(ವಿಶೇಷ ವರದಿ: ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಜ.೧೧: ದ.ಕೊಡಗಿನ ವಿವಿಧ ಪ್ರದೇಶದಲ್ಲಿ ನಿರಂತರ ಹುಲಿ ದಾಳಿ ಹಿನ್ನೆಲೆಯಲ್ಲಿ ಹೆಣ್ಣು ಹುಲಿಯ ಸೆರೆಗೆ ಅಂತಿಮವಾಗಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಆದೇಶ ಹೊರಬಿದ್ದಿದ್ದು ವೀರಾಜಪೇಟೆ ತಾಲೂಕಿನ ಡಿಸಿಎಫ್ ಚಕ್ರಪಾಣಿಯವರಿಗೆ ಆದೇಶ ಪ್ರತಿ ಮಂಗಳವಾರ ಕೈ ಸೇರಿದೆ. ಸಿಸಿಟಿವಿ ಚಿತ್ರದಲ್ಲಿ ಇದು ಹೆಣ್ಣು ಹುಲಿಯೆಂದು ಖಾತರಿಯಾಗಿದೆ.
ಹಿರಿಯ ಅಧಿಕಾರಿಗಳ ಆದೇಶ ಕೈ ಸೇರುತ್ತಿದ್ದಂತೆಯೇ ವೀರಾಜಪೇಟೆಯ ಡಿಸಿಎಫ್ ಕಚೇರಿಯಲ್ಲಿ ಸಭೆ ಆಯೋಜಿಸಿದ ಚಕ್ರಪಾಣಿ ಇತರ ಅಧಿಕಾರಿಗಳೊಂದಿಗೆ ಹುಲಿಯ ಸೆರೆಗೆ ಅಗತ್ಯ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಹುಲಿ ಸೆರೆಗೆ ಬೇಕಾಗುವ ನುರಿತ ಅರವಳಿಕೆ ತಜ್ಞರು,ವೈದ್ಯರು, ಸಾಕಾನೆಗಳು ಹಾಗೂ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ಘಟನೆ ನಡೆದ ಸ್ಥಳವಾದ ಬೆಳ್ಳೂರು ಗ್ರಾಮದಲ್ಲಿ ಹುಲಿಯ ಸೆರೆಗೆ ಜಾಗ ನಿಗದಿಪಡಿಸಲಾಗಿದ್ದು ಸದ್ಯದ ಪರಿಸ್ಥಿತಿಯಲ್ಲಿ ೫೦ ನುರಿತ ಸಿಬ್ಬಂದಿಗಳನ್ನು ಕಾರ್ಯಾಚರಣೆಗೆ ನಿಯೋಜನೆ ಮಾಡಲಾಗಿದೆ ಎಂದು ಅಧಿಕಾರಿ ಚಕ್ರಪಾಣಿ ಮಾಹಿತಿ ಒದಗಿಸಿದರು.
ಸ್ಥಳೀಯ ಶಾಲೆಯ ಆವರಣದಲ್ಲಿ ಹುಲಿ ಸೆರೆಗೆ ಕ್ಯಾಂಪ್ ಆರಂಭಿಸಲಾಗಿದ್ದು ಈಗಾಗಲೇ ಸಾಕಾನೆಗಳು, ಮಾವುತರು ಸ್ಥಳಕ್ಕೆ ತಲುಪಿದ್ದಾರೆ. ಸ್ಥಳೀಯರ ಸಹಕಾರ ಅವಶ್ಯವೆಂದು ತಿಳಿಸಿ ಆದಷ್ಟು ಬೇಗನೆ ಹುಲಿ ಸೆರೆಯಾಗುವ ಆಶಾಭಾವನೆಯನ್ನು ವ್ಯಕ್ತಪಡಿಸಿದರು. ಹುಲಿಯ ಉಪಟಳ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಘಟನೆ ನಡೆದ ಸ್ಥಳದಲ್ಲಿ ಹುಲಿಯ ಚಲನವಲನಗಳನ್ನು ಗಮನಿಸಲು ಆಯ ಕಟ್ಟಿನ ಜಾಗದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಿದ್ದರು.
ಕ್ಯಾಮರಾ ಸೆರೆಯಲ್ಲಿ ಹುಲಿಯ ಚಲನವಲನಗಳನ್ನು ಗಮನಿಸಿದ ನಂತರ ಅಧಿಕಾರಿಗಳು ಈ ಬಗ್ಗೆ ಹುಲಿ ಸೆರೆಗೆ ಅವಕಾಶ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಹುಲಿ ಸೆರೆಗೆ ಅಗತ್ಯ ಕ್ರಮಕೈಗೊಳ್ಳುವುದಾಗಿ ತಿತಿಮತಿ ಎಸಿಎಫ್ ಉತ್ತಪ್ಪ ಮಾಹಿತಿಯಿತ್ತರು.
