ಮಡಿಕೇರಿ, ಜ. ೧೧: ಕೊಡಗು ಯುವ ಸೇನೆ ಪೊನ್ನಂಪೇಟೆ ತಾಲೂಕು ಘಟಕ ಹಾಗೂ ಮೋದಿ ಅಭಿಮಾನಿ ಬಳಗದ ವತಿಯಿಂದ ಪ್ರಧಾನಿ ಮೋದಿ ಅವರ ದೀರ್ಘಾಯುಷ್ಯಕ್ಕಾಗಿ ಪೊನ್ನಂಪೇಟೆ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ವಿಶೇಷ ಪೂಜೆ ಸಲ್ಲಿಸಿದ ಕಾರ್ಯಕರ್ತರು ಮೋದಿ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದು ದೇಶದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಪತ್ತೆ ಹಚ್ಚಿ ಅದರ ವಿರುದ್ಧ ಕ್ರಮವನ್ನು ಕೈಗೊಳ್ಳಲಿದ್ದಾರೆ ಹಾಗೂ ದೇಶವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಮಾದರಿ ಪ್ರಧಾನಿಯಾಗಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭ ಕೊಡಗು ಯುವ ಸೇನೆ ಹಾಗೂ ಮೋದಿ ಅಭಿಮಾನಿ ಬಳಗದ ಮುಖಂಡರಾದ ಕುಲದೀಪ್ ಪೂಣಚ್ಚ, ಜಿಲ್ಲಾ ಸಂಚಾಲಕ ಮಾಚೆಟ್ಟಿರ ಸಚಿನ್ ಮಂದಣ್ಣ, ಜಿಲ್ಲಾ ಉಪಾಧ್ಯಕ್ಷ ಕೊರಕುಟ್ಟೀರ ಲತಾ ಬೋಪಯ್ಯ, ಪೊನ್ನಂಪೇಟೆ ಯುವ ಸೇನೆ ತಾಲೂಕು ಘಟಕದ ಅಧ್ಯಕ್ಷ ತೀತಿರ ಅಭಿಷೇಕ್ ಮುತ್ತಣ್ಣ, ಸಂಚಾಲಕ ಚಾರಿಮಂಡ ಮನು ದೇವಯ್ಯ, ಸದಸ್ಯರುಗಳಾದ ಕಳ್ಳಿಚಂಡ ಸಿ.ಪೂವಪ್ಪ (ಪ್ರಕಾಶ್), ಕೊರಕುಟ್ಟಿರ ಪ್ರವೀಣ್ ಉತ್ತಪ್ಪ, ಎಂ.ಸಿ.ಸೂರಜ್ ತಿಮ್ಮಯ್ಯ, ಕೊರಕುಟ್ಟಿರ ರೀನಾ ವಿನೋದ್, ಸುನಿತಾ ಸುಬ್ರಮಣಿ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.