ಕುಶಾಲನಗರ, ಜ. ೧೦: ದ್ವಿಚಕ್ರ ವಾಹನಕ್ಕೆ ಮಿನಿ ಲಾರಿಯೊಂದು ಡಿಕ್ಕಿಯಾದ ಕಾರಣ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಕುಶಾಲನಗರ ಸಮೀಪದ ಗುಡ್ಡೆಹೊಸೂರು ಹೆದ್ದಾರಿಯಲ್ಲಿ ನಡೆದಿದೆ.

ಗುಡ್ಡೆಹೊಸೂರು ಬಳಿಯ ಈಡನ್ ಗಾರ್ಡನ್ ನಿವಾಸಿ ಕಾನೆತಿಲ್ ತೇಜಸ್ (೪೭) ಮೃತ ದುರ್ದೈವಿ.

ಗುಡ್ಡೆಹೊಸೂರಿನಿಂದ ತಮ್ಮ ದ್ವಿಚಕ್ರ ವಾಹನದಲ್ಲಿ (ಕೆಎ.೧೨.ಎಸ್.೯೮೭೮) ಕುಶಾಲನಗರದತ್ತ ಬರುತ್ತಿದ್ದ ಸಂದರ್ಭ ಎದುರಿನಿಂದ ಕಾರೊಂದನ್ನು ಓವರ್ ಟೇಕ್ ಮಾಡಿ ಬಂದ ಜಲ್ಲಿ ತುಂಬಿದ್ದ ಸ್ವರಾಜ್ ಮಜ್ದಾ (ಕೆಎ.೧೨.ಎ.೪೭೦೫) ವಾಹನ ಡಿಕ್ಕಿ ಹೊಡೆದಿದೆ. ಕೂಡಲೇ ಗಾಯಾಳುವನ್ನು ಕುಶಾಲನಗರದಲ್ಲಿ ಪ್ರಥಮ ಚಿಕಿತ್ಸೆಕೊಡಿಸಿ ಮೈಸೂರಿಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬAಧಿಸಿದAತೆ ಸ್ವರಾಜ್ ಮಜ್ದಾ ಚಾಲಕ ಚೇರಂಬಾಣೆಯ ಜನಾರ್ಧನ್ ಎಂಬಾತನನ್ನು ವಶಕ್ಕೆ ಪಡೆದ ಕುಶಾಲನಗರ ಸಂಚಾರಿ ಪೊಲೀಸರು ವಿಚಾರಣೆಗೆ ಒಳಪಡಿಸಿ ಕ್ರಮಕೈಗೊಂಡಿದ್ದಾರೆ.