(ಮೊದಲ ಪುಟದಿಂದ) ಹುಲಿ ಸೆರೆಗೆ ರೈತ ಸಂಘದ ಪದಾಧಿಕಾರಿಗಳು ಗಡುವು ನೀಡಿದ್ದರು. ಶಾಸಕ ಬೋಪಯ್ಯ ಅವರು ಸ್ಥಳಕ್ಕೆ ಭೇಟಿಯಿತ್ತು ಸೂಚನೆಯಿತ್ತಿದ್ದರು.
ಹಿರಿಯ ಅಧಿಕಾರಿಯಿಂದ ಅನುಮತಿ
ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ನೀಡಿರುವ ಅನುಮತಿ ಪತ್ರದ ವಿವರ ಈ ಕೆಳಗಿನಂತಿದೆ.
ಪೊನ್ನAಪೇಟೆ ವಲಯ ವ್ಯಾಪ್ತಿಗೆ ಒಳಪಡುವ ಬೆಳ್ಳೂರು, ಹರಿಹರ, ಕೋಣಂಗೇರಿ, ಹುದಿಕೇರಿ, ಬಲ್ಯಮಂಡೂರು, ಚಿಕ್ಕಮಂಡೂರು, ತೂಚಮಕೇರಿ, ನಡಿಕೇರಿ ಗ್ರಾಮಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಾಕು ಪ್ರಾಣಿಗಳನ್ನು ಹುಲಿಯು ಕೊಂದು ತಿಂದಿರುವ ಬಗ್ಗೆ ಜನವರಿ ಮಾಹೆಯಲ್ಲಿ ಪೊನ್ನಂಪೇಟೆ ವಲಯದಲ್ಲಿ ೫ ಪ್ರಕರಣಗಳು ದಾಖಲಾಗಿದ್ದು, ಇದರಿಂದಾಗಿ ನೊಂದ ಜಾನುವಾರು ಮಾಲೀಕರು, ರೈತ ಮುಖಂಡರು, ಸಾರ್ವಜನಿಕರು ದಾಳಿ ಮಾಡುತ್ತಿರುವ ಹುಲಿಯನ್ನು ಸೆರೆ ಹಿಡಿದು ಸ್ಥಳಾಂತರಿಸುವAತೆ ಆಗ್ರಹಿಸಿ ಇಲಾಖಾ ಸಿಬ್ಬಂದಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿರುತ್ತಾರೆಂದು ವೀರಾಜಪೇಟೆ ಅರಣ್ಯ ಸಂರಕ್ಷಣಾಧಿಕಾರಿಯವರು ವರದಿಸಿರುತ್ತಾರೆ.
ಮುಂದುವರೆದು, ವಲಯ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಜಾನುವಾರು ಮೃತಪಟ್ಟಿರುವ ಪ್ರತಿ ಸ್ಥಳದ ಸುತ್ತಮುತ್ತಲಿನ ಹಾಗೂ ಪಾಳುಬಿಟ್ಟ ಗದ್ದೆ, ತೋಟ ಹಾಗೂ ದೇವರಕಾಡುಗಳಲ್ಲಿ ಕೂಂಬಿAಗ್ ಕಾರ್ಯಾಚರಣೆಯನ್ನು ನಡೆಸಿದ್ದು, ಹುಲಿಯ ಚಲನವಲನಗಳನ್ನು ಪತ್ತೆ ಹಚ್ಚುವ ಸಲುವಾಗಿ ೩೦ ಕ್ಯಾಮರಾ ಟ್ರಾö್ಯಪ್ಗಳನ್ನು ಅಳವಡಿಸಲಾಗಿದ್ದು, ತಾ. ೯ ರಂದು ತೂಚಮಕೇರಿ ಗ್ರಾಮದ ಪಿ.ಎಂ. ತಮ್ಮಯ್ಯ ಇವರ ತೋಟದಲ್ಲಿ ಅಳವಡಿಸಿದ್ದ ಕ್ಯಾಮರಾದಲ್ಲಿ ಸೆರೆಸಿಕ್ಕ ಹೆಣ್ಣು ಹುಲಿಯ ಛಾಯಾಚಿತ್ರ ಅಂದಾಜು ೪ ರಿಂದ ೫ ವರ್ಷ ಪ್ರಾಯದ್ದಾಗಿರುತ್ತದೆ. ಸದರಿ ಹುಲಿಯ ಛಾಯಾಚಿತ್ರದ ಬಗ್ಗೆ ತಾಂತ್ರಿಕ ವರದಿಯನ್ನು ಪಡೆಯುವ ಸಲುವಾಗಿ ಟೈಗರ್ ಸೆಲ್, ಬೆಂಗಳೂರು ಇವರು ಕಳುಹಿಸಿದ್ದು, ಸದರಿ ಹುಲಿಯನ್ನು ಓಚಿgಚಿಡಿಚಿhoಟe -೨೦-U೪೪ ಎಂದು ಗುರುತಿಸಿದ್ದು, ಹುಲಿಯ ಕಣ್ಣಿನಲ್ಲಿ ದೋಷ ಕಾಣುತ್ತಿರುವುದಾಗಿ ಹಾಗೂ ಸದರಿ ಹುಲಿಯು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಿಂದ ಹೊರಬಂದು ಖಾಸಗಿ ಜಾಗದಲ್ಲಿ ಸಾರ್ವಜನಿಕರು