ಮಾಜಿ ಪ್ರಧಾನಿ ಇನ್ನಿಲ್ಲ. ಹಿರಿಯ ನಟ, ನಟಿ ಓಮಿಕ್ರಾನ್ನಿಂದ ಸತ್ತು ಹೋದಳು- ಹೀಗೆಲ್ಲಾ ಒದರುವ ವೀಡಿಯೋ ಗಳನ್ನು ನೋಡಿದ ಎಂಥವನಾದರೂ ಒಂದು ಕ್ಷಣ ವಿಚಲಿತನಾಗುವುದು ಖಂಡಿತ. ಶ್ರದ್ಧಾಂಜಲಿ ಥಂಬ್ನೇಲ್ ಗಳನ್ನೊಳಗೊಂಡ ಸುಳ್ಳು ಸುದ್ದಿ ಹೊತ್ತ ಇಂಥ ಆಡಿಯೋ-ವಿಶುವಲ್ ಕ್ಲಿಪ್ಗಳು ನಿರಂಕುಶವಾಗಿ ಇಂದು ಯುಟ್ಯೂಬಿನಲ್ಲಿ ಹರಿದಾಡುತ್ತಿವೆ. ಇದಕ್ಕೆ ಜೋಡಿತವಾಗಿರುವ ಮತ್ತಷ್ಟು ಚ್ಯಾನಲ್ಗಳು ಒಂದು ದಿಕ್ಕಿನಿಂದ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರಕಾರದ ವಿರುದ್ಧ ಪ್ರಚೋದನಾತ್ಮಕ, ಮ್ಯಾನಿಪ್ಯುಲೇಟರಿ ವದಂತಿಗಳನ್ನು ಹಬ್ಬುತ್ತ ಮತ್ತೊಂದು ಕಡೆಯಿಂದ ಜನರನ್ನ ‘ಪೋರ್ನ್ ಲೋಕದತ್ತ’ ನಿಧಾನವಾಗಿ ಸೆಳೆಯುತ್ತಾ ಸಾಮಾಜಿಕ ಸ್ವಾಸ್ಥö್ಯವನ್ನು ಮೂರಾಬಟ್ಟೆ ಮಾಡಿ ನಿರಂತರ ಪ್ರಸಾರ ಕಾಣುತ್ತಲೆ ಇದೆ. ದುರಂತವೆAದರೆ ಇಂಥ ಸುಳ್ಳು ಸುದ್ದಿಗಳನ್ನು ಸಮಾಜದ ಕೆಲವು ವರ್ಗ ಶಂಖದಿAದ ಬರುತ್ತಿರುವ ತೀರ್ಥ ಅನ್ನುವ ಭ್ರಾಂತಿನಲ್ಲಿ ಕೊಚ್ಚಿ ಹೋಗುತ್ತಿದ್ದಾರೆ.
ನೀವು ಒಂದುವೇಳೆ ಸೂಪರ್ ಮಾರ್ಕೆಟ್ನಲ್ಲಿ ಇಲ್ಲ ಮಾಲ್ನಲ್ಲೋ ಶಾಪಿಂಗ್ ಮುಗಿಸಿ ಮನೆಗೆ ಮುಟ್ಟುವುದಕ್ಕೂ ಮೊದಲೇ ಒಂದೊ ಎರಡೊ ವಾಟ್ಸಾಪ್ ಗ್ರೂಪ್ಗಳಿಗೆ ಅದಾಗಲೇ ನಿಮ್ಮ ಅರಿವಿಗೆಬಾರದೆ ಸೇರಿಯಾಗಿರುತ್ತೀರಿ.
