ಮಡಿಕೇರಿ, ಜ. ೯: ಪಾಡಿಯ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿ ಚೀಲವಿರಿಸಿ ಹೊರ ಹೋದ ಘಟನೆಗೆ ಸಂಬAಧಿಸಿದAತೆ ಆತನ ತಂದೆ ಕ್ಷೇತ್ರಕ್ಕೆ ಆಗಮಿಸಿ ಕ್ಷಮೆಯಾಚಿಸಿ ರೂ. ೧೦೧ ತಪ್ಪಡ್ಕ (ತಪ್ಪು ಕಾಣಿಕೆ) ಸಲ್ಲಿಸಿದರು.
ದೇವತಕ್ಕರಾದ ಪರದಂಡ ಕುಟುಂಬಸ್ಥರ ಕರೆ ಹಿನ್ನೆಲೆಯಲ್ಲಿ ಆಗಮಿಸಿದ ನಾಪೋಕ್ಲು ಹಳೇ ತಾಲೂಕಿನ ನಿವಾಸಿಯಾಗಿg
ÀÄವ ಮಾನಸಿಕ ಅಸ್ವಸ್ಥನ ತಂದೆ ಕ್ಷಮೆ ಕೋರಿ ಪ್ರಾರ್ಥನೆ ಸಲ್ಲಿಸಿದರು.
ಪರದಂಡ ಕುಟುಂಬದ ಹಿರಿಯರಾದ ಡಾಲಿ ಪ್ರಾರ್ಥನೆ ಸಲ್ಲಿಸಿ, ಯುವಕನ ವಿಷಯದಲ್ಲಿ ಜಾಗ್ರತೆ ವಹಿಸುವಂತೆ, ಇಂತಹ ಕ್ಷೇತ್ರಕ್ಕೆ ಬರುವ ಸಂದರ್ಭ ಒಬ್ಬಂಟಿಯಾಗಿ ಬಿಡದಂತೆ ಸಲಹೆ ನೀಡಿ ಆತ ಶೀಘ್ರ ಗುಣಮುಖ ನಾಗುವಂತೆ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭ ದೇವಾಲಯದ ದೇವತಕ್ಕ ಕುಟುಂಬಸ್ಥರಾದ ಪರದಂಡ ಸದಾ ನಾಣಯ್ಯ, ಮುದ್ದು ಸುಬ್ರಮಣಿ, ಶಂಭು ನಂಜಪ್ಪ, ಜಘನ ಕುಞಪ್ಪ, ಲಾಲಾ ನರೇಂದ್ರ, ಪ್ರಹ್ಲಾದ, ಸುಮನ್, ಸುಬ್ರಮಣಿ, ಸುರೇಶ್, ಜೋಯಪ್ಪ, ದೇವಾಲಯ ಸಮಿತಿ ಮಾಜಿ ಉಪಾಧ್ಯಕ್ಷ ಬಾಚಮಂಡ ಲವಚಿಣ್ಣಪ್ಪ, ಪಾರುಪಾತ್ಯೆಗಾರರಾದ ಪರದಂಡ ಪ್ರಿನ್ಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.