಲೆ ಅವೈಜ್ಞಾನಿಕವಾಗಿ ಇಂಗು ಗುಂಡಿ ನಿರ್ಮಿಸಿರುವ ದರಿಂದಲೇ ಅವಘಡ ಸಂಭವಿಸಿದೆ.

(ಮೊದಲ ಪುಟದಿಂದ) ಇದು ಅಲ್ಲಿನ ಜನತೆಗೆ, ಅರಣ್ಯ ಇಲಾಖೆಯವರಿಗೂ ತಿಳಿದಿದೆ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಅರಣ್ಯ ಇಲಾಖಾ ಅಧಿಕಾರಿಗಳೇ ಇಂಗು ಗುಂಡಿಗಳನ್ನು ಮುಚ್ಚಿದ್ದಾರೆ. ಆದರೂ ಮತ್ತೆ ದಂಧೆಕೋರರೊAದಿಗೆ ಶಾಮೀಲಾಗಿ ಬೆಟ್ಟದ ಮೇಲೆ ಹೊಂಡ ತೋಡಲು ಬಿಡುತ್ತಿರುವದು ಎಷ್ಟು ಸರಿ ಎಂಬದು ಗ್ರಾಮಸ್ಥರ ಪ್ರಶ್ನೆ..?

‘ಇಲ್ಲಿ ಗಣಿಗಾರಿಕೆ ನಡೆಯಲು ಅರಣ್ಯ ಇಲಾಖಾ ಅಧಿಕಾರಿಗಳೇ ಮೂಲ ಕಾರಣ, ಸ್ಥಳೀಯ ಕೆಲವರ ಸಹಕಾರವೂ ಇದೆ, ಈ ಅಕ್ರಮ ದಂಧೆ ಬಹಳ ಸಮಯಗಳಿಂದ ನಡೆಯುತ್ತಿದ್ದು, ಇಲ್ಲಿಂದ ಈಗಾಗಲೇ ಒಂದು ಮಝ್ದಾ ಲಾರಿಯಷ್ಟು ಹರಳು ಸಹಿತ ಮಣ್ಣು ಸಾಗಾಟ ಆಗಿರುವದಾಗಿ ಹೇಳಲಾಗುತ್ತಿದೆ. ಇದೇ ರೀತಿ ಗುಂಡಿ ತೋಡುತ್ತಾ ಹೋದರೆ ಮುಂದೊAದು ದಿನ ತಲಕಾವೇರಿಯಲ್ಲಿ ಗಜಗಿರಿ ಬೆಟ್ಟ ಕುಸಿದಂತೆ ಇಲ್ಲಿಯೂ ಕುಸಿಯಲಿದೆ. ಕೆಳಭಾಗದಲ್ಲಿ ಸುಮಾರು ೨೫೦ ಮನೆಗಳಿದ್ದು, ಅಂದಾಜು ೧೫೦ ಮನೆಗಳಿಗೆ ಹಾನಿಯಾಗಲಿದೆ. ಕಾಡಿನಲ್ಲಿರುವ ಪ್ರಾಣಿ ಪಕ್ಷಿಗಳು, ನದಿಯಲ್ಲಿರುವ ಜಲಚರಗಳು ನಾಶವಾಗಲಿವೆ. ಅಲ್ಲದೆ ಇತಿಹಾಸದ ಹಿನ್ನೆಲೆಯಿರುವ ತೊಡಿಕಾನದ ಶ್ರೀ ಮಲ್ಲಿಕಾರ್ಜುನ ದೇವಾಲಯ ಕೊಚ್ಚಿ ಹೋಗುವ ಸಂಭವವಿz’ೆ ಎಂದು ಆ ವಿಭಾಗದ ಗ್ರಾಮ ಪಂಚಾಯ್ತಿ ಸದಸ್ಯ ದಂಡಿನ ಜಯಂತ ಹೇಳುತ್ತಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಜನ ಪ್ರತಿನಿಧಿಗಳು, ಅರಣ್ಯ ಇಲಾಖಾ ಅಧಿಕಾರಿಗಳಿಗೂ ಪತ್ರ ಬರೆದು ಗಮನ ಸೆಳೆದರೂ ಯಾವದೇ ಸ್ಪಂದನ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ..!

ಮಳೆಗಾಲದಲ್ಲಿ ಜಾಸ್ತಿ..!

‘ಇಲ್ಲಿ ಗಣಿಗಾರಿಕೆ ನಡೆಯಲು ಅರಣ್ಯ ಇಲಾಖೆಯವರೇ ನೇರ ಕಾರಣ, ಇಲ್ಲಿನವರೂ ಕೆಲವರು ಏಜೆಂಟರುಗಳಿದ್ದಾರೆ, ಸುಳ್ಯ, ಪುತ್ತೂರು, ಮೈಸೂರು ಕಡೆಗಳಿಂದ ವ್ಯಾಪಾರಿಗಳು ಬರುತ್ತಾರೆ. ಮಳೆಗಾಲದಲ್ಲಿ ಹೆಚ್ಚಿಗೆ ಗಣಿಗಾರಿಕೆ ನಡೆಯುತ್ತದೆ. ಇದನ್ನು ತಡೆಗಟ್ಟಿ ಬೆಟ್ಟವನ್ನು ರಕ್ಷಣೆ ಮಾಡಬೇಕಿದೆ’ ಎಂದು ನಾಗರಿಕ ಹೋರಾಟ ಸಮಿತಿಯ ಪ್ರಮುಖ ಕುದುಕುಳಿ ಭರತ್ ಹೇಳುತ್ತಾರೆ.