ಹಾಗೂ ಸಾಕು ಪ್ರಾಣಿಗಳ ಮೇಲೆ ಹೆಚ್ಚಾಗಿ ಉಪಟಳ ನೀಡುತ್ತಿರುವ ಪ್ರಕರಣಗಳು ದೃಢಪಟ್ಟಿರುವುದಾಗಿ ತಾಂತ್ರಿಕ ವರದಿಯಲ್ಲಿ ತಿಳಿಸಿರುತ್ತಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ, ವೀರಾಜಪೇಟೆ ವಿಭಾಗ ಅವರು ಕಚೇರಿಯ ಉಲ್ಲೇಖ (೧)ರ ಪತ್ರದಲ್ಲಿ ತಿಳಿಸಿರುವಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಉಪಟಳ ನೀಡುತ್ತಿರುವ ಹುಲಿಯನ್ನು ನಿರ್ದಿಷ್ಟವಾಗಿ ಗುರುತಿಸಲು ತಾಂತ್ರಿಕ ಸಮಿತಿಯನ್ನು ರಚಿಸಿ ವರದಿಯನ್ನು ಸಲ್ಲಿಸಿರುವುದರಿಂದ ಸದರಿಯವರ ಕೋರಿಕೆಯನ್ನು ಪರಿಗಣಿಸಿ, ಉಪಟಳ ನೀಡುತ್ತಿರುವ ಓಚಿgಚಿಡಿಚಿhoಟe -೨೦-U೪೪ ಹುಲಿಯನ್ನು ನಿರ್ದಿಷ್ಟವಾಗಿ ಗುರುತಿಸಿ, ವನ್ಯಜೀವಿ ಸಂರಕ್ಷಣಾ ಕಾಯ್ದೆ, ೧೯೭೨ರ ಸೆಕ್ಷನ್ ೧೧(೧)(ಚಿ) ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸದರಿ ಹುಲಿಯನ್ನು ಸೆರೆಹಿಡಿಯಲು ಈ ಕೆಳಕಂಡ ಆದೇಶವನ್ನು ನೀಡಲಾಗಿದೆ.
ಆದೇಶ
ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ ವೀರಾಜಪೇಟೆ ವಿಭಾಗದ ಪೊನ್ನಂಪೇಟೆ ವಲಯ ವ್ಯಾಪ್ತಿಗೆ ಒಳಪಡುವ ಬೆಳ್ಳೂರು, ಹರಿಹರ, ಕೋಣಂಗೇರಿ, ಹುದಿಕೇರಿ, ಬಲ್ಯಮಂಡೂರು, ಚಿಕ್ಕಮಂಡೂರು, ತೂಚಮಕೇರಿ, ನಡಿಕೇರಿ ಗ್ರಾಮಗಳ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಓಚಿgಚಿಡಿಚಿhoಟe -೨೦-U೪೪ ಹುಲಿಯನ್ನು ನಿರ್ದಿಷ್ಟವಾಗಿ ಗುರುತಿಸಿ, ಸೆರೆಹಿಡಿಯಲು ವನ್ಯಜೀವಿ (ಸಂರಕ್ಷಣಾ ಕಾಯ್ದೆ ೧೯೭೨ರ ಸೆಕ್ಷನ್ ೧೧ (೧) (ಚಿ) ರನ್ವಯ ಅನುಮತಿ ನೀಡಲಾಗಿದೆ.
ಮುಂದುವರೆದು ಸೆರೆ ಹಿಡಿದ ಹುಲಿಯ ವೈದ್ಯಕೀಯ ತಪಾಸಣೆ ನಡೆಸಿ, ವೀರಾಜಪೇಟೆ ಡಿಸಿಎಫ್ ಅವರ ಅಭಿಪ್ರಾಯ ಒಳಗೊಂಡ ವರದಿಯನ್ನು ಮುಂದಿನ ಕ್ರಮಕ್ಕಾಗಿ ಈ ಕಚೇರಿಗೆ ಸಲ್ಲಿಸಲು ಸೂಚಿಸಿದೆ. ಸದರಿ ಕಾರ್ಯಾಚರಣೆಯಲ್ಲಿ ರಾಷ್ಟಿçÃಯ ಹುಲಿ ಸಂರಕ್ಷಣಾ ಪ್ರಾಧಿಕಾರ, ನವದೆಹಲಿ ಅವರ ಮಾರ್ಗಸೂಚಿಗಳನ್ವಯ (SಔP) ಕಟ್ಟುನಿಟ್ಟಿನ ಅಗತ್ಯ ಕ್ರಮವನ್ನು ತೆಗೆದುಕೊಂಡು ಹುಲಿಯನ್ನು ಸೆರೆಹಿಡಿಯಲು ಆದೇಶಿಸಲಾಗಿದೆ. ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಕ್ಷೇತ್ರ ಸಿಬ್ಬಂದಿ ಮತ್ತು ಸ್ಥಳೀಯ ಜನರಿಗೆ ಯಾವುದೇ ಅಪಾಯವಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.