ಕೆಬಿಸಿಯಲ್ಲಿ ೨,೫೦೦,೦೦೦ ಲಾಟರಿ ಹೊಡೆದಿದೆ, ನಿಮ್ಮೆಲ್ಲಾ ಜಾತಕ ನಮಗೆ ಕಳುಹಿಸಿ ಹಣ ಕೊಡುತ್ತೇವೆ ಅಂತ ಅಳುಕಿಲ್ಲದೆ, ಸಾವಿರದಲ್ಲಿ ಒಬ್ಬನಾದರೂ ಮಿಕ ಬಲೆಗೆ ಬಿದ್ದೇಬೀಳುತ್ತಾನೆ ಅನ್ನುವ ದೃಢಸಂಕಲ್ಪದೊAದಿಗೆ ಪ್ರತಿನಿತ್ಯ ಆನ್ಲೈನ್ ಠಕ್ಕರು ಆಮಿಷ ಒಡ್ಡುತ್ತಲೆ ಇರುತ್ತಾರೆ. ಇಂಥ ಸಣ್ಣ ವಿಷಯಗಳ ಬಗ್ಗೆ ಯಾರು ತಲೆ ಹಾಳು ಮಾಡಿಕೊಳ್ಳಲು ತಯಾರಿರುವುದಿಲ್ಲ. ಹೇಗೂ ಬುದ್ಧಿವಂತರು ನಾವು, ಮೋಸದ ಜಾಲಕ್ಕೆ ಸಿಲುಕೆವು ತಾವೆಂದೂ, ಉಳಿದವರ ಚಿಂತೆ ತಮಗೆ ಏತಕ್ಕಯ್ಯ - ಎಂಬ ಉಡಾಫೆ ಪ್ರವೃತ್ತಿ ತೋರಿಬಿಡುತ್ತೇವೆ.
ನಾಗರಿಕತೆಯ ಮೇಲೆ ಇಂದು ಅತಿ ಹೆಚ್ಚು ಪ್ರಭಾವ ಬೀರುತ್ತಿರುವ ಮಾಧ್ಯಮ ಅಂದರೆ ನಿಸ್ಸಂಶಯವಾಗಿ ಅದು ಸೋಶಿಯಲ್ ಮೀಡಿಯ. ಯಾವ ಕಳ್ಳ, ಮಳ್ಳ, ಸುಳ್ಳ, ಗೊತ್ತು-ಗುರಿ ಇಲ್ಲದ ಐನಾತಿ ಕೂಡ ಅಂತರ್ಜಾಲ ಸಂಪರ್ಕ ಪಡೆದು, ಆನ್ಲೈನ್ ಖಾತೆ ತೆರೆದು ಬೇಕಾಬಿಟ್ಟಿ ಪೋಸ್ಟ್ಗಳನ್ನು ಹಾಕಿ ಬಿಡಬಹು ದಾದಷ್ಟು ಭಂಡ ಧೈರ್ಯವನ್ನ ‘ಪತ್ರಿಕಾ ಸ್ವಾತಂತ್ರö್ಯ’ ಈಗ ದಯಪಾಲಿಸಿಬಿಟ್ಟಿದೆ. ಕಪಿಮುಷ್ಠಿಯೊಳಗೆ ಸಿಲುಕಿರುವ ‘ಆನ್ಲೈನ್ ಜರ್ನಲಿಸಂ’ ಇಂದು ಗಬ್ಬೆದ್ದು ಗತಿಕೆಟ್ಟು ಹಳ್ಳಹಿಡಿದಿದೆ. ವಿಶ್ವಾಸರ್ಹತೆ, ಪರಿಶುದ್ಧತೆ ಸದ್ಯಕ್ಕೆ ಉಳಿಸಿಕೊಂಡಿರುವುದು ಮುದ್ರಣ ಮಾಧ್ಯಮ ಮಾತ್ರವೆಂದು ತೋರುತ್ತದೆ. ಕೆಲವು ಆನ್ಲೈನ್ ನ್ಯೂಸ್ ಆ್ಯಪ್ಗಳಲ್ಲಿ ಪರಿಶೀಲನೆ ಕೂಡ ಆಗದ ವದಂತಿ, ಕೋಮು ಸೌಹಾರ್ದತೆ ನಾಶ ಮಾಡುವ, ಸತ್ಯಕ್ಕೆ ದೂರವಾದ ಸುದ್ದಿಗಳು ಲೋಡುಗಟ್ಟಲೆ ದಿನನಿತ್ಯ ಪ್ರಸಾರ ಆಗುತ್ತಿವೆ. ಪ್ರತಿ ನ್ಯೂಸ್ನ ಕಾಮೆಂಟ್ ಸೆಕ್ಷನ್ಗಳಂತೂ ಕೋಮು ಸಮರದ ರಣಾಂಗಣ. ಜನರು ವಾಟ್ಸಾಪ್ ಮೊದಲಾದ ಅಪ್ಲಿಕೇಶನ್ಗಳಲ್ಲಿ ಸುಳ್ಳು ಸುದ್ದಿಗಳ ಸತ್ಯಾಸತ್ಯತೆಯ ಬಗ್ಗೆ ವಿವೇಚಿಸುವಷ್ಟು ಕೂಡ ಪುರುಸೊತ್ತಿಲ್ಲದೆ ತಕ್ಷಣ ಫಾರ್ವರ್ಡ್ ಮಾಡಿಬಿಟ್ಟರೆ ಮಾತ್ರ ಅವರ ಆತ್ಮಕ್ಕೆ ಸಮಾಧಾನ. ಇದೊಂದು ಮಾನಸಿಕ ಕಾಯಿಲೆಯಂತೆ ತೋರುತ್ತದೆ.
