ಮಡಿಕೇರಿ, ಜ. ೧೧: ಕೊಡವ ಕೌಟುಂಬಿಕ ಹಾಕಿ ಉತ್ಸವ ೨೦೨೨ರಲ್ಲೂ ಜರುಗುವ ಸಾಧ್ಯತೆ ಇದೀಗ ಬಹುತೇಕ ಇಲ್ಲದಂತಾಗಿದೆ. ಕೊಡವ ಕುಟುಂಬಗಳ ನಡುವಿನ ಈ ವಾರ್ಷಿಕ ‘ಹಾಕಿನಮ್ಮೆ’ಯನ್ನು ಆಯೋಜಿಸುವ ಜವಾಬ್ದಾರಿ ಪಡೆದಿದ್ದ ನಾಪೋಕ್ಲು ವಿಭಾಗದ ಅಪ್ಪಚೆಟ್ಟೋಳಂಡ ಕುಟುಂಬ ಪ್ರಸಕ್ತ ವರ್ಷ ಉತ್ಸವ ಪಂದ್ಯಾವಳಿ ಆಯೋಜಿಸುವ ನಿರ್ಧಾರದಿಂದ ಹಿಂದೆ ಸರಿದಿದೆ.

ಹಾಕಿ ಉತ್ಸವ ಆಯೋಜನೆಗೆ ಸಂಬAಧಿಸಿದAತೆ ಶನಿವಾರದಂದು ಅಪ್ಪಚೆಟ್ಟೋಳಂಡ ಕುಟುಂಬದ ಸಭೆ ನಡೆದಿದ್ದು, ಈ ಸಭೆಯಲ್ಲಿ ೨೦೨೨ರಲ್ಲಿ ಪಂದ್ಯಾವಳಿ ಆಯೋಜಿಸುವ ತೀರ್ಮಾನವನ್ನು ಕೈಬಿಡಲು ನಿರ್ಧರಿಸ ಲಾಗಿದೆ. ಈ ಬಗ್ಗೆ ‘ಶಕ್ತಿ’ಗೆ ಮಾಹಿತಿ ನೀಡಿರುವ ಕುಟುಂಬದ ಪ್ರಮುಖರಾದ ಮನು ಮುತ್ತಪ್ಪ ಅವರು, ಕೋವಿಡ್ - ಓಮಿಕ್ರಾನ್‌ನ ಸಂದಿಗ್ಧತೆ ಹಾಗೂ ಪ್ರಸಕ್ತ ಕಂಡು ಬಂದಿರುವ ಸನ್ನಿವೇಶದಲ್ಲಿ ಉತ್ಸವ ಆಯೋಜಿಸಲು ಸಾಧ್ಯವಿಲ್ಲದಂತಾಗಿದೆ. ಅಲ್ಲದೆ ಅಲ್ಪಾವಧಿ ಮಾತ್ರ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಹಿಂದೆ ಸರಿಯಲಾಗಿದೆ. ಆದರೆ ಕೊಡವ ಹಾಕಿ ಅಕಾಡೆಮಿ ಮುಂದಿನ ವರ್ಷದ ಆಯೋಜನೆಗೆ ಅವಕಾಶ ನೀಡಿದಲ್ಲಿ ಕುಟುಂಬ ಇದಕ್ಕೆ ಸಿದ್ಧವಿದೆ. ಈ ಬಗ್ಗೆ ಈಗಾಗಲೇ ಕೊಡವ ಹಾಕಿ ಅಕಾಡೆಮಿಗೆ ಪತ್ರವನ್ನೂ ಅಧಿಕೃತ ಬರೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಉತ್ಸವದ ಕುರಿತಂತೆ ‘ಶಕ್ತಿ’ ಯೊಂದಿಗೆ ಪ್ರತಿಕ್ರಿಯಿಸಿರುವ ಕೊಡವ ಹಾಕಿ ಅಕಾಡೆಮಿಯ ಕಾರ್ಯದರ್ಶಿ ಅಮ್ಮುಣಿಚಂಡ ರವಿ ಉತ್ತಪ್ಪ ಅವರು, ಅಪ್ಪಚೆಟ್ಟೋಳಂಡ ಕುಟುಂಬಸ್ಥರ ಅಧಿಕೃತವಾದ ಪತ್ರ ಇನ್ನೂ ಕೈಸೇರಿಲ್ಲ. ಪತ್ರ ದೊರೆತ ಬಳಿಕ ಅಕಾಡೆಮಿಯ ಪದಾಧಿಕಾರಿಗಳ ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳಲಾಗು ವದು ಎಂದು ತಿಳಿಸಿದ್ದಾರೆ.

