ಮಡಿಕೇರಿ, ಜ. ೧೦: ಶ್ರೀ ಕಾವೇರಮ್ಮೆ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾ. ೧೫ ರಂದು ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಟ್ರಸ್ಟ್ ಮೂಲಕ ಶ್ರೀ ಅಗಸ್ತೆö್ಯÃಶ್ವರ ಮಹಾಮುನಿಯಿಂದ ಕೊಡವರಿಗೆ ಹಾಗೂ ಕಾವೇರಮ್ಮೆಯಿಂದ ಅಮ್ಮಕೊಡವರಿಗೆ ಇರುವ ಶಾಪ ವಿಮೋಚನೆಗಾಗಿ ಹಾಗೂ ಲೋಕಕಲ್ಯಾಣಕ್ಕಾಗಿ ಉಭಯ ಜನಾಂಗ ಸೇರಿ ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮುಂಭಾಗದ ಟ್ರಸ್ಟ್ನ ಜಾಗದಲ್ಲಿ ವರ್ಷಂಪ್ರತಿ ಪೂಜೆ ನಡೆಸಲಾಗುತ್ತಿದೆ. ಅದರಂತೆ ಈ ಬಾರಿಯು ಪೂಜೆ ನಡೆಯಲಿದೆ. ಬೆಳಿಗ್ಗೆ ೭ ಗಂಟೆಯಿAದ ಗಣಪತಿ, ಚಂಡಿಕಾ ಹೋಮ, ಶ್ರೀ ಸತ್ಯ ನಾರಾಯಣ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಗಳು ನಡೆಯಲಿವೆ ಎಂದು ಟ್ರಸ್ಟ್ ತಿಳಿಸಿದೆ.