ಸೋಮವಾರಪೇಟೆ, ಜ.೧೦: ಇಲ್ಲಿನ ಕುರುಹಿನಶೆಟ್ಟಿ ಸಮಾಜದ ಶ್ರೀ ರಾಮಮಂದಿರದಲ್ಲಿ ತಾ.೧೩ರಂದು ೫ನೇ ವರ್ಷದ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಗಳು ನಡೆಯಲಿವೆೆ ಎಂದು ದೇವಸ್ಥಾನದ ಅರ್ಚಕ ಮೋಹನ್ ಶಾಸ್ತಿç ತಿಳಿಸಿದ್ದಾರೆ.

ಅಂದು ದೇವಾಲಯದಲ್ಲಿ ವಿಶೇಷ ಅಲಂಕಾರ, ಬೆಳಿಗ್ಗೆ ೭ರಿಂದ ಪೂಜೆಗಳು, ಸಂಜೆ ೭ರಿಂದ ಸೀತಾ ಬಳಗದಿಂದ ವಿಷ್ಣು ಸಹಸ್ರನಾಮ ಪಠಣ, ನಂತರ ಇಸ್ಕಾನ್ ಅವರಿಂದ ಗೀತೋಪದೇಶ, ನಂತರ ಮಹಾ ಮಂಗಳಾರತಿ ನಡೆಯಲಿದೆ.