ಕುಶಾಲನಗರ, ಜ. ೧೧: ಕುಶಾಲನಗರ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇರುವ ಕುಶಾಲನಗರ ಪಟ್ಟಣ ಪಂಚಾಯಿತಿ ಪ್ರದೇಶದಲ್ಲಿರುವ ಕೆರೆಗಳ ದಾಖಲಾತಿಗಳು ಸಂಬAಧಿಸಿದ ಇಲಾಖೆಗಳಿಂದ ಲಭ್ಯವಾಗದೆ ಕೆರೆಗಳ ಅಭಿವೃದ್ಧಿ ಕಾರ್ಯ ನೆನೆಗುದಿಗೆ ಬೀಳಲು ಪ್ರಮುಖ ಕಾರಣವಾಗಿದೆ.

ಕುಶಾಲನಗರ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕೆರೆಗಳ ಪುನಶ್ಚೇತನಕ್ಕಾಗಿ ಕ್ರಮವಹಿಸುವ ಸಂಬAಧ ಕೆರೆಗಳ ಸರ್ವೆ ಕಾರ್ಯ ನಡೆಸಿ ಗಡಿ ಗುರುತು ಮಾಡಿಸಿ ಕೊಳ್ಳುವಂತೆ ಮತ್ತು ಕೆರೆಗೆ ಸಂಬAಧ ಪಟ್ಟ ದಾಖಲೆಗಳನ್ನು ಕುಶಾಲನಗರ ಯೋಜನಾ ಪ್ರಾಧಿಕಾರಕ್ಕೆ ನೀಡುವಂತೆ ಕಂದಾಯ ಇಲಾಖೆಗೆ ಪತ್ರ ಬರೆದರೂ ಯಾವುದೇ ರೀತಿಯ ಸ್ಪಂದನ ದೊರೆತಿಲ್ಲ ಎನ್ನುವ ದೂರುಗಳು ಕೇಳಿಬಂದಿವೆ.

ಈ ಬಗ್ಗೆ ಕುಶಾಲನಗರ ಯೋಜನಾ ಪ್ರಾಧಿಕಾರ ಸಂಬAಧಿ ಸಿದ ತಾಲೂಕು ತಹಶೀಲ್ದಾರ್ ಕಚೇರಿಗೆ ಪತ್ರ ವ್ಯವಹಾರ ನಡೆಸಿದರೂ ಯಾವುದೇ ರೀತಿಯ ಸ್ಪಂದನ ದೊರಕಿಲ್ಲ.

ಕಳೆದ ಮಾರ್ಚ್ ತಿಂಗಳಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ತಾವರೆಕೆರೆ ಹಾಗೂ ಸೋಮೇಶ್ವರ ದೇವರ ಕೆರೆಗಳ ಸರ್ವೆ ಕಾರ್ಯವಾಗಿದೆ. ಇದುವರೆಗೆ ಕೆರೆಗಳ ದಾಖಲಾತಿ ಇನ್ನು ಯೋಜನಾ ಪ್ರಾಧಿಕಾರಕ್ಕೆ ದೊರಕದಿರುವುದು ಕೆರೆಯ ಅಭಿವೃದ್ಧಿ ಕಾಮಗಾರಿಗೆ ತೊಡಕು ಉಂಟಾಗಿದೆ.

ಪುನರ್‌ಜೀವನ ಕಾರ್ಯಕ್ಕೆ ಜಿಲ್ಲಾಧಿಕಾರಿಗಳು ಕೂಡ ಇತ್ತೀಚೆಗೆ ಸೂಚನೆ ನೀಡಿದ್ದರೂ ಸಂಬAಧಿಸಿದ ಇಲಾಖೆಗಳಿಂದ ಯಾವುದೇ ರೀತಿಯ ಮನ್ನಣೆÉ ದೊರಕುತ್ತಿಲ್ಲ ಎನ್ನುತ್ತಾರೆ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧಿಕಾರಿಗಳು.

ಈ ಹಿಂದೆ ತಾವರೆಕೆರೆಗೆ ಭಾರೀ ಪ್ರಮಾಣದ ಮಣ್ಣು ತುಂಬಿಸಿ ಅಕ್ರಮವಾಗಿ ರಸ್ತೆ ಮಾಡಿದ ಸಂದರ್ಭ ಕಾವೇರಿ ರಿವರ್ ಸೇವಾ ಟ್ರಸ್ಟ್ ಸಮಿತಿ ಪ್ರಮುಖರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ ಬೆನ್ನಲ್ಲೇ ಅಕ್ರಮವಾಗಿ ತುಂಬಿಸಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆದಿತ್ತು. ನಂತರ ಕುಶಾಲನಗರ ಯೋಜನಾ ಪ್ರಾಧಿಕಾರಕ್ಕೆ ಪತ್ರ ಬರೆದು ಕೆರೆಗಳ ಅಭಿವೃದ್ಧಿ ಮಾಡುವಂತೆ ಟ್ರಸ್ಟ್ ಮೂಲಕ ಮನವಿ ಮಾಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ಕಂದಾಯ ಇಲಾಖೆಗೆ ಪತ್ರ ಬರೆದು ಸರ್ವೆ ಕಾರ್ಯ ನಡೆಸಿ ದಾಖಲೆಗಳನ್ನು ಸಿದ್ಧಪಡಿಸುವಂತೆ ಕೋರಿದ ಹಿನ್ನೆಲೆಯಲ್ಲಿ ತಕ್ಷಣ ತಾವರೆಕೆರೆ ಮತ್ತು ಸೋಮೇಶ್ವರ ದೇವರ ಕೆರೆಯ ಸರ್ವೆ ಕಾರ್ಯ ಕೂಡ ನಡೆದಿತ್ತು. ತದನಂತರ ಕುಶಾಲನಗರ ತಾವರೆಕೆರೆ ಮತ್ತು ಸೋಮೇಶ್ವರ ಕೆರೆಗಳ ಪುನಶ್ಚೇತನದ ಬಗ್ಗೆ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಸಲಾಗಿತ್ತು. ಭೂದಾಖಲೆಗಳ ಇಲಾಖೆ ಮೂಲಕ ಅಗತ್ಯ ದಾಖಲೆಯನ್ನು ಪಡೆದು ಸಣ್ಣ ನೀರಾವರಿ ಇಲಾಖೆ ಮೂಲಕ ಡಿಪಿಆರ್ ಸಿದ್ಧಪಡಿಸುವಂತೆ ಯೋಜನೆ ರೂಪಿಸಲಾಗಿತ್ತು. ಆದರೆ ಅಗತ್ಯ ದಾಖಲೆಗಳು ತಹಶೀಲ್ದಾರ್ ಕಚೇರಿಯಿಂದ ದೊರಕದೆ ಕುಶಾಲ ನಗರ ಪಟ್ಟಣದ ಕೆರೆಗಳ ಅಭಿವೃದ್ಧಿ ಕಾರ್ಯ ನೆನೆಗುದಿಗೆ ಬಿದ್ದಿದೆ ಎಂದು ತಿಳಿದುಬಂದಿದೆ.

ಕುಶಾಲನಗರ ಪಟ್ಟಣ ವ್ಯಾಪ್ತಿಯ ತಾವರೆಕೆರೆ ಸೋಮೇಶ್ವರ ಕೆರೆ ಒತ್ತುವರಿ ಇಲ್ಲದೆ ಇರುವ ಬಗ್ಗೆ ಸರ್ವೆ ವರದಿ ಹಾಗೂ ನಕ್ಷೆ ಆರ್‌ಟಿಸಿ ಇತ್ಯಾದಿ ದಾಖಲೆಗಳನ್ನು ಕುಶಾಲನಗರ ಪ್ರಾಧಿಕಾರಕ್ಕೆ ಮುಂದಿನ ಕ್ರಮಕ್ಕಾಗಿ ತಾಲೂಕು ಕಚೇರಿ ಇಂದ ಒದಗಿಸ ಬೇಕಿತ್ತು. ಆದರೆ ಇದುವರೆಗೂ ಕಂದಾಯ ಇಲಾಖೆಯಿಂದ ಪ್ರಾಧಿಕಾರಕ್ಕೆ ದಾಖಲೆಗಳು ಲಭ್ಯ ವಾಗಿರುವುದಿಲ್ಲ ಎಂದು ಕುಶಾಲನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಳು ಲಿಖಿತವಾಗಿ ಕೋರಿರುವುದು ಕಂಡುಬAದಿದೆ.