ಎಷ್ಟೋ ಮಂದಿ ಇಂದು ಆನ್ಲೈನ್ ಪ್ರ್ರಪಂಚವನ್ನು ಉಪಯುಕ್ತತೆಯಿಂದ ಬಳಸಿಕೊಂಡು ಜೀವನಕ್ಕೆ ಆಸರೆಯಾಗಿ, ಅನ್ನಕ್ಕೆ ದಾರಿಯಾಗಿ ಮಾಡಿಕೊಂಡಿರುವುದು ಧನಾತ್ಮಕ ಬೆಳವಣಿಗೆ. ಆದರೆ ಮತ್ತೊಂದು ಬದಿಯಲ್ಲಿ ಸಮಾಜ ಘಾತುಕರ ಕೈಗಳಿಗೆ ಸಿಲುಕಿರುವ ಸೋಶಿಯಲ್ ಮೀಡಿಯಾ ಕೋಮುವಾದದ ವಿಷಬೀಜ ಬಿತ್ತಿ, ಅಶಾಂತಿ, ಗಲಭೆ ಹಾಗೂ ಅನಗತ್ಯ ಆತಂಕ ಹುಟ್ಟುಹಾಕಿ ಪಸರಿಸುತ್ತಿದೆ.
ರಾಷ್ಟಿçÃಯ ಭದ್ರತೆಗೆ ಭಂಗ ತರುವ ಇಂಥ ಹಸಿ ಬಿಸಿ ಸುಳ್ಳು, ಆತಂಕ ಸೃಜಿಸುವ ‘ಸೈಬರ್ ಟೆರರಿಸಂಗೆ’ ಯಾವುದೇ ತೆರನ ಕಡಿವಾಣ ಇಲ್ಲವೆ ಹಾಗಾದರೆ? ‘ಟ್ರಾಯ್’ ನಿಯಮದ ಪ್ರಕಾರ ಒಬ್ಬ ವ್ಯಕ್ತಿ ಬರೋಬ್ಬರಿ ಹದಿನೆಂಟು ಸಿಮ್ಗಳನ್ನು ಹೊಂದಬಹುದAತೆ! ಒಂದು ಸಿಮ್ ಸಂಖ್ಯೆಯಿAದ ಉಚಿತವಾಗಿ ನಾಲ್ಕು ಜೀಮೇಲ್ ಖಾತೆಗಳನ್ನು ತೆರೆಯ ಬಹುದು. ಇಂತಹ ಒಂದೊAದು ಇ-ಮೇಲ್ ಖಾತೆಯ ಮುಖೇನ ಐವತ್ತರವರೆಗೆ ಯೂಟ್ಯೂಬ್ ಖಾತೆಗಳನ್ನು ತೆರೆಯಬಹುದು. ಹೀಗೆ ಲೆಕ್ಕ ಹಾಕಿದರೆ ಒಬ್ಬ ವ್ಯಕ್ತಿ ತನ್ನ ಹದಿನೆಂಟು ಮೊಬೈಲ್ ಸಂಖ್ಯೆಗಳಿAದ ೩೬೦೦ ಯೂಟ್ಯೂಬ್ ಚಾನಲ್ಗಳನ್ನು ತೆರೆಯಬಹುದು ನೋಡಿ! ಇನ್ನು ಸಂಸ್ಥೆಗಳು ತಮ್ಮ ಹೆಸರಿನಲ್ಲಿ ಎಷ್ಟು ಬೇಕಾದರೂ ಇಮೇಲ್ ಖಾತೆಗಳನ್ನು ಉಚಿತವಾಗಿ ಹೊಂದಬಹುದು! ಹಾಗಾದರೆ ಅವೆಷ್ಟು ಯೂಟ್ಯೂಬ್ ಚಾನಲ್ಗಳನ್ನು ಹೊಂದಬಹುದು ಎಂಬ ಲೆಕ್ಕವನ್ನು ನೀವೇ ಒಮ್ಮೆ ಮಾಡಿನೋಡಿ! ಕಳವಳಕಾರಿಯಾದ ಮತ್ತೊಂದು ಸಂಗತಿ ಅಂದರೆ ಸ್ವಂತದ ಒಂದೇ ಒಂದು