(ವಿಶೇಷ ವರದಿ :ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಜ. ೯: ನೂತನ ವರ್ಷ ಪುನರಾರಂಭ ದಿನದಿಂದ ಆರಂಭಗೊAಡ ಹುಲಿ ದಾಳಿ ವಾರ ಕಳೆದರೂ ಕಡಿಮೆ ಆಗಿಲ್ಲ.

ದಕ್ಷಿಣ ಕೊಡಗಿನ ಹುದಿಕೇರಿ ಹೋಬಳಿಯ ಬೆಳ್ಳೂರು, ತೂಚಮಕೇರಿ ಹಾಗೂ ಕೋಣಗೇರಿಯ ಪ್ರದೇಶದಲ್ಲಿ ಹುಲಿಯ ದಾಳಿಯಿಂದ ರೈತರ ಜಾನುವಾರುಗಳು ಮೃತಪಟ್ಟಿವೆ. ರೈತರು, ಗ್ರಾಮಸ್ಥರು ಭಯದ ನೆರಳಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಹುಲಿ ದಾಳಿ ಹಿನ್ನೆಲೆಯಲ್ಲಿ ಇಲ್ಲಿನ ಅರಣ್ಯ ಇಲಾಖೆಯ ಅಧಿಕಾರಿಗಳು ಹುಲಿ ಸೆರೆಗೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಆದೇಶ ಪತ್ರಕ್ಕಾಗಿ ಎದುರು ನೋಡುತ್ತಿದ್ದಾರೆ.

ಇತ್ತ ಹಿರಿಯ ಅಧಿಕಾರಿಗಳ ಆದೇಶ ಪತ್ರವಿಲ್ಲದೇ, ಹುಲಿ ಸೆರೆ ಹಿಡಿಯಲು ಮುಂದಾಗುತ್ತಿಲ್ಲ. ಈ ಸಂಬAಧ ತಾ. ೧೦ರಂದು (ಇಂದು) ಹುಲಿ ಸೆರೆಗೆ ಆದೇಶ ಸಿಗುವ ಸಾಧ್ಯತೆಯಿದೆ.

ಸ್ಥಳೀಯ ಅಧಿಕಾರಿಗಳು ದಿನಂಪ್ರತಿ ಹುಲಿ ದಾಳಿಯಿಂದ ಜಾನುವಾರುಗಳು ಮೃತಪಟ್ಟ ರೈತರ ಮನೆಗೆ ತೆರಳಿ

(ಮೊದಲ ಪುಟದಿಂದ) ಕೇವಲ ಸಾಂತ್ವನ ಹೇಳುವ ಕೆಲಸವನ್ನಷ್ಟೆ ಮಾಡುತ್ತಿದ್ದಾರೆ.

ಹುಲಿ ದಾಳಿಯಿಂದ ರೈತರ ಹಸುಗಳು ಸಾವನ್ನಪ್ಪುತ್ರಿರುವುದನ್ನು ಗಮನಿಸಿದ ರೈತ ಸಂಘ ಪದಾಧಿಕಾರಿಗಳು, ರಾಜಕೀಯ ಪಕ್ಷಗಳು ಮುಖಂಡರು ಅರಣ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರೂ ಪ್ರಯೋಜನವಾಗುತ್ತಿಲ್ಲ.

ಅರಣ್ಯ ಪ್ರದೇಶದಿಂದ ಬಂದಿರುವ ಹುಲಿಯು ಗ್ರಾಮದಲ್ಲಿ ಸುಲಭವಾಗಿ ಸಿಗುವ ಹಸುಗಳ ಮೇಲೆ ದಾಳಿ ನಡೆಸುತ್ತಿವೆ, ಹುಲಿಯನ್ನು ಸಮೀಪದಿಂದ ರಾತ್ರಿಯ ವೇಳೆ ಕಂಡಿದ್ದೇವೆ ಎಂದು ಗ್ರಾಮಸ್ಥರು ಮಾಹಿತಿ ಹಂಚಿಕೊAಡಿದ್ದಾರೆ.

ಹುಲಿಯನ್ನು ಕಂಡ ಗ್ರಾಮಸ್ಥರು ಪಟಾಕಿ ಸಿಡಿಸಿ ಹುಲಿಯನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ. ಕಳೆದ ರಾತ್ರಿ ನಾಗರಿಕರ, ಗ್ರಾಮಸ್ಥರ ಒತ್ತಾಯದ ಮೇರೆ ಕೆಲವು ಅರಣ್ಯ ಸಿಬ್ಬಂದಿಗಳು ಘಟನೆ ನಡೆದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾದು ಕುಳಿತು ಹುಲಿಯನ್ನು ಓಡಿಸುವ ಪ್ರಯತ್ನ ಮಾಡಿದರು.

ಹುಲಿಯು ರಾತ್ರಿಯ ವೇಳೆ ಆಗಮಿಸಿ ಹಸುವಿನ ಕೆಲ ಭಾಗವನ್ನು ತಿಂದು ಮತ್ತೆ ಕಾಫಿ ತೋಟದಲ್ಲಿ ಮರೆಯಾಗಿದೆ. ಹುಲಿಯ ಹೊಟ್ಟೆ ತುಂಬಿದ ಕಾರಣ ಭಾನುವಾರ ಯಾವುದೇ ಜಾನುವಾರುಗಳ ಮೇಲೆ ದಾಳಿಗೆ ಮುಂದಾಗಿಲ್ಲ.

ಘಟನೆ ನಡೆದ ಇದೇ ಸ್ಥಳದಲ್ಲಿ ಹುಲಿ ಸೆರೆಗೆ ಬೋನ್ ಅನ್ನು ಅಳವಡಿಸಿರುವ ಅರಣ್ಯ ಸಿಬ್ಬಂದಿಗಳು ಹುಲಿಯು ಬೋನಿಗೆ ಬೀಳಬಹುದೇ.? ಎಂದು ಕಾದು ಕುಳಿತ್ತಿದ್ದಾರೆ.

ಕೂಂಬಿAಗ್‌ಗೆ ಹಿನ್ನಡೆ

ಈ ಭಾಗದ ರೈತರ ಕಾಫಿ ತೋಟದಲ್ಲಿ ಹಾಗೂ ಕುರುಚಲು ಕಾಡುಗಳಲ್ಲಿ ಹುಲಿಯ ಸಂಚಾರವಿದೆ. ಕಾಫಿ ಕೊಯ್ಲಿನ ಸಮಯ ಆಗಿರುವುದರಿಂದ ಕಾಫಿ ತೋಟದಲ್ಲಿ ಹಲವಾರು ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾರೆ. ಹೀಗಾಗಿ ತೋಟದ ಮಾಲೀಕರ ಹಾಗೂ ಕಾರ್ಮಿಕರ ಸಹಕಾರ ಅಷ್ಟಾಗಿ ನಿರೀಕ್ಷೆ ಮಾಡಲು ಅರಣ್ಯ ಸಿಬ್ಬಂದಿಗಳಿಗೆ ಸಾಧ್ಯವಾಗುತ್ತಿಲ್ಲ. ಹುಲಿ ಕಾರ್ಯಾಚರಣೆಗೆ ನಾಲ್ಕರಿಂದ ಐದು ಸಾಕಾನೆಗಳು ನೂರಾರು ಸಿಬ್ಬಂದಿಗಳು ಕಾಫಿ ತೋಟದಲ್ಲಿ ಸಂಚರಿಸಿ ಹುಲಿಯನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ.

ಈ ವೇಳೆ ಕಾಫಿ ಗಿಡದಲ್ಲಿ ಬಿಟ್ಟಿರುವ ಕಾಫಿ ಹಣ್ಣುಗಳು ಸಾಕಷ್ಟು ಉದುರಿ ಬೀಳುವ ಸಾಧ್ಯತೆ ಹೆಚ್ಚಿರುವುದರಿಂದ ಹಾಗೂ ಕಾಫಿ ಗಿಡಗಳಿಗೆ ಹಾನಿಯಾಗುವ ಸಂಭವ ಇರುವುದರಿಂದ ಸಹಜವಾಗಿಯೇ ತೋಟದ ಮಾಲೀಕರ ಸಹಕಾರ ದೊರೆಯುತ್ತಿಲ್ಲ.

ಹುಲಿ ಚಿತ್ರ ಸೆರೆ

ಕಳೆದ ಎರಡು ದಿನಗಳ ಹಿಂದೆ ತೂಚಮಕೇರಿಯಲ್ಲಿ ಹುಲಿಯು ದಾಳಿ ನಡೆಸಿದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಹಸುವಿನ ಕಳೇಬರÀ ಬಳಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹುಲಿಯ ಚಲನವಲನಗಳ ಬಗ್ಗೆ ಮಾಹಿತಿ ಕಲೆ ಹಾಕಲು ಕ್ಯಾಮರಾ ಅಳವಡಿಸಿದ್ದರು.

ಅಳವಡಿಸಿದ ಕ್ಯಾಮರಾಕ್ಕೆ ಹುಲಿಯ ಚಿತ್ರ ಸೆರೆಯಾಗಿದ್ದು ಗಂಡು ಹುಲಿಯೆಂದು ಗುರುತಿಸಲಾಗಿದೆ.

ವಯಸ್ಸಾದ ಹುಲಿಯು ತುಂಬಾ ಬಳಲಿರುವುದಾಗಿ ಸೆರೆ ಸಿಕ್ಕ ಕ್ಯಾಮರಾ ಚಿತ್ರದ ದೃಶ್ಯದಲ್ಲಿ ಗೋಚರಿಸುತ್ತಿದೆ ಎಂದು ಮಾಹಿತಿ ದೊರೆತಿದೆ.

ಕ್ಯಾಮರಾದಲ್ಲಿ ಸೆರೆ ಸಿಕ್ಕಿರುವ ಹುಲಿಯ ಮಾಹಿತಿಗಳನ್ನು ಪಡೆಯಲು ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಲಾಗಿದೆ.