ಮಡಿಕೇರಿ, ಜ. ೧೨: ಜಿಲ್ಲೆಯಲ್ಲಿ ಶಾಲಾ ಕಾಲೇಜು ಬಂದ್ ಮಾಡುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸರಕಾರೀ ಮಾರ್ಗಸೂಚಿಯನ್ವಯ ಪಾಸಿಟಿವಿಟಿ ದರ ಶೇ. ೧೦ ಮೀರಿದರೆ ಮಾತ್ರ ಶಾಲಾ ಕಾಲೇಜು ಬಂದ್ ಮಾಡಬೇಕಾU Àಬಹುದು. ಅಂತಹ ಪರಿಸ್ಥಿತಿ ಜಿಲ್ಲೆಯಲ್ಲಿ ಬಂದಿಲ್ಲ. ಶಾಲಾ - ಕಾಲೇಜುಗಳು ಎಂದಿನAತೆ ನಡೆಯುತ್ತವೆ. ಕೆಲವು ಶಾಲೆಗಳಲ್ಲಿ ಈ ಹಿಂದೆ ಶಾಲಾ ಮಕ್ಕಳು ಮತ್ತು ಸಿಬ್ಬಂದಿಗೆ ಕೋವಿಡ್ ಸಂಖ್ಯೆ ಹೆಚ್ಚಾದಾಗ ಆಯಾ ಶಾಲೆಗಳನ್ನು ಬಂದ್ ಮಾಡಲಾಗಿತ್ತು. ಈಗ ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಡಾ. ಸತೀಶ ತಿಳಿಸಿದ್ದಾರೆ.
ಅವರು ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಕೋವಿಡ್ ಶೇ.೫ ರ ಒಳಗಿದ್ದು ನಿಯಂತ್ರಣದಲ್ಲಿದೆ, ಕಳೆದ ನಾಲ್ಕೆöÊದು ದಿನಗಳಿಂದ ಕೋವಿಡ್ ಪಾಸಿಟಿವಿಟಿ ದರ ಶೇ. ೨ ರೊಳಗೆ ಇದೆ. ಏಕೆಂದರೆ, ಪರೀಕ್ಷಾ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಸಕ್ರಿಯ ಕೋವಿಡ್ ಸಂಖ್ಯೆ ಕಡಿಮೆಯಾಗುತ್ತಿದೆ. ಕೋವಿಡ್ ಪಾಸಿಟಿವಿಟಿ ದರ ಪ್ರಮಾಣ ಏರಿಳಿತ ಕಾಣುತ್ತಿದ್ದು ಹತೋಟಿಗೆ ತರಲು ಪ್ರಯತ್ನ ಮಾಡಲಾಗುತ್ತಿದೆ. ಶಾಲೆಗಳಲ್ಲಿ ಕೋವಿಡ್ ಪ್ರಮಾಣ ಕಂಡುಬAದಾಗ ಈ ಏರಿಳಿತ ಉಂಟಾಗುತ್ತದೆ. ಈ ಬಗ್ಗೆ ಆತಂಕ ಪಡಬೇಕಾಗಿಲ್ಲ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಕೊಡಗಿನಿಂದ ಶಬರಿಮಲೆಗೆ ತೆರಳಿ ವಾಪಸಾಗುವ ಭಕ್ತರಿಗೆ ಕಡ್ಡಾಯ ಏಳು ದಿನಗಳ
(ಮೊದಲ ಪುಟದಿಂದ) ಕ್ವಾರಂಟೈನ್ ಮತ್ತು ಕೋವಿಡ್ ಲಕ್ಷಣ ಕಂಡು ಬಂದರೆ ತಕ್ಷಣ ಚಿಕಿತ್ಸೆಗೆ ಒಳಪಡಬೇಕು ಅಲ್ಲದೆ, ಅವರ ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳನ್ನು ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಸತೀಶ ತಿಳಿಸಿದ್ದಾರೆ.
ಈ ಹಿಂದೆ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷಾ ಸಂಖ್ಯೆ ಕಡಿಮೆಯಿತ್ತು. ಈಗ ಅದನ್ನು ೩೨೦೦ ಕ್ಕೆ ಹೆಚ್ಚಿಸಲಾಗಿದೆ. ಈಗ ಶೇ.೮೦-೯೦ರಷ್ಟು ಸಾಧನೆಯಾಗುತ್ತಿದೆ. ಮುಂದೆ ಪೂರ್ಣ ಸಾಧನೆ ಮಾಡಲಾಗುತ್ತದೆ ಎಂದರು.
ಪ್ರಕರಣಗಳ ವಿವರ
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಬುಧವಾರ ಬಿಡುಗಡೆ ಮಾಡಿರುವ ಕೋವಿಡ್ ಪ್ರಕರಣಗಳ ವರದಿ ವಿವರ ಹೀಗಿದೆ:- ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಬುಧವಾರ ಶೇ.೨.೧೫ ಆಗಿದೆ. ಬುಧವಾರ ೫೦ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆೆ. ೪೭ ಪ್ರಕರಣಗಳು ಆರ್‌ಟಿಪಿಸಿಆರ್ ಮತ್ತು ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿವೆÉ. ಮಡಿಕೇರಿ ತಾಲೂಕಿನಲ್ಲಿ ೧೦, ವೀರಾಜಪೇಟೆ ತಾಲೂಕಿನಲ್ಲಿ ೨೫, ಸೋಮವಾರಪೇಟೆ ತಾಲೂಕಿನಲ್ಲಿ ೧೫ ಹೊಸ ಕೋವಿಡ್-೧೯ ಪ್ರಕರಣಗಳು ಕಂಡುಬAದಿವೆÉ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-೧೯ ಪ್ರಕರಣಗಳ ಸಂಖ್ಯೆ ೩೬,೧೯೫ ಆಗಿದ್ದು, ಕಳೆದ ೨೪ ಗಂಟೆಗಳ ಅವಧಿಯಲ್ಲಿ ೯ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದುವರೆಗೆ ಒಟ್ಟು ೩೫,೪೨೭ ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು ೪೩೮ ಮರಣ ಪ್ರಕರಣಗಳು ವರದಿಯಾಗಿವೆÉ. ಇದೀಗ ಒಟ್ಟು ೩೩೦ ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ೧೬ ಮಂದಿ ಮಡಿಕೇರಿಯ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ೮ ಮಂದಿ ಸೋಮವಾರಪೇಟೆ ಸರಕಾರೀ ಆಸ್ಪತ್ರೆ ಹಾಗೂ ೩ ಮಂದಿ ಪಾಲಿಬೆಟ್ಟ ಸಿಹೆಚ್‌ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ೩೦೩ ಮಂದಿ ಅವರವರ ಮನೆಗಳಲ್ಲಿ ಪ್ರತ್ಯೇಕ ವ್ಯವಸ್ಥೆಯಲ್ಲಿದ್ದಾರೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸಾವು ಉಂಟಾಗಿಲ್ಲ, ಜಿಲ್ಲೆಯಲ್ಲಿ ಕಂಟೈನ್ಮೆAಟ್ ವಲಯಗಳ ಸಂಖ್ಯೆ ೬೧ ಆಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.