ನಾಪೋಕ್ಲು, ಜ. ೧೦: ತೆಲಂಗಾಣದಲ್ಲಿ ನಡೆಯಲಿರುವ ರಾಷ್ಟಿçÃಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್ ಶಿಪ್ನ ಓಟದ ಸ್ಪರ್ಧೆಗೆ ಆಯ್ಕೆಯಾದ ಪಾಲೂರು ಗ್ರಾಮದ ಕ್ರೀಡಾಪಟು ಸೂದನ ಡಾಲಿ ಅವರನ್ನು ನರಿಯಂದಡ ಗ್ರಾಮದ ಅಯ್ಯಪ್ಪ ಯುವಕ ಸಂಘದ ವತಿಯಿಂದ ೧೦ ಸಾವಿರ ರೂ. ಚೆಕ್ಕನ್ನು ನೀಡಿ ಪ್ರೋತ್ಸಾಹಿಸಲಾಯಿತು. ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಗೌರವ ಅಧ್ಯಕ್ಷ ತೋಟಂಬೈಲು ಅನಂತಕುಮಾರ್ ಮಾತನಾಡಿ, ಸೂದನ ಡಾಲಿ ರಾಜ್ಯಮಟ್ಟದ ಮಾಸ್ರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್ನ ಓಟದ ಸ್ಪರ್ಧೆಯ ಮೂರು ವಿಭಾಗಗಳಲ್ಲಿ ಸಾಧನೆ ಮಾಡಿದ್ದಾರೆ. ರಾಷ್ಟಿçÃಯ ಮಟ್ಟದಲ್ಲೂ ಅವರು ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ಬಿಳಿಯಂಡ್ರ ಹರಿಪ್ರಸಾದ್, ಖಜಾಂಚಿ ಪೊಕ್ಕೋಳಂಡ್ರ ಅಜಿತ್, ಮಾಜಿ ಕಾರ್ಯದರ್ಶಿ ಪೊಕ್ಕೋಳಂಡ್ರ ದನೋಜ್, ಸದಸ್ಯರಾದ ಪ್ರವೀಣ್, ಅಭಿಲಾಷ್, ಮಂಥನ್, ತನುಕುಮಾರ್, ಅಭಿಷೇಕ್, ಲಕ್ಕಿ ಮನೋಜ್, ರಕ್ಷಿತ್, ಪಾಲ್ಗೊಂಡಿದ್ದರು. - ದುಗ್ಗಳ