ಸೋಮವಾರಪೇಟೆ ತಾಲೂಕು ಕಚೇರಿಯಿಂದ ಸಂಬAಧಪಟ್ಟ ದಾಖಲೆಗಳನ್ನು ಈಗಾಗಲೇ ಕುಶಾಲನಗರ ತಾಲೂಕು ಕಚೇರಿಗೆ ವರ್ಗಾಯಿಸಲಾಗಿದ್ದು ಈ ದಾಖಲೆಗಳನ್ನು ತಕ್ಷಣ ಯೋಜನಾ ಪ್ರಾಧಿಕಾರಕ್ಕೆ ನೀಡುವಂತೆ ಸದಸ್ಯ ಕಾರ್ಯದರ್ಶಿಗಳು ಸೂಚಿಸಿದ್ದಾರೆ.

ಕೆರೆಯ ಸರ್ವೆ ವರದಿ ಹಾಗೂ ನಕ್ಷೆ ಆರ್‌ಟಿಸಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಅಧಿಕಾರಕ್ಕೆ ಒದಗಿಸಿದಲ್ಲಿ ಕೆರೆಗಳ ಪುನಶ್ಚೇತನಕ್ಕೆ ಮುಂದಿನ ಹೆಜ್ಜೆ ಇಡಲು ಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಶಾಲನಗರ ಪಟ್ಟಣ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಈಗಾಗಲೇ ರೂ. ೨.೫ ಕೋಟಿ ಅನುದಾನ ಪ್ರಾಧಿಕಾರದಲ್ಲಿ ಲಭ್ಯವಿದೆ. ಆ ಮೂಲಕ ಕೆರೆಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳ ಬಹುದು ಎಂದು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ‘ಶಕ್ತಿ’ಗೆ ತಿಳಿಸಿದ್ದಾರೆ.

ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳಲ್ಲಿ ಶಕ್ತಿ ಪ್ರತಿಕ್ರಿಯೆ ಬಯಸಿದಾಗ ಇನ್ನೆರಡು ದಿನಗಳಲ್ಲಿ ಈ ಬಗ್ಗೆ ದಾಖಲೆಗಳನ್ನು ಸಿದ್ಧಪಡಿಸಿ ಕಳುಹಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಕೆರೆಗಳ ಅಭಿವೃದ್ಧಿ ಸಂದರ್ಭ ಕೆರೆಯ ಬಫರ್‌ಝೋನ್ ವ್ಯಾಪ್ತಿಯ ೧೦೦ ಅಡಿಗಳಷ್ಟು ಪ್ರದೇಶದ ಗಡಿ ಗುರುತು ಮಾಡಿ ಅಭಿವೃದ್ಧಿಗೊಳಿಸುವ ಸಂಬAಧ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿ.ಪಂ. ಮಾಜಿ ಅಧ್ಯಕ್ಷ ಹೆಚ್.ಎಸ್. ಅಶೋಕ್ ತಿಳಿಸಿದ್ದು, ಈ ಸಂಬAಧ ಒತ್ತುವರಿ ಪ್ರದೇಶಗಳನ್ನು ಅಧಿಕಾರಿಗಳು ತೆರವು ಗೊಳಿಸುವ ಕಾರ್ಯ ನಡೆಸಬೇಕಾಗಿದೆ ಮತ್ತು ಕೆರೆಯ ಸಂರಕ್ಷಣೆ ಜೊತೆಗೆ ಅಭಿವೃದ್ಧಿ ಕೆಲಸ ಮಾಡಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

- ಎಂ.ಎನ್. ಚಂದ್ರಮೋಹನ್