ಸೋಮವಾರಪೇಟೆ, ಜ.೧೦: ಕೆಎಸ್‌ಆರ್‌ಟಿಸಿ ಮೈಸೂರು ಡಿಪೋದಿಂದ ಕುಶಾಲನಗರ, ಸೋಮವಾರಪೇಟೆ, ಶಾಂತಳ್ಳಿ, ಬಿಸ್ಲೆ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ನೂತನ ಬಸ್ ಸೇವೆ ಪ್ರಾರಂಭವಾಗಿದೆ.

ಮೈಸೂರಿನಿಂದ ಬೆಳಿಗ್ಗೆ ೯-೧೫ಕ್ಕೆ ಬಸ್ ಹೊರಡಲಿದ್ದು, ಕುಶಾಲನಗರಕ್ಕೆ ೧೧-೧೫, ಸೋಮವಾರಪೇಟೆಗೆ ೧೨-೧೫ಕ್ಕೆ ಆಗಮಿಸಿ ಸುಬ್ರಹ್ಮಣ್ಯಕ್ಕೆ ಮಧ್ಯಾಹ್ನ ೨-೧೫ಕ್ಕೆ ತಲುಪಲಿದೆ. ಮತ್ತೆ ಅದೇ ಮಾರ್ಗವಾಗಿ ೨-೩೦ಕ್ಕೆ ಹೊರಟು ಸೋಮವಾರಪೇಟೆಗೆ ೫-೧೫ಕ್ಕೆ ಆಗಮಿಸಿ, ೬ಗಂಟೆಗೆ ಇಲ್ಲಿಂದ ಹೊರಟು ಮೈಸೂರಿಗೆ ರಾತ್ರಿ ೮-೪೫ಕ್ಕೆ ತಲುಪಲಿದೆ ಎಂದು ಸಂಚಾರಿ ನಿಯಂತ್ರಣಾಧಿಕಾರಿ ಪ್ರಭಾಕರ್ ತಿಳಿಸಿದ್ದಾರೆ.