(ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಜ. ೧೦: ದಕ್ಷಿಣ ಕೊಡಗಿನ ಕೇಂದ್ರ ಸ್ಥಳ ವಾಣಿಜ್ಯ ನಗರ ಗೋಣಿಕೊಪ್ಪಲು ವಿನಲ್ಲಿರುವ ಕರ್ನಾಟಕ ಸಾರಿಗೆ ಸಂಸ್ಥೆಯ (ಕೆ.ಎಸ್.ಆರ್.ಟಿ.ಸಿ.) ಸಂಚಾರಿ ಹಾಗೂ ಮಾಹಿತಿ ಕೇಂದ್ರ ಇದೀಗ ಮುಚ್ಚುವ ಭೀತಿಯಲ್ಲಿದೆ.
ಇಲಾಖೆಯಲ್ಲಿ ನೌಕರರ ಕೊರತೆ ಎದುರಿಸುತ್ತಿರುವ ಸಂಸ್ಥೆ ಇದೀಗ ಈ ಮಾಹಿತಿ ಕೇಂದ್ರಕ್ಕೆ ನೌಕರರನ್ನು ನೇಮಕ ಮಾಡುತ್ತಿಲ್ಲ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಿಂದ ಆಗಮಿಸುವ ಪ್ರಯಾಣಿ ಕರಿಗೆ ಹಾಗೂ ಸಾರ್ವಜನಿಕರಿಗೆ ಸೇವೆ ದೊರೆಯುತ್ತಿಲ್ಲ.
ಹಲವು ದಶಕಗಳಿಂದ ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಟಿ.ಸಿ. ಪಾಯಿಂಟ್ ಬೆಳಿಗ್ಗೆ ೬ ರಿಂದ ರಾತ್ರಿ ೯ ರವರಿಗೆ ಸೇವೆ ನೀಡುತ್ತಿತ್ತು. ಅಗತ್ಯ ಸಿಬ್ಬಂದಿಗಳು ಎರಡು ಪಾಳಿಯಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು.
ಈ ಹಿಂದೆ ಹಿರಿಯ ನಾಗರಿಕರಿಗೆ ಬಸ್ಪಾಸ್, ವಿದ್ಯಾರ್ಥಿಗಳಿಗೆ ಬಸ್ಪಾಸ್ ಹಾಗೂ ಇನ್ನಿತರ ಪ್ರಮುಖ ಸೇವೆಗಳು ಇದೇ ಟಿ.ಸಿ. ಪಾಯಿಂಟ್ನಲ್ಲಿ ಲಭಿಸುತ್ತಿತ್ತು.
ಮುಖ್ಯವಾಗಿ ದ.ಕೊಡಗಿನ ಪ್ರಮುಖ ಪ್ರದೇಶದಿಂದ ಆಗಮಿಸಿ, ಮೈಸೂರು, ಬೆಂಗಳೂರು ಸೇರಿದಂತೆ ಇನ್ನಿತರ ಊರುಗಳಿಗೆ ತೆರಳಲು ಸರ್ಕಾರಿ ಬಸ್ಗಳಿಗೆ ಕಾದು ಕುಳಿತು ತೆರಳುತ್ತಿದ್ದರು. ಈ ವೇಳೆ ಬಸ್ಗಳ ಮಾರ್ಗ, ಸಮಯ ಎಲ್ಲವನ್ನೂ ಟಿ.ಸಿ. ಪಾಯಿಂಟ್ನಲ್ಲಿ ಕರ್ತವ್ಯ ನಿರ್ವಹಿಸು ತ್ತಿದ್ದ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಗಳು ಪ್ರಯಾಣಿಕರಿಗೆ ನೀಡುತ್ತಿದ್ದರು.
ಇದೀಗ ಹಲವು ಸಮಯದಿಂದ ಸದಾ ಮುಚ್ಚಿರುವ ಈ ಟಿ.ಸಿ. ಪಾಯಿಂಟ್ ವಾರದ ಕೆಲವು ದಿನಗಳಲ್ಲಿ ಸಮಯವಲ್ಲದ ಸಮಯಕ್ಕೆ ನೆಪ ಮಾತ್ರಕ್ಕೆ ತೆರದು ಸಿಬ್ಬಂದಿಗಳು ವಾಪಾಸು ಆಗುತ್ತಿದ್ದಾರೆ. ಹಿರಿಯ ನಾಗರಿಕರಿಗೆ ಸಿಗುತ್ತಿದ್ದ ರಿಯಾಯಿತಿ ಬಸ್ ಪಾಸ್ ಪಡೆಯಲು ಇದೀಗ ವೀರಾಜಪೇಟೆ ಕೆ.ಎಸ್.ಆರ್.ಟಿ.ಸಿ. ನಿಲ್ದಾಣಕ್ಕೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲದೆ ಸಾವಿರಾರು ಸಂಖ್ಯೆಯ ದ.ಕೊಡಗಿನ ವಿದ್ಯಾರ್ಥಿಗಳು ಕೂಡ ಬಸ್ಪಾಸ್ಗಾಗಿ ವೀರಾಜಪೇಟೆಗೆ ತೆರಳುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
ಪ್ರತಿದಿನ ದ.ಕೊಡಗಿನ ಗಡಿ ಭಾಗವಾದ ಕುಟ್ಟ, ಶ್ರೀಮಂಗಲ, ಹುದಿಕೇರಿ, ಟಿ. ಶೆಟ್ಟಿಗೇರಿ, ಬಿ. ಶೆಟ್ಟಿಗೇರಿ, ಬಾಳೆಲೆ, ನಿಟ್ಟೂರು, ಪಾಲಿಬೆಟ್ಟ ಅಮ್ಮತ್ತಿ ಸೇರಿದಂತೆ ಹಲವಾರು ಪ್ರದೇಶದಿಂದ ಆಗಮಿಸುವ ಸಾವಿರಾರು ಪ್ರಯಾಣಿಕರಿಗೆ ಇದೀಗ ನಗರದಲ್ಲಿರುವ ಕೆ.ಎಸ್.ಆರ್.ಟಿ.ಸಿ. ಸಂಚಾರಿ ಘಟಕ ಹಾಗೂ ಮಾಹಿತಿ ಕೇಂದ್ರದಿAದ ಸೌಲಭ್ಯ ವಂಚಿತರಾಗಿದ್ದಾರೆ.
ವಿವಿಧ ಗ್ರಾಮೀಣ ಪ್ರದೇಶದಿಂದ ನಗರ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು ವಿವಿಧ ಊರುಗಳಿಗೆ ತೆರಳಲು ಸರ್ಕಾರಿ ಬಸ್ನ ಸಮಯ,ಮಾರ್ಗ ಇತ್ಯಾದಿ ಮಾಹಿತಿ ಪಡೆಯಲು ಪರದಾಡುತ್ತಿದ್ದಾರೆ. ಲಭ್ಯವಿರುವ ಟಿ.ಸಿ. ಪಾಯಿಂಟ್ನಲ್ಲಿ ಯಾವುದೇ ಸಿಬ್ಬಂದಿ ಕಾರ್ಯ ನಿರ್ವಹಿಸದೇ ಇರುವುದರಿಂದ ಸಮಸ್ಯೆ ಎದುರಾಗಿದೆ.
ಹಲವು ದಶಕಗಳಿಂದ ಸೇವೆ ನೀಡುತ್ತಾ ಬಂದಿರುವ ಗೋಣಿಕೊಪ್ಪಲುವಿನ ಟಿ.ಸಿ. ಪಾಯಿಂಟ್ಗೆ ಸಂಬAಧಿಸಿದ ಸಂಸ್ಥೆಯ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿ ದಿನ ಪೂರ್ತಿಯಾಗಿ ಜನರಿಗೆ ಸೇವೆ ನೀಡಬೇಕೆಂದು ಸಾರ್ವಜನಿಕರು ಹಾಗೂ ಪ್ರಯಾಣಿಕರು ಆಗ್ರಹಿಸಿದ್ದಾರೆ.