ಮಡಿಕೇರಿ, ಜ. ೧೦: ನಗರದಲ್ಲಿ ದಿನದಿಂದ ದಿನಕ್ಕೆ ಸಮಸ್ಯೆಯಾಗಿ ಪರಿಣಮಿಸುತ್ತಿರುವ ಬೀದಿ ನಾಯಿಗಳ ಹಾವಳಿ ತಡೆಗೆ ನಗರಸಭೆ ಕ್ರಮಕೈಗೊಂಡಿದೆ. ಈಗಾಗಲೇ ಟೆಂಡರ್ ಮೂಲಕ ಬೀದಿ ನಾಯಿಗಳ ಸಂತಾನ ಹರಣ ಶಸ್ತç ಚಿಕಿತ್ಸೆಗೆ ಪ್ರಕ್ರಿಯೆ ನಡೆದಿದೆ. ಸದ್ಯದಲ್ಲಿಯೇ ತಂಡ ನಗರಕ್ಕೆ ಆಗಮಿಸಲಿದೆ.

ತಾ. ೧೬ ರಂದು ನಾಯಿ ಸೆರೆ ಹಿಡಿಯುವ ತಂಡ ನಗರಕ್ಕೆ ಆಗಮಿಸಿ ೨-೩ ದಿನಗಳ ನಂತರ ಪ್ರಕ್ರಿಯೆ ಕೈಗೊಳ್ಳಲಿದೆ. ಈಗಾಗಲೇ ೫೦೦ ರಿಂದ ೬೦೦ ಬೀದಿ ನಾಯಿಗಳನ್ನು ಗುರುತು ಮಾಡಲಾಗಿದೆ. ನಿಯಮಾನುಸಾರವಾಗಿ ಶ್ವಾನಗಳನ್ನು ಹಿಡಿದು ವೈದ್ಯರು ಸಂತಾನ ಹರಣ ಶಸ್ತç ಚಿಕಿತ್ಸೆ ನಡೆಸಿ ಆ ಬಳಿಕ ೨ ದಿನ ಆರೈಕೆ ಮಾಡಿ ಎಲ್ಲಿಂದ ನಾಯಿಗಳನ್ನು ತರಲಾಗಿತ್ತು ಅಲ್ಲಿಗೆ ವಾಪಸ್ ಬಿಡಲಾಗುತ್ತದೆ.

ಇದಕ್ಕೂ ಮುನ್ನ ನಾಯಿಗಳ ಆರೋಗ್ಯ ಪರೀಕ್ಷೆ ಮಾಡಲಾಗುತ್ತದೆ. ರೇಬಿಸ್‌ನಂತಹ ಕಾಯಿಲೆಗಳಿದ್ದಲ್ಲಿ ಅಂತಹ ನಾಯಿಗಳನ್ನು ಕೊಲ್ಲಲಾಗುವುದು. ೧೮ ತಿಂಗಳು ಮೇಲ್ಪಟ್ಟ ನಾಯಿಗಳಿಗೆ ಮಾತ್ರ ಶಸ್ತç ಚಿಕಿತ್ಸೆ ಮಾಡಲಾಗುವುದು. ಗರ್ಭಧರಿಸಿದ ನಾಯಿಗಳನ್ನು ಹಾಗೆಯೇ ಬಿಡಲಾಗುವುದು ಎಂದು ನಗರಸಭೆ ಅಧಿಕಾರಿ ‘ಶಕ್ತಿ’ಗೆ ತಿಳಿಸಿದ್ದಾರೆ.