ವೀರಾಜಪೇಟೆ, ಜ. ೯: ತಿತಿಮತಿ ಖುವ್ವತುಲ್ ಇಸ್ಲಾಂ ಮದ್ರಸದಲ್ಲಿ ನಡೆದ ವೀರಾಜಪೇಟೆ ರೇಂಜ್ ೧೬ನೇ ಇಸ್ಲಾಮಿಕ್ ರೇಂಜ್ ಮಟ್ಟದ ಕಲಾ ಸಾಹಿತ್ಯ ಸ್ಪರ್ಧೆಯಲ್ಲಿ ಆರ್ಜಿ ಗ್ರಾಮದ ಕಲ್ಲುಬಾಣೆಯ ದಾರುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನಗಳಿಸಿ ಪಾರಿತೋಷಕ ಪಡೆದು ಕೊಂಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ೧೪ ವಿದ್ಯಾರ್ಥಿಗಳು ಜಿಲ್ಲಾಮಟ್ಟದಲ್ಲಿ ನಡೆಯಲಿರುವ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ಕಲ್ಲುಬಾಣೆ ದಾರುಲ್ ಇಸ್ಲಾಂ ಮದ್ರಸದ ಹನೀಫ್ ಫೈಜಿ ತಿಳಿಸಿದ್ದಾರೆ.