ಮೆಲುಕಾಗಿಯೇ ಉಳಿದ ನೆನಪು...

೧೯೯೭ರಲ್ಲಿ ಕೇವಲ ೬೦ ಕುಟುಂಬಗಳ ಪಾಲ್ಗೊಳ್ಳುವಿಕೆ ಯೊಂದಿಗೆ ಕರಡದಿಂದ, ಪಾಂಡAಡ ಕಪ್ (ಪಾಂಡAಡ ಕುಟ್ಟಪ್ಪ - ಕಾಶಿ ಸಹೋದರರಿಂದ ಪ್ರಾರಂಭ) ಆರಂಭಗೊAಡಿದ್ದ ಈ ಕೊಡವ ಕೌಟುಂಬಿಕ ಹಾಕಿ ಉತ್ಸವ ನಂತರದಲ್ಲಿ ತನ್ನದೇ ಆದ ವಿಶೇಷತೆಗಳ ಮೂಲಕ ಇತಿಹಾಸ ಸೃಷ್ಟಿಸಿತ್ತು. ನಿರಂತರವಾಗಿ ೨೨ ವರ್ಷ ಗಳಿಂದ ಜಿಲ್ಲೆಯ ವಿವಿಧೆಡೆಗಳಲ್ಲಿ ವಿವಿಧ ಕುಟುಂಬಗಳ ಮೂಲಕ ಆಯೋಜನೆಗೊಂಡು ಬರುತ್ತಿದ್ದ ಈ ಹಾಕಿ ಉತ್ಸವ ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲೂ ಸ್ಥಾನ ಪಡೆದಿದ್ದು, ಗಿನ್ನಿಸ್ ದಾಖಲೆಯ ಹೊಸ್ತಿಲಿನಲ್ಲಿತ್ತು.

ಆದರೆ ೨೦೧೮ರಲ್ಲಿ ಕೊಡಗು ಕಂಡು -

ಯೊಂದಿಗೆ ಕರಡದಿಂದ, ಪಾಂಡAಡ ಕಪ್ (ಪಾಂಡAಡ ಕುಟ್ಟಪ್ಪ - ಕಾಶಿ ಸಹೋದರರಿಂದ ಪ್ರಾರಂಭ) ಆರಂಭಗೊAಡಿದ್ದ ಈ ಕೊಡವ ಕೌಟುಂಬಿಕ ಹಾಕಿ ಉತ್ಸವ ನಂತರದಲ್ಲಿ ತನ್ನದೇ ಆದ ವಿಶೇಷತೆಗಳ ಮೂಲಕ ಇತಿಹಾಸ ಸೃಷ್ಟಿಸಿತ್ತು. ನಿರಂತರವಾಗಿ ೨೨ ವರ್ಷ ಗಳಿಂದ ಜಿಲ್ಲೆಯ ವಿವಿಧೆಡೆಗಳಲ್ಲಿ ವಿವಿಧ ಕುಟುಂಬಗಳ ಮೂಲಕ ಆಯೋಜನೆಗೊಂಡು ಬರುತ್ತಿದ್ದ ಈ ಹಾಕಿ ಉತ್ಸವ ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲೂ ಸ್ಥಾನ ಪಡೆದಿದ್ದು, ಗಿನ್ನಿಸ್ ದಾಖಲೆಯ ಹೊಸ್ತಿಲಿನಲ್ಲಿತ್ತು.