ಸಿಕ್ಕಿಕೊಳ್ಳೋದು ಖಂಡಿತಾ..!

‘ಈ ನಿಶಾನೆ ಮೊಟ್ಟೆಗೂ ತಾವೂರಿನ ಶ್ರೀ ಭಗವತಿ ದೇವಾಲಯಕ್ಕೂ ನಂಟಿದೆ. ಇಲ್ಲಿ ಯಾರೇ ಏನೇ ಅಕ್ರಮ ಮಾಡಿದರೂ ಸಿಕ್ಕಿ ಹಾಕಿಕೊಳ್ಳೋದು, ಜೈಲಿಗೆ ಹೋಗೋದು ಖಂಡಿತಾ., ಈ ಬಗ್ಗೆ ಪ್ರಶ್ನೆಯಲ್ಲಿಯೂ ತಿಳಿದು ಬಂದಿದೆ. ಹಾಗಾಗಿ ಇಲ್ಲಿ ಎಷ್ಟೇ ಗೌಪ್ಯವಾಗಿ ಗಣಿಗಾರಿಕೆ ಮಾಡಿದರೂ ಹೊರ ಪ್ರಪಂಚಕ್ಕೆ ಗೊತ್ತಾಗುತ್ತದೆ’ ಎಂದು ತಾವೂರಿನ ಕುದುಪಜೆ ಪ್ರಕಾಶ್ ಹೇಳುತ್ತಾರೆ.

ಜಿಲ್ಲಾಧಿಕಾರಿ ಹೋಗಿದ್ದರು..!

ನಿಶಾನೆ ಮೊಟ್ಟೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾಗಮಂಡಲ ಗ್ರಾಮ ಪಂಚಾಯ್ತಿಯಿAದ ತಿಂಗಳಿಗೊಮ್ಮೆ ಪರಿಶೀಲಿಸಲು ಪಂಚಾಯ್ತಿಗೆ ಅನುಮತಿ ನೀಡಬೇಕೆಂದು ಕೋರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಹಿಂದಿನ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಆದರೆ, ಈ ಸಂದರ್ಭ ಅರಣ್ಯ ಇಲಾಖೆಯವರು ಜನ ಪ್ರತಿನಿಧಿಗಳಿಗೆ, ಗ್ರಾಮಸ್ಥರಿಗೆ ತೆರಳಲು ಅವಕಾಶ ನೀಡಿರಲಿಲ್ಲ. ಅಲ್ಲದೆ, ಜಿಲ್ಲಾಧಿಕಾರಿಗಳು ಚಾರಣ ಬಂದಿರುವದಾಗಿ ದಾಖಲೆಯಲ್ಲಿ ನಮೂದಿಸಿದ್ದರು..!

ಅಧಿಕಾರಿಗಳು ರಾಜಕಾರಣಿಗಳ ಮನೆಗೆ..!?

ಕಾಡು ನಮ್ಮದು., ಇದು ನಮ್ಮದೇ ಸಾಮ್ರಾಜ್ಯ, ನಾವು ಏನು ಮಾಡಿದರೂ ಕೇಳುವವರು ಯಾರೂ ಇಲ್ಲವೆಂದು ತಿಳಿದು ಅಕ್ರಮ ವ್ಯವಹಾರಕ್ಕೆ ಕೈ ಹಾಕಿ ಇದೀಗ ಸಿಕ್ಕಿ ಹಾಕಿಕೊಂಡಿರುವ ಅರಣ್ಯ ಇಲಾಖಾ ಅಧಿಕಾರಿಗಳು ರಾಜಕಾರಣಿಗಳ ಬಳಿ ತೆರಳಿ ತಮ್ಮನ್ನು ರಕ್ಷಣೆ ಮಾಡುವಂತೆ ದುಂಬಾಲು ಬೀಳುತ್ತಿದ್ದಾರೆ. ಇಷ್ಟೊಂದು ಅಕ್ರಮವೆÀಸಗಿರುವ ಅಧಿಕಾರಿಗಳನ್ನು ರಕ್ಷಣೆ ಮಾಡಿದರೆ ಹೇಗೇ..? ಎಂಬದು ಗ್ರಾಮಸ್ಥರ ಪ್ರಶ್ನೆ..? ಮೇಲಧಿಕಾರಿಗಳಿಂದ ವಿಚಾರಣೆ ವೇಳೆ ಸಿಬ್ಬಂದಿಯೋರ್ವರು ಉಪ ವಲಯ ಅರಣ್ಯಾಧಿಕಾರಿಗಳ ಹೆಸರು ಬಹಿರಂಗಪಡಿಸಿರುವದಾಗಿ ಹೇಳಲಾಗುತ್ತಿದ್ದು, ಈ ವಿಚಾರವಾಗಿಯೇ ಕಚೇರಿಯಲ್ಲಿ ಬಡಿದಾಟ ಆಗಿದ್ದು..!

? ಸಂತೋಷ್, ಸುನಿಲ್