ಚೆಟ್ಟಳ್ಳಿ, ಜ. ೯: ಕಲಿಕೆಯೊಂದಿಗೆ ತಮ್ಮ ಸ್ನೇಹಿತರ ಜೊತೆಗೂಡಿ ಕಾಲೇಜು ಜೀವನವನ್ನು ಸಂತೋಷ ದಿಂದ ಕಳೆಯಬೇಕಿದ್ದ ವಿದ್ಯಾರ್ಥಿಗಳು ತಮ್ಮ ಪಾಠ ಪ್ರವಚನವನ್ನೆಲ್ಲ ಬಿಟ್ಟು ಒಂದು ದಿನ ತಿತಿಮತಿಯ ಮಜ್ಜಿಗೆ ಹಳ್ಳಹಾಡಿಯಲ್ಲಿ ಬದುಕು ಕಟ್ಟಿಕೊಂಡಿರುವ ಗಿರಿಜನರÀ ಜೊತೆ ಗೂಡಿ ಅಕ್ಷರ ಕಲಿಕೆ, ಬದುಕಿನಪಾಠ, ಆರೋಗ್ಯ, ಹಲವು ಸಮಸ್ಯೆಗಳ ಆಲಿಸುವುದರ ನಡುವೆ ಏಕ ದಿನದ ವಿಶೇಷ ಶಿಬಿರಾಚರಣೆ ನಡೆಸಿದ್ದು ವಿಶೇಷವಾಗಿತ್ತು.

ಮಂಗಳೂರು ವಿಶ್ವವಿದ್ಯಾನಿಲ ಯಕ್ಕೆ ಒಳಪಟ್ಟ ಗೋಣಿಕೊಪ್ಪದ ಕಾವೇರಿ ಕಾಲೇಜಿನ ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿಗಳು ಹಲವು ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹೊಸವರ್ಷದ ಮೊದಲ ಹೆಜ್ಜೆಯಲ್ಲಿ ಏನಾದರೂ ವಿನೂತನ ಕಾರ್ಯವನ್ನು ಮಾಡಬೇಕೆಂಬ ಉದ್ದೇಶದಿಂದ ತಿತಿಮತಿಯ ಮಜ್ಜಿಗೆ ಹಳ್ಳದ ಹಾಡಿಗೆ ಎನ್‌ಎಸ್‌ಎಸ್ ತಂಡ ಭೇಟಿ ನೀಡಿತು. ಓದಲು, ಬರೆಯಲು ಬರದೆ ಹೆಬ್ಬೆಟ್ಟು ಸಹಿ ಮಾಡುತ್ತಿದ್ದ ವರಿಗೆ ಕೈಹಿಡಿದು ಸಹಿ ಹಾಕಲು ಕಲಿಸಿದರು. ಅಕ್ಷರದ ಮಹತ್ವವನ್ನು ತಿಳಿಸಿದರು. ಮನೆಮನೆಗೆ ತೆÀರಳಿ ವ್ಯಾಕ್ಸಿನ್ ಪಡೆದಿದ್ದಾರೆಯೇ? ಆಧಾರ್ ಕಾರ್ಡ್, ರೇಶನ್ ಕಾರ್ಡ್, ಗುರುತಿನ ಚೀಟಿ ಹೊಂದಿದ್ದಾರೆಯೇ?, ಪ್ರತಿ ಯೊಬ್ಬರಿಗೂ ಆಶ್ರಯ ಮನೆ ಇವೆಯೇ? ಹಾಡಿಯ ಜನತೆಗೆ ಯಾವ ಮೂಲಭೂತ ಸೌಲಭ್ಯದ ಕೊರತೆ ಇದೆ ಎಂಬೆಲ್ಲ ವಿಷಯಗಳ ಬಗ್ಗೆ ಸಮೀಕ್ಷೆ ನಡೆಸಿ ಮಾಹಿತಿ ಕಲೆಹಾಕಿದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಂಬAಧಪಟ್ಟ ಅಧಿಕಾರಿಗಳಿಗೆ ಹಾಡಿಯ ಸಮಸ್ಯೆಗಳ ಬಗ್ಗೆ ಗಮನಹರಿಸಿ ಬಗ್ಗೆಹರಿಸುವಲ್ಲಿ ಶ್ರಮವಹಿಸಲು ಸಿದ್ಧತೆ ನಡೆಸಿದ್ದಾರೆ.

ತಿತಿಮತಿ ಮರೂರು ಸರಕಾರಿ ಗಿರಿಜನರ ಆಶ್ರಮ ಶಾಲೆಯಲ್ಲಿ ಮಕ್ಕಳೊಂದಿಗೆ ಮನೋರಂಜನಾ ಆಟಗಳನ್ನು ಆಡಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಮಕ್ಕ ಳೊಂದಿಗೆ ಕೇಕ್ ಕತ್ತರಿಸಿ ಹೊಸವರ್ಷ ಆಚರಿಸಿದರು. ಕಾವೇರಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಕಾವೇರಪ್ಪ ಎಂ.ಬಿ. ಅವರ ಮಾರ್ಗ ದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶ್ರಮ ಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ್ ಕುಮಾರ್ ಅಧ್ಯಕ್ಷತೆ ವಹಿಸಿ ಕಾವೇರಿ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಸೇವಾಕಾರ್ಯ ಕ್ರಮ ವನ್ನು ಪ್ರಶಂಸಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀಧರ್ ಅವರು ರಾಷ್ಟಿçÃಯ ಸೇವಾ ಯೋಜನೆಯ ಮಹತ್ವ ಹಾಗೂ ಉದ್ದೇಶದ ಬಗ್ಗೆ ಮಾತನಾಡಿ, ವಿದ್ಯಾರ್ಥಿಗಳು ತಮ್ಮನ್ನು ಸಮಾಜ ಸೇವೆಗೆ ತೊಡಗಿಸಿ ಕೊಳ್ಳಬೇಕೆಂದು ಉತ್ತೇಜಿಸಿದರು. ಎನ್‌ಎಸ್‌ಎಸ್ ಘಟಕದ ಶಿಕ್ಷಕ ಮಂದೆಯAಡ ವನಿತ್‌ಕುಮಾರ್ ವಿದ್ಯಾರ್ಥಿಗಳಿಗೆ ಒಂದೆರಡು ಹಿತ ವಚನವನ್ನು ನುಡಿದರು. ಎನ್‌ಎಸ್ ಎಸ್‌ನ ಸ್ವಯಂ ಸೇವಕಿಯರು ಗೀತೆ ಹಾಗೂ ನೃತ್ಯ ಪ್ರದರ್ಶಿಸಿದರು. ಕ್ರೀಡೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ನೀಡಲಾ ಯಿತು. ಸ್ವಾಮಿ ವಿವೇಕನಂದರ ಚಿಕಾಗೋ ಉಪನ್ಯಾಸಗಳು ಎಂಬ ಪುಸ್ತಕವನ್ನು ವಿದ್ಯಾರ್ಥಿಗಳಿಗಳಿಗೆ ನೀಡಲಾಯಿತು. ಘಟಕದ ನಾಯಕ ರಜಿತ್ ನಿರೂಪಿಸಿದರು. ಎನ್‌ಎಸ್‌ಎಸ್ ಘಟಕದ ಶಿಕ್ಷಕ ಮಂದೆಯAಡ ವನಿತ್‌ಕುಮಾರ್ ಹಾಗೂ ಮಚ್ಚಮಾಡ ರೀತಾ ಕಾರ್ಯ ಕ್ರಮದ ಮೇಲ್ವಿ ಚಾರಣೆ ಯನ್ನು ವಹಿಸಿ ಉತ್ತಮ ರೀತಿಯಲ್ಲಿ ನಡೆಯಲು ಕಾರಣಕರ್ತರಾದರು.

- ಪುತ್ತರಿರ ಕರುಣ್ ಕಾಳಯ್ಯ