ಆದರೆ ೨೦೧೮ರಲ್ಲಿ ಕೊಡಗು ಕಂಡು -

(ಮೊದಲ ಪುಟದಿಂದ) ಕೇಳರಿಯದ ಮಾದರಿಯಲ್ಲಿ ಎದುರಿಸಿದ ಜಲಪ್ರಳಯ - ಪ್ರಾಕೃತಿಕ ದುರಂತದ ಕಾರಣದಿಂದಾಗಿ ಮಾನವೀಯ ನೆಲೆಗಟ್ಟಿನಲ್ಲಿ ೨೦೧೯ರ ಹಾಕಿ ಉತ್ಸವವನ್ನು ನಡೆಸದಿರುವಂತೆ ತೀರ್ಮಾನಿಸಲಾಗಿತ್ತು. ೨೦೧೮ರಲ್ಲಿ ನಾಪೋಕ್ಲುವಿನಲ್ಲಿ ಕುಲ್ಲೇಟಿರ ಕಪ್ ಹಾಕಿ ನಡೆದಿದ್ದು, ನಂತರದ ವರ್ಷದಲ್ಲಿ ಹರಿಹರ ಮುಕ್ಕಾಟಿರ ಕುಟುಂಬ ಆತಿಥ್ಯ ಪಡೆದಿತ್ತು. ಆದರೆ ೨೦೧೯ರಲ್ಲೂ ಪ್ರಾಕೃತಿಕ ವಿಕೋಪ. ಇದರೊಂದಿಗೆ ಇಡೀ ಜಗತ್ತನ್ನು ತಲ್ಲಣಗೊಳಿಸಿದ ಕೊರೊನಾ ಮಹಾಮಾರಿಯ ಪರಿಣಾಮದಿಂದಾಗಿ ೨೦೨೦ ಹಾಗೂ ೨೦೨೧ರಲ್ಲೂ ಹಾಕಿ ಉತ್ಸವ ನಡೆಯದಂತಾಗಿತ್ತು. ಈ ಪರಿಸ್ಥಿತಿಯಿಂದ ಹರಿಹರ ಮುಕ್ಕಾಟಿರ ಕುಟುಂಬ ಆತಿಥ್ಯದಿಂದ ಹಿಂದೆ ಸರಿದಿದ್ದು, ಅಪ್ಪಚೆಟ್ಟೋಳಂಡ ಕುಟುಂಬಕ್ಕೆ ಜವಾಬ್ದಾರಿ ನೀಡಲಾಗಿತ್ತು. ವಾಸ್ತವವಾಗಿ ಈ ಕುಟುಂಬಕ್ಕೆ ೨೦೨೧ರಲ್ಲಿ ಅಧಿಕೃತ ಜವಾಬ್ದಾರಿ ಇತ್ತು.

ಆದರೆ ಕಳೆದ ವರ್ಷವೂ ಸೇರಿದಂತೆ, ಈ ಬಾರಿಯೂ ಕೊರೊನಾ ಪರಿಸ್ಥಿತಿ ತಿಳಿಯಾಗದಿರುವ ಕಾರಣದಿಂದ ಇದೀಗ ಅಪ್ಪಚೆಟ್ಟೋಳಂಡ ಕುಟುಂಬ ಮುಂದಿನ ವರ್ಷಕ್ಕೆ ಅವಕಾಶ ಕೇಳಿದೆ. ೨೦೨೩ಕ್ಕೆ ಕುಂಡ್ಯೋಳAಡ ಕುಟುಂಬದ ಬೇಡಿಕೆ ಇದ್ದು, ಇದೀಗ ಕೊಡವ ಹಾಕಿ ಅಕಾಡೆಮಿ ಯಾವ ನಿರ್ಧಾರಕ್ಕೆ ಬರಲಿದೆ ಎಂಬದನ್ನು ಕಾದು ನೋಡಬೇಕಿದೆ.

(ಶಶಿ ಸೋಮಯ್ಯ)