ಸಿಮ್ ಕಾರ್ಡ್ ಸಂಖ್ಯೆ ಇಲ್ಲದೆಯೂ ಕೂಡ ಇಮೇಲ್ ಖಾತೆಗಳನ್ನು ಸುಲಭದಲ್ಲಿ ತೆರೆಯ ಬಹುದಂತೆ. ಹೀಗೇ ಮಿತಿಯಿಲ್ಲದ ಚಾನಲ್ಗಳು ತಲೆಯೆತ್ತಲು, ಎಲ್ಲಾ ಸಮಸ್ಯೆಗಳು ತಲೆದೋರಲು ಮೂಲ ಕಾರಣ ಸುಲಭವಾಗಿ ಕೈಗೆಟುಕುವ ಅಂತರ್ಜಾಲ ಸಂಪರ್ಕ, ಉಚಿತ ಪ್ರವೇಶದ ಸೋಶಿಯಲ್ ಮೀಡಿಯಾ ವೇದಿಕೆಗಳು ಹಾಗೂ ಸಿಮ್ ಕಾರ್ಡ್ಗಳು.
ಪಟ್ಟಣವೊಂದರಲ್ಲಿ ಮಳಿಗೆ ತೆರೆದು ವ್ಯಾಪಾರ ಮಾಡಲು ಹೇಗೆ ಸ್ಥಳೀಯ ಕೇಂದ್ರದಿAದ ಪರವಾನಗಿ ಅಗತ್ಯವೊ ಅಂತೆಯೇ ಅಂತರ್ಜಾಲ ಸಂಪರ್ಕ ಹೊಂದಲು ಪರವಾನಗಿಯ ಅಗತ್ಯಯಾಕಿರಬಾರದು? ಅದೂ ಸೈಬರ್ ಭಯೋತ್ಪಾದನೆಯ ಅಟ್ಟಹಾಸ ಮೇರೆ ಮೀರಿರುವ ಇಂದಿನ ದಿನಗಳಲ್ಲಿ?
ಪ್ರಾಸ್ತಾವಿಕ ಪರಿಹಾರ - ಅಂತರ್ಜಾಲ ಸಂಪರ್ಕ, ಆನ್ಲೈನ್ ಖಾತೆಗಳನ್ನು ತೆರೆಯಲು ರೆಜಿಸ್ಟರ್ ಮಾಡುವ ಹಾಗೂ ಪರವಾನಗಿ ನೀಡುವ ಕೇಂದ್ರದ ಪರಿಕಲ್ಪನೆಯ ಸಂಕ್ಷಿಪ್ತ ರೂಪ
‘ಆನ್ಲೈನ್ ಐಡೆಂಟಿಟಿ’ಯ ಸೃಷ್ಟಿ - ಮೊದಲಿಗೆ, ಪ್ರತಿ ಪಟ್ಟಣದಲ್ಲಿ ಕೇಂದ್ರ ಟೆಲಿಕಾಂ ಇಲಾಖೆಯಿಂದ ‘ಆನ್ಲೈನ್ ಲೈಸೆನ್ಸ್’ ನೀಡುವ ಕೇಂದ್ರದ ಸ್ಥಾಪನೆ. ವ್ಯಕ್ತಿಯೊಬ್ಬ ಯಾವುದೇ ರೀತಿಯ ಅಂತರ್ಜಾಲ ಸಂಪರ್ಕ, ಆನ್ಲೈನ್ ಖಾತೆ ಹಾಗೂ ಸಿಮ್ ಪಡೆಯಲು ಸರ್ವ ದಾಖಲೆಗಳಿಗೆ ಡಿಜಿ ಲಾಕರ್ಗೆ ಲಿಂಕ್ ಆದ ‘ಆನ್ಲೈನ್ ಐಡೆಂಟಿಟಿ’ಗೆ (ಔIಆ) ರಿಜಿಸ್ಟರ್ ಆಗುವುದು ಅವಶ್ಯಕ. ದಾಖಲೆಗಳ ಪರಿಶೀಲನೆ ಬಳಿಕೆ ಲೈಸೆನ್ಸ್ ಕೇಂದ್ರ ‘ಒಪ್ಪಿಗೆ ಪತ್ರ’ ಅಂದರೆ ಪರವಾನಗಿ ನೀಡತಕ್ಕದ್ದು.
ಇಂದು ಸಿಮ್ ಕಾರ್ಡ್ಗಳು ಪೆಪ್ಪರ್ಮಿಂಟ್ಗಳAತೆ ಎಲ್ಲೆಂದರಲ್ಲಿ ಲಭ್ಯವಿದ್ದು, ಇದಕ್ಕೆ ಬದಲಾಗಿ ಈ ಲೈಸೆನ್ಸ್ ಕೇಂದ್ರ ‘ವನ್ ಸ್ಟಾಪ್ ಸ್ಟೋರ್’ ರೀತಿಯಲ್ಲಿ ಆನ್ಲೈನ್ ಐಡೆಂಟಿಟಿಗೆ (ಒಐಡಿ) ಲಿಂಕ್ ಆದ ಸಿಮ್ಗಳನ್ನು ಖುದ್ದು ತಾನೇ ವಿತರಿಸಬೇಕು. ಹೀಗೆ ಪ್ರತಿ ವ್ಯಕ್ತಿ ಅಂತರ್ಜಾಲ ಬಳಸಲು ಪೂರ್ವಾನು ಮತಿ, ಪರವಾನಗಿ ಪಡೆದಿರಬೇಕು. ಆತನ ಪ್ರತಿ ಮೊಬೈಲ್ ಸಂಖ್ಯೆ ಒಐಡಿಗೆ ಜೋಡಿತವಾಗಿರಬೇಕು. ಅಲ್ಲದೆ ತಾನು ತೆರೆಯಲಿರುವ ಆನ್ಲೈನ್ ಚಾನೆಲ್ಗಳ ಆಶಯ, ಉದ್ದೇಶ, ಪೋಸ್ಟ್ ಮಾಡಲ್ಪಡುವ ವಿಷಯ ಪ್ರಕಾರಗಳ ಸಂಪೂರ್ಣ ವಿವರವನ್ನು ಲಿಖಿತ ರೂಪದಲ್ಲಿ ಮುಂಚಿತವಾಗಿ ಸ್ಪಷ್ಟಪಡಿಸಿ ಅಂಡರ್ಟೇಕಿAಗ್ಗೆ ಸಹಿ ಮಾಡಿರುವ ಘೋಷಣಾ ಪತ್ರ ‘ಲೈಸನ್ಸ್ ಕೇಂದ್ರ’ ತಯಾರು ಮಾಡಿರಬೇಕು. ಒಟಿಡಿಗೆ ಲಿಂಕ್ ಆದ ಚಾನೆಲ್ಗಳನ್ನು ‘ವೆರಿಫೈಡ್’ ಎಂಬ ಹಸಿರು ಲೇಬಲ್ ನಿಂದ ಗುರುತಿಸಿದರೆ, ಒಟಿಡಿಗೆ ಲಿಂಕ್ ಆಗದ್ದವನ್ನ ‘ಅನ್ವೆರಿಫೈಡ್’ ಎಂಬ ಕೆಂಪು ಲೇಬಲ್ನಿಂದ ಗುರುತಿಸು ವಂತಾಗಬೇಕು. ಇದರೊಂದಿಗೆ ಸಿಮ್ ಹೊಂದಿರುವ ಯಾವುದೇ ವ್ಯಕ್ತಿಗೆ ತನ್ನ ಸಂಖ್ಯೆ ಎಲ್ಲೆಲ್ಲಿ ಯಾವೆಲ್ಲಾ ಸಾಧನಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಅನ್ನುವ ನಿಖರ ಮಾಹಿತಿ ೨೪/೭ ಒಐಡಿ ಮೂಲಕ ಲಭ್ಯವಿರಬೇಕು. ಇದು ಆತನ ಹಕ್ಕು. ಇದಲ್ಲದೆ, ಮೇಲೆ ಹೇಳಿದ ಒಐಡಿ ತಂತ್ರಜ್ಞಾನದ ಮೂಲಕ ನಕಲಿ ದಾಖಲೆಗಳಿಂದ ಸಿಮ್ ಯಾ ಅಂತರ್ಜಾಲ ಸಂಪರ್ಕ ಖರೀದಿ, ಸಿಮ್ ಕ್ಲೋನಿಂಗ್ ಮುಂತಾದ ರಾಷ್ಟಿçÃಯ ಭದ್ರತೆಗೆ ಗಂಡಾAತರ ತಂದೊಡ್ಡುವ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಇನ್ನು, ಸಮಾಜಘಾತುಕರು ಒಂದುವೇಳೆ ವಿಶೇಷ ಚಾನಲ್ಗಳ ಒಳಗೆ ಎನ್ಕಿçಪ್ಟೆಡ್ ಸಂದೇಶಗಳ ಮೂಲಕ ಸಂಭಾಷಣೆ ನಡೆಸಿದರೆ ಲಭ್ಯವಿರುವ ಸುಧಾರಿತ ಆಧುನಿಕ ತಂತ್ರಜ್ಞಾನಗಳಾದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಮಷೀನ್ ಲರ್ನಿಂಗ್ನಿAದ, ಸ್ಪೀಚ್ ಟು ಟೆಕ್ಸ್÷್ಟ, ಡಾಟಾ ಆನಾಲಿಟಿಕ್ಸ್, ಐಪಿ ಅಡ್ರೆಸ್ ಟ್ರಾö್ಯಕಿಂಗ್ಗಳ ಮೂಲಕ ಬೆಳಕು ಚೆಲ್ಲಿ ಆಗಬಹುದಾದ ಅನರ್ಥಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ತಪ್ಪಿಸಬಹುದು.
ಸೈಬರ್ ಸೆಲ್ ಇಂಟೆಲಿಜೆನ್ಸ್ನ ಜವಾಬ್ದಾರಿಯುತ ಅಧಿಕಾರಿಗಳು ಅತ್ಯಾಧುನಿಕ ಸೌಲಭ್ಯಗಳ ಪರಿಣಾಮಕಾರಿ ಉಪಯೋಗದಿಂದ ಸಹಜವಾಗಿ ಈ ನಿಟ್ಟಿನಲ್ಲಿ ಪರಿಶ್ರಮಿಸುತ್ತಿರಬಹುದಾದರೂ ಇವೆಲ್ಲ ದೇಶದ ಒಳಗಿನ ಶತ್ರುಗಳನ್ನು ಸದೆಬಡೆಯುವ ಬಗೆಗಿನ ಮಾತಾಯ್ತು. ಆದರೆ ‘ವರ್ಚುವರ್ ವೈರಿಗಳು’- ಅಂದರೆ ಪರದೇಶದ ನಿಗೂಢ ಸ್ಥಳಗಳಲ್ಲಿ ಕುಳಿತು ನಮ್ಮಲ್ಲಿ ಬೆಂಕಿ ಹಚ್ಚುವ ಕಾರ್ಯಾಚರಣೆಯಲ್ಲಿ ತೊಡಗಿರುವ ಮಂದಿಯನ್ನು ಬಗ್ಗುಬಡಿಯುವ ಬಗೆ? ಕೇವಲ ವೆಬ್ಸೈಟ್ಗಳನ್ನು, ಚಾನಲ್ಗಳನ್ನು ಬ್ಲಾಕ್ ಮಾಡಿದ ಮಾತ್ರಕ್ಕೆ ಸಮಸ್ಯೆ ಮುಗಿಯೊಲ್ಲ. ನಾವು ಚಾಪೆ ಕೆಳಗೆ ನುಗ್ಗಿದರೆ ‘ವರ್ಚುವಲ್ ವೈರಿಗಳು’ ಬೇರೆ ಬೇರೆ ರೂಪಾಂತರ ಗಳಿಂದ ರಂಗೋಲಿ ಕೆಳಗೆ ತೂರುವರು. ಆನ್ಲೈನ್ ಸುದ್ದಿಗಳನ್ನು ಫಿಲ್ಟರ್ ಮಾಡುವುದು, ಚಾನಲ್ಗಳನ್ನು ಸಂಪೂರ್ಣ ವರ್ಗೀಕರಣ ಮಾಡುವುದು, ಗೇಟ್ವೇಗಳ ಮೂಲಕ ಅಪಾಯಕಾರಿ ಮೀಡಿಯಾಗಳನ್ನು ಬ್ಲಾಕ್ ಮಾಡುವುದು -ಇವೆಲ್ಲಾ ಅಂದುಕೊAಡಷ್ಟು ಸುಲಭದ ಕೆಲಸಗಳಲ್ಲವಾದರೂ ಎಲ್ಲವೂ ಸಾಧ್ಯವಾಗುವಂಥವೇ. ಸೋಶಿಯಲ್ ಮೀಡಿಯಾ ಪೋಸ್ಟ್ಗಳ ಕೆಳಗೆ ಲೈಕ್, ಡಿಸ್ಲೆöÊಕ್ಗಳೊಂದಿಗೆ ‘ಫೇಕ್’ ಅನ್ನುವ ಬಟನ್ ಕೂಡ ಇದ್ದಿದ್ದರೆ ಬಹುಶಃ ಒಳ್ಳೆಯದಿತ್ತೇನೋ! ನಮ್ಮ ವ್ಯವಸ್ಥೆ ಹಾಲಿವುಡ್ ಸಿನಿಮಾಗಳಲ್ಲಿ ಕಾಣುವ ಮಾದರಿಯ ವೇಗ ಹೊಂದಿಲ್ಲ ವಾದರೂ ಪ್ರಬಲ ಇಚ್ಛಾಶಕ್ತಿ ಯೊಂದಿದ್ದರೆ ಎಲ್ಲವೂ ಸಾಧ್ಯ.
ಬಳಕೆದಾರರ ಸಂಖ್ಯೆ ಹೆಚ್ಚಾದಷ್ಟು ಸೋಶಿಯಲ್ ಮೀಡಿಯಾ ಮತ್ತು ದೂರಸಂಪರ್ಕ ಇಲಾಖೆಗಳ ಆದಾಯ ಹೆಚ್ಚಾಗುವುದೇನೋ ಸರಿ. ಅದರಿಂದಾಗುವ ಅಡ್ಡಪರಿಣಾಮ ಗಳಿಗೆ ಅಂಕುಶ ಪ್ರಸ್ತುತ ಬಹಳ ಅವಶ್ಯ. ಒಟ್ಟಿನಲ್ಲಿ ಹೇಳುವುದಾದರೆ, ನಾಯಿಕೊಡೆಗಳಂತೆ ತಲೆ ಎತ್ತಿರುವ, ಎತ್ತುತ್ತಿರುವ ಚಾನಲ್ಗಳಿಗೆ ತಕ್ಕಮಟ್ಟಿಗಿನ ಬ್ರೇಕ್ ಹಾಕಲು ಮೇಲೆ ಪ್ರಸ್ತಾಪಿಸಿದ ಆನ್ಲೈನ್ ಐಡಿ ರಚನೆ ಮತ್ತು ಲಿಂಕಿAಗ್ ಖಂಡಿತಾ ಪರಿಣಾಮಕಾರಿ. ಒಂದುವೇಳೆ ಈ ‘ಒಐಡಿ’ ಮಾದರಿಯನ್ನು ಅನುಷ್ಠಾನ ಗೊಳಿಸಿದ ಪಕ್ಷದಲ್ಲಿ ಒಂದಷ್ಟು ಹೊಸ ಐಟಿ ಉದ್ಯೋಗ ಸೃಷ್ಟಿ ಹಾಗೂ ಆನ್ಲೈನ್ ವಸ್ಥೆಯಲ್ಲಿ ಸುಧಾರಣೆಕಂಡು ಸಮಾಜದಲ್ಲಿ ಅನಗತ್ಯವಾಗಿ ಸೃಷ್ಠಿಯಾಗು ತ್ತಿರುವ ಕ್ಷೆÆÃಭೆ ಸದ್ಯಕ್ಕೆ ತುಸು ಮಟ್ಟಿಗೆ ಕಡಿಮೆ ಆಗಬಹುದು.
- ಬಿ.ಎನ್. ರಾಮಚಂದ್ರ, ಮಾಜಿ ಐಟಿ ಪ್ರಾಧ್ಯಾಪಕ, ಕುಶಾಲನಗರ. ಮೊ. ೯೮೮೬೦೪೯೪೮೫