ಮಡಿಕೇರಿ, ಜ. ೧೧: ಯುವ ಬಂಟ್ಸ್ ಅಸೋಸಿಯೇಷನ್ ವತಿಯಿಂದ ಜನವರಿ ಕೊನೆಯ ವಾರದಲ್ಲಿ ನಡೆಸಲು ಉದ್ದೇಶಿಸಲಾಗಿರುವ ಬಂಟ್ಸ್ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಆಟಗಾರರ ಆಯ್ಕೆ ಪ್ರಕ್ರಿಯೆ ಸೋಮವಾರ ನಡೆಯಿತು. ಮಡಿಕೇರಿಯ ಖಾಸಗಿ ಹೊಟೇಲ್ ಸಭಾಂಗ ಣದಲ್ಲಿ ನಡೆದ ಬಿಡ್ಡಿಂಗ್ ಪ್ರಕ್ರಿಯೆಯನ್ನು ಹಿರಿಯರಾದ ದಯಾನಂದ ರೈ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ವಸಂತ ರೈ, ಈವರೆಗೆ ಯುವ ಘಟಕ ಅಧಿಕೃತವಾಗಿ ನೋಂದಣಿಯಾಗಿರಲಿಲ್ಲ. ಈ ಬಾರಿ ಯುವ ಬಂಟ್ಸ್ ಅಸೋಸಿಯೇಷನ್ ಎಂದು ನೋಂದಣಿ ಮಾಡಿಕೊಂಡಿದ್ದು, ಮೊದಲ ಬಾರಿಗೆ ಪಂದ್ಯಾವಳಿ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಜನವರಿ ಕೊನೆಯ ವಾರದಲ್ಲಿ ಮಡಿಕೇರಿಯಲ್ಲಿ ಪಂದ್ಯಾವಳಿ ನಡೆಸಲು ಉದ್ದೇಶಿಸಲಾಗಿದೆ. ಸರ್ಕಾರದ ನಿಯಮಾವಳಿ ನೋಡಿಕೊಂಡು ದಿನಾಂಕ ನಿಗದಿಪಡಿಸಲಾಗುವುದು. ಸಂಘಟನೆ ನೋಂದಣಿಯಾದ ಬಳಿಕ ಮೊದಲ ಬಾರಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ೮ ತಂಡಗಳು ಭಾಗವಹಿಸುತ್ತಿದ್ದು, ೧೧೨ ಆಟಗಾರರು ಬಿಡ್ಡಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆAದು ಮಾಹಿತಿ ನೀಡಿದರು.

ಇದೇ ಸಂದರ್ಭ ೮ ತಂಡದ ಸಮವಸ್ತçವನ್ನು ಅನಾವರಣ ಮಾಡಲಾಯಿತು. ತಂಡಗಳ ಪ್ರತಿನಿಧಿಗಳಾದ ಸುಜಿತ್ ಶೆಟ್ಟಿ, ಅವಿನಾಶ್ ರೈ, ಕಿಶೋನಾಥ್ ರೈ, ಸಚಿನ್ ರೈ, ಮನೋಜ್ ಶೆಟ್ಟಿ, ಭರತ್ ಶೆಟ್ಟಿ, ಪವನ್ ರೈ ವೇದಿಕೆಯಲ್ಲಿದ್ದರು. ಸತೀಶ್ ರೈ ಮತ್ತು ಚಂದ್ರಶೇಖರ್ ರೈ ಪ್ರಾರ್ಥಿಸಿದರು. ಕಿಶೋರ್ ರೈ ಕತ್ತಲೆಕಾಡು ಕಾರ್ಯಕ್ರಮ ನಿರೂಪಿಸಿದರು.