ಶನಿವಾರಸಂತೆ, ಜ. ೧೧: ಪಟ್ಟಣದ ಸೆಕ್ರೇಡ್ ಹಾರ್ಟ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ಹಾಕುವ ಕಾರ್ಯಕ್ರಮವನ್ನು ಫಾದರ್ ಸೆಬಾಸ್ಟಿನ್ ಮೈಕಲ್ ಉದ್ಘಾಟಿಸಿದರು.

ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿಯರಾದ ಸರಸ್ವತಿ ಹಾಗೂ ಗೀತಾ ನೇತೃತ್ವದಲ್ಲಿ ಸಂಸ್ಥೆಯ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯ ೩೧೧ ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ಹಾಕಲಾಯಿತು. ಆರೋಗ್ಯ ಕೇಂದ್ರದ ಸಿಬ್ಬಂದಿ ಸಚಿನ್, ವಿಜೇತ್, ಆಶಾ ಕಾರ್ಯಕರ್ತೆ ಯರಾದ ಉಷಾ ಜಯೇಶ್, ಸಂಧ್ಯಾ, ಸವಿತಾ, ಅಂಗನವಾಡಿ ಶಿಕ್ಷಕಿಯರು, ಸಂಸ್ಥೆಯ ಶಿಕ್ಷಕರಾದ ರೋಹಿಣಿ, ನೇತ್ರಾವತಿ, ವಿದ್ಯಾ, ವನಜಾಕ್ಷಿ, ಅಶೋಕ್, ರಾಜೇಶ್ ಉಪಸ್ಥಿತರಿದ್ದರು.