ಸುಂಟಿಕೊಪ್ಪ, ಜ. ೯: ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದಲ್ಲಿ ಸಂತೆ ದಿನವಾದ ಇಂದು ಅಧಿಕ ವ್ಯಾಪಾರಸ್ಥರು ಆಗಮಿಸಿದ್ದರು. ಕೂಡಲೇ ಗ್ರಾಮ ಪಂಚಾಯಿತಿ ಎಚ್ಚೆತ್ತು ಅಂಗಡಿಗಳನ್ನು ಹಾಕದಂತೆ ತಡೆ ಮಾಡಿದರು. ಕೆಲ ವ್ಯಾಪಾರಸ್ಥರು ಇನ್ನಿತರ ವಸ್ತುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದು, ಕೂಡಲೇ ಪೊಲೀಸರು ಬಂದು ವ್ಯಾಪಾರ ನಡೆಸದಂತೆ ಎಚ್ಚರಿಸಿದರು.

ಕೆಲ ಜಿಲ್ಲೆಗಳಿಂದ ಬಂದ ವ್ಯಾಪಾರಸ್ಥರು ಬಂದ ದಾರಿಗೆ ಸುಂಕ ಇಲ್ಲದಂತೆ ತಂದ ಸರಕುಗಳನ್ನು ವಾಪಸು ತೆಗೆದುಕೊಂಡು ಹೋದರು. ಆದರೆ ಅಂರ‍್ರಾಜ್ಯ ಕಾರ್ಮಿಕರು ಅಧಿಕವಾಗಿ ನಗರದಲ್ಲಿ ಸುತ್ತಾಡುತ್ತಿದ